ನಮ್ಮ ಧರ್ಮದಲ್ಲಿ ಹೇಳಿರುವಂತೆ ದುಷ್ಟ ಗುಣಗಳನ್ನು ಹೊಂದಿರುವ ಸ್ತ್ರೀಯರನ್ನು ಕಂಡು ಹಿಡಿಯುವುದು ಹೇಗೆ..?!

0
15868

ಭಾವನಾತ್ಮಕತೆ : ನಮ್ಮ ಪರಂಪರೆಯಲ್ಲಿ ಉತ್ತಮ ಗುಣ ಹೊಂದಿರುವ ಸ್ತ್ರೀ ಪದ್ಮಿನಿ ಜಾತಿಗೆ ಸೇರಿದವಳು ಎಂದು ಕರೆಯಲಾಗುತ್ತದೆ, ಅವಳ ಗುಣ ವರ್ತನೆ ನಡೆ ನುಡಿ ಹೇಗಿರುತ್ತದೆ ಎಂದರೆ ಕೊಳದಲ್ಲಿ ಹಂಸ ನಲಿದಾಡುತ್ತಿದ್ದರೆ ಹೇಗೆ ನೋಡಲು ಚಂದ ವೋ, ಅವಳ ಗುಣದಿಂದ ಬಂಧು-ಬಾಂಧವರು ಮನೆಯ ವ್ಯಕ್ತಿಗಳು ಸಂತೋಷಪಡುತ್ತಾರೆ, ಅದೇ ರೀತಿಯಲ್ಲಿ ದುಷ್ಟ ವರ್ತನೆ, ಪ್ರವೃತ್ತಿ ಉಳ್ಳ ಹೆಂಗಸರು ಅಸುರಿ ಎಂದರೆ ರಾಕ್ಷಸಿ, ಪಿಶಾಚಿ ಎನ್ನುವ ಗುಂಪಿಗೆ ಸೇರಿಸಿ ಕರೆಯಲಾಗುವುದು, ಹೆಂಗಸರು ಒಳ್ಳೆಯ ಗುಣ ಎನ್ನುವ ಸ್ವಭಾವಕ್ಕೆ ವಿರುದ್ಧವಾಗಿ ಇರುತ್ತಾರೆ, ಸಮಾಜಕ್ಕೆ ಹಾನಿ, ಮಾರಕ ಹೆಂಗಸರು.

ಗಂಡನ ಮನೆಗೆ ಮಹಾ ಪಾತಕಗಳನ್ನು ಸೃಷ್ಟಿಮಾಡಿ, ಕೊನೆಗೆ ತಾವು ಮರಣಿಸಿದ ನಂತರ ನರಕಕ್ಕೆ ಹೋಗುತ್ತಾರೆ, ದುಷ್ಟ ಸ್ತ್ರೀ ಮನಸ್ಸು ಚಂಚಲ, ಕಲಹ, ಕೋಪದಿಂದ ಕೂಡಿರುತ್ತದೆ, ಆದರೆ ದುಷ್ಟ ಸ್ತ್ರೀ ತನ್ನ ಸ್ವಭಾವ ಬದಲಿಸಿಕೊಳ್ಳಲು ಕಷ್ಟವಿಲ್ಲ, ಬದುಕಿರುವ ಸಮಯದಲ್ಲಿ ತಮ್ಮ ಸ್ವಭಾವ ಬದಲಿಸಿಕೊಂಡು ಧರ್ಮಮಾರ್ಗದಲ್ಲಿ ನಡೆಯುವುದರಿಂದ ಜೀವನದಲ್ಲಿ ಮುಕ್ತಿ ಹಾಗೂ ಮೋಕ್ಷ ಕಾಣಬಹುದು, ಅಂತಹ ಬದಲಾವಣೆ ಹೆಣ್ಣುಗಳಲ್ಲಿ ಕಂಡು ಬಂದರೆ ಸಾಕು, ಹಿಂದೆ ಮಾಡಿರುವ ಪಾಪಗಳು ಸಹ ನಶಿಸಿ ಹೋಗುತ್ತದೆ, ಮುಂದೆ ಮರಣದ ನಂತರ ಸ್ವರ್ಗಪ್ರಾಪ್ತಿ ಆಗುತ್ತದೆ.

ವಾಸ್ತವಿಕತೆ : ಹೆಣ್ಣು ಎಂದರೆ ಸೃಷ್ಟಿಯಲ್ಲಿ ಮಾಧುರ್ಯ ತುಂಬಿರುವಂತೆ ಇರಬೇಕು ಎನ್ನುವುದು ವಾಡಿಕೆ, ಅವಳು ನಿಜವಾಗಿಯೂ ಒಳ್ಳೆ ಹೆಣ್ಣು, ದುಷ್ಟ ಎಂದು ಕರೆಸಿಕೊಳ್ಳುವ ಹೆಣ್ಣು ಮನೆ, ಸಮಾಜಕ್ಕೆ ಮಾರಕ, ಹಾನಿಕಾರಕ ಹೀಗಾಗಿ ಅಂತಹ ಹೆಣ್ಣುಗಳಿಂದ ಒಳ್ಳೆಯತನ ನಿರೀಕ್ಷೆ ಮಾಡುವುದರಿಂದ ಯಾವ ಉಪಯೋಗವೂ ಇಲ್ಲ, ಹೆಣ್ಣು ಸಂಸಾರದ ಕಣ್ಣು ಎನ್ನುವಂತಹ ಸ್ತ್ರೀ ಸಮಾಜಕ್ಕೆ ಉಪಯುಕ್ತ.

ವೈಚಾರಿಕತೆ : ಒಳ್ಳೆಯತನ, ಕೆಟ್ಟ ಗುಣ ಎನ್ನುವುದು ಸಮಾಜದಲ್ಲಿ ಕಾಣಿಸುತ್ತದೆ, ಹೀಗಾಗಿ ಯಾರೇ ಆಗಲಿ ಒಳ್ಳೆಯತನ ಮೈಗೂಡಿಸಿಕೊಂಡರೆ ಬದುಕು ಅದ್ಭುತವಾಗಿರುತ್ತದೆ, ಹೀಗಾಗಿ ಗಂಡು ಅಥವಾ ಹೆಣ್ಣು ಎನ್ನುವ ವ್ಯತ್ಯಾಸ ಭೇದ ಬಿಟ್ಟು ಒಳ್ಳೆಯತನಕ್ಕೆ ಸ್ವಾಗತ ಹೇಳಿ, ಸಮಾಜ ಉತ್ತಮವಾಗಿ ಇರುವ ರೀತಿ ನೋಡಿಕೊಳ್ಳುವುದು ನಮ್ಮ ಧರ್ಮ.

LEAVE A REPLY

Please enter your comment!
Please enter your name here