ಗಜಚರ್ಮ, ಕುಷ್ಟ ಮತ್ತು ಸಮಸ್ತ ಚರ್ಮ ವ್ಯಾಧಿಗಳ ನಿವಾರಣೆಗೆ ಎಡಮುರಿ ಸಸ್ಯವನ್ನು ಈ ರೀತಿ ಬಳಸ ಬೇಕು..!!

0
2226

ಎಡಮುರಿ ಎಂಬ ಪುಟ್ಟ ಸಸಿ ಹಸಿರಾಗಿದ್ದು ಅಗಲವಾಗಿರುತ್ತದೆ. ನರಗಳು ಸ್ಪಷ್ಟವಾಗಿ ಕಾಣುತ್ತದೆ, ಎಲೆಗಳು ಅಂಚು ಚಿತ್ರಾಕಾರವಾಗಿ ಕಲಾಛ್ಚೇದವಾಗಿರುತ್ತದೆ, ಹೂವು ಎಲೆ ಮತ್ತು ಕಾಂಡದ ಮದ್ಯದಿಂದ ಹೊರಡುತ್ತದೆ, ಪುಷ್ಪ ಪಾತ್ರೆ ದೊಡ್ಡದಾಗಿ ನಾಲ್ಕು ಅಥವಾ ಐದು ದಳಗಳಿಂದ ಕೂಡಿರುತ್ತದೆ, ಹೂವಿನ ದಳಗಳು ಕೆಳಗೆ ಬಾಗಿ ಮಧ್ಯೆ ಕೇಸರಿಗಳಿದ್ದು ಸುಂದರವಾಗಿರುತ್ತದೆ, ದೊಡ್ದ ಪುಷ್ಪಪಾತ್ರೆಯಿಂದ ಸ್ವಲ್ಪ ಉದ್ದವಾದ ತೊಟ್ಟಿನಿಂದ ಕಾಯಿ ಇಳಿಬಿದ್ದಿರುವುದು, ಇದು ಹಗ್ಗವನ್ನು ಎಡಗಡೆಯಿಂದ ತಿರುವಿದಂತೆ ಕಾಣುವುತ್ತದೆ, ಆದ್ದರಿಂದ ಇದನ್ನು ಎಡಮುರಿ ಎಂದು ಕರೆಯುತ್ತಾರೆ. ಇದರ ಕಾಯಿ ಮತ್ತು ಎಲೆಗಳನ್ನು ಔಷಧೋಪಚಾರಕ್ಕೆ ಉಪಯೋಗಿಸುತ್ತಾರೆ.

ಗಜಚರ್ಮ, ಕುಷ್ಟ ಮತ್ತು ಸಮಸ್ತ ಚರ್ಮ ವ್ಯಾಧಿಗಳ ನಿವಾರಣೆಗೆ : ಎಡಮುರಿಯಬೇರು, ತೆಂಗಿನ ಬೇರು, ಬೇವಿನ ತೊಗಟೆಯ ಒಳನಾರು, ಹುಣಸೆನಾರು, ಬ್ಯಾಲದನಾರು ಇವುಗಳನ್ನೆಲ್ಲ ಚೆನ್ನಾಗಿ ಜಜ್ಜಿ, ಎಳ್ಳೆಣ್ಣೆ ಹಾಕಿ ಒಣಗಿಸಿ ಶುದ್ಧಮಡಕೆಯಲ್ಲಿ ಹಾಕಿ ತೈಲವನ್ನು ಮಾಡುತ್ತಾರೆ. ಇದನ್ನು ಚರ್ಮವ್ಯಾಧಿಗೆ ಹಚ್ಚುತ್ತಾರೆ.

ಕುಷ್ಟ, ಅಸಾಧ್ಯವಾದ ಕಜ್ಜಿ ತುರಿ ನಿವಾರಣೆಗೆ : ಎಡಮುರಿ ಗಿಡದ ಬೇರನ್ನು ಚೆನ್ನಾಗಿ ಒಣಗಿಸಿ ನಯವಾಗಿ ಚೂರ್ಣ ಎಳ್ಳೆಣ್ಣೆಯಲ್ಲಿ ಕಲಸಿ ನಾಲ್ಕು ವಾರ ಹಚ್ಚುತ್ತಾರೆ. ಎಲ್ಲಾ ವಿಧವಾದ ಚರ್ಮವ್ಯಾಧಿಗಳು ಗುಣಮುಖವಾಗುವುದು.

ಕಠಿಣವಾದ ಶೋಭೆಯ ನಿವಾರಣೆಗೆ : ಅಳಲೆಕಾಯಿ ಸಿಪ್ಪೆ, ದೇವದಾರು, ಶುಂಠಿ, ನೆಗ್ಗಿಲು, ಕೊಮ್ಮೆಬೇರು ಮತ್ತು ಎಡಮುರಿ ಇವೆಲ್ಲವನ್ನು ಸಮತೂಕದಲ್ಲಿ ತೆಗೆದುಕೊಂಡು ನುಣ್ಣಗೆ ಚೂರ್ಣಿಸಿಕೊಳ್ಳಬೇಕು. ೨ಗ್ರಾಂ ನಷ್ಟು ಚೂರ್ಣವನ್ನು ಒಂದುಬಟ್ಟಲು ನೀರಿಗೆ ಹಾಕಿ ಕಷಾಯಮಾಡಿ ಆರಿದ ಮೇಲೆ ದಿನಕ್ಕೊಮ್ಮೆಯಂತೆ ೭ ದಿವಸ ಕುಡಿಯುವುದು.

ಅಜೀರ್ಣ, ಅಗ್ನಿಮಾಂಧ್ಯ ಶಮನಕ್ಕೆ : ಎಡಮುರಿಯ ಬೇರನ್ನು ಚೆನ್ನಾಗಿ ಒಣಗಿಸಿ ನಯವಾದ ಚೂರ್ಣ ಮಾಡಿ, ಅಜೀರ್ಣದ ಸಮಯದಲ್ಲಿ ಚೂರ್ಣ ಸೇವಿಸುವುದು.

ಕಿವಿ ನೋವು ಮತ್ತು ಹುಣ್ಣಿನ ನಿವಾರಣೆಗೆ : ಎಡಮುರಿಯ ಕಾಯಿಯನ್ನು ನುಣ್ಣಗೆ ಅರೆದು ಹರಳೆಣ್ಣೆಯಲ್ಲಿ ಬಿಸಿ ಮಾಡಿ ಒಂದೆರಡು ತೊಟ್ಟು ಕಿವಿಗೆ ಬಿಡಬೇಕು.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here