ಕಷ್ಟದಲ್ಲಿದ್ದವರಿಗೆ ಉಚಿತ ಸಲಹೆಗಳನ್ನೂ ನೀಡುವ ಮುನ್ನ ಇದನ್ನು ಒಮ್ಮೆ ಓದಿ..!

0
5146

ಭಾವನಾತ್ಮಕತೆ : ಪ್ರಾಚೀನ ಕಾಲದಿಂದಲೂ ಉಚಿತ ಸಲಹೆಗಳನ್ನೂ ನೀಡುವುದನ್ನು ಯಾರು ಇಷ್ಟಪಡುವುದಿಲ್ಲ, ಆದರೆ ಕೆಲವು ಮಂದಿ ಸುಖಾಸುಮ್ಮನೆ ಸಲಹೆಗಳನ್ನು ನೀಡುತ್ತಾ ಹೋಗುತ್ತಿರುತ್ತಾರೆ, ಇಂತಹ ವ್ಯಕ್ತಿಗಳನ್ನು ಜನರು ಗೇಲಿ ಮಾಡುತ್ತಾರೆ ಎನ್ನುವುದು ಮಾತ್ರ ಸತ್ಯ, ಬಹಳ ಹಿಂದಿನಿಂದಲೂ ಈ ರೀತಿ ನಡೆದುಕೊಂಡು ಬರುತ್ತಿರುವುದು ಮಾತ್ರ ವಿಪರ್ಯಾಸ, ಅವಶ್ಯಕತೆ ಇರುವ ವ್ಯಕ್ತಿಗಳು ಕೇಳಿದರೆ ಮಾತ್ರ ಸಲಹೆ ನೀಡುವುದು ಸೂಕ್ತ, ನಮ್ಮ ಕಾಲಿಗೆ ಚಪ್ಪಲಿ ಬೇರೆ ವ್ಯಕ್ತಿಗಳಿಗೆ ತೊಡಿಸಿದರೆ ಅವನು ಆರಾಮಾಗಿ ನಡೆಯಲು ಆಗುತ್ತದೆ ಎಂದು ನೋಡಿಕೊಳ್ಳಬೇಕು ಅಲ್ಲವೇ.? ನಮ್ಮ ಭಾವನೆಗಳನ್ನು ಬೇರೆ ವ್ಯಕ್ತಿಗಳು ತುಟಿಕ್ ಪಿಟಿಕ್ ಎನ್ನದೆ ಅಂತೆ ಒಪ್ಪಿಕೊಳ್ಳಬೇಕು, ಎಂದು ಬಯಸುವುದು ಸರಿಯೆ ? ಇದು ಕಲಿಗಾಲ, ಧರ್ಮ ಎನ್ನುವುದು ಒಂದು ಕಾಲಿನಲ್ಲಿ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ, ಜನರು ಯಾರು, ಯಾವ ವ್ಯಕ್ತಿಯನ್ನು ಗೌರವದಿಂದ ನಡೆಸಿಕೊಳ್ಳುವುದು ಇಲ್ಲ,ಅಂತಹ ಸಮಯದಲ್ಲಿ ನಾವು ಉಚಿತ ಸಲಹೆಗಳನ್ನು ನೀಡಿ ಅವಮಾನ ಪಡುವುದು ಸರಿಯಲ್ಲ.

ವಾಸ್ತವಿಕತೆ : ಉಪ್ಪು ಮತ್ತು ಸಲಹೆ ಕೇಳಿದರೆ ಮಾತ್ರ ಕೊಡಬೇಕು, ಎಂದು ಹಿರಿಯರು ಉಪದೇಶ ಮಾಡುತ್ತಾರೆ, ಆ ವಿಷಯದಲ್ಲಿ ಸತ್ಯ ಇರುವುದು ಮಾತ್ರ ನಿಜ, ಉಪ್ಪು ಜಾಸ್ತಿಯಾಗುವುದರಿಂದ ಅಡುಗೆ ಕೆಟ್ಟು ಆರೋಗ್ಯಕ್ಕೆ ಧಕ್ಕೆ ಉಂಟಾಗುತ್ತದೆ, ಅದೇ ರೀತಿ ಅತಿಯಾದ ಉಚಿತ ಸಲಹೆ, ಸ್ನೇಹ ಸಂಬಂಧಗಳನ್ನು ಹಾಳು ಮಾಡುವುದು ಖಚಿತ, ಹೀಗಾಗಿ ನಾವು ನಮ್ಮ ಇತಿ ಮಿತಿಯಲ್ಲಿ ಇರುವುದು ಒಳ್ಳೆಯದು.

ವೈಚಾರಿಕತೆ : ಪ್ರತಿಯೊಂದು ವಿಷಯವು ನಾವು ತರ್ಕಬದ್ಧವಾಗಿ ಯೋಚಿಸುವುದು ಸರಿಯಾದ ಮಾರ್ಗ, ನಮಗೆ ಯಾರಾದರೂ ಏನಾದರೂ ಬುದ್ಧಿವಾದ, ಉಚಿತ ಸಲಹೆ ನೀಡುವುದನ್ನು ಮಾಡಿದರೆ ನಮಗೆ ಕೋಪ ಬರುತ್ತದೆ ಅಲ್ಲವೇ ? ಆದರೆ ನಾವು ಮಾತ್ರ ಬೇರೆ ವ್ಯಕ್ತಿಗಳ ಕಿವಿ ಹರಿದು ಹೋಗುವಂತೆ ಸಲಹೆ ನೀಡುತ್ತಲೇ ಹೋಗುತ್ತೇವೆ, ನಮ್ಮ ವರ್ತನೆ ಬಗ್ಗೆ ನಾವೇ ವಿಶ್ಲೇಷಣೆ ಮಾಡಿಕೊಳ್ಳುವುದು ಸೂಕ್ತ, ಆಗ ಜಗತ್ತು ಮತ್ತು ನಾವು ಸಂತೋಷದಿಂದ ಇರಬಹುದು.

ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.

LEAVE A REPLY

Please enter your comment!
Please enter your name here