ನರೇಂದ್ರ ಮೋದಿಯವರಿಗೆ ಪತ್ರ ಬರೆದ ಮನಮೋಹನ್ ಸಿಂಗ್! ಆ ಪತ್ರದಲ್ಲಿ ಏನಿದೆ ನೋಡಿ.

0
4776

ಪ್ರಧಾನಿ ನರೇಂದ್ರ ಮೋದಿಯವರಿಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಮನಮೋಹನ್ ಸಿಂಗ್ ಅವರು ನೀವು ಯಾವುದಾದರೂ ಹೇಳಿಕೆ ನೀಡುವ ಮುನ್ನ ಅದರ ಪರಿಣಾಮವನ್ನು ಅರಿಯಬೇಕು, ನಂತರವೇ ಈ ರೀತಿಯ ಹೇಳಿಕೆಗಳನ್ನು ನೀಡಿ ಎಂದು ಹೇಳಿದ್ದಾರೆ, ನರೇಂದ್ರಮೋದಿಯವರು ಸರ್ವಪಕ್ಷ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು ಅಲ್ಲಿ ದೇಶದ ಯೋಧರು ಗಡಿಯಲ್ಲಿ ಸಂಪೂರ್ಣ ಸಮರ್ಥರಾಗಿದ್ದು, ಇದುವರೆಗೂ ದೇಶದಲ್ಲಿ ಯಾರೂ ಪ್ರವೇಶ ಮಾಡಲು ಬಿಟ್ಟಿಲ್ಲ ಹಾಗೂ ನಮ್ಮ ಅಧಿಕಾರಿಗಳನ್ನು ಚೀನಾ ಅಪಹರಿಸಿಲ್ಲ ಎಂಬ ಹೇಳಿಕೆ ನೀಡಿದ್ದರು, ಇದೇ ವಿಚಾರವಾಗಿಯೇ ಪ್ರತಿಕ್ರಿಯಿಸಿರುವ ಮನಮೋಹನ್ ಸಿಂಗ್ ಅವರು ಸೈನಿಕರ ಕುಟುಂಬಕ್ಕೆ ನ್ಯಾಯ ಒದಗಿಸಿ ಬೆಂಬಲ ನೀಡಬೇಕು ಜನರ ನಂಬಿಕೆಯನ್ನು ಹಾಳು ಮಾಡಿ ಕೂರುವುದು ಒಂದು ಐತಿಹಾಸಿಕ ದ್ರೋಹ ಎಂಬ ಹೇಳಿಕೆ ನೀಡಿದ್ದಾರೆ, ಅಷ್ಟೇ ಅಲ್ಲದೆ ಮೋದಿ ಅವರಿಗೆ ಸುದೀರ್ಘ ಪತ್ರವೊಂದನ್ನು ಬರೆದಿದ್ದು ಆ ಪತ್ರದಲ್ಲಿ ಏನಿದೆ ಮುಂದೆ ಓದಿ.

ಜೂನ್ 15 ರಿಂದ 16ರವರೆಗೆ ಲಡಾಕ್ ಗುಲ್ವಾನ್ ಕಣಿವೆಯಲ್ಲಿ 20 ವೀರಯೋಧರನ್ನು ನಾವು ಕಳೆದುಕೊಂಡಿದ್ದು ದೇಶಕ್ಕಾಗಿ ಶೌರ್ಯ ತ್ಯಾಗ ಮತ್ತು ಕರ್ತವ್ಯಗಳ ಮೂಲಕ ಶ್ರಮಿಸಿ ಕೊನೆಯದಾಗಿ ತಮ್ಮ ಉಸಿರು ಚೆಲ್ಲಿದ್ದಾರೆ, ಈ ಕಾರಣಕ್ಕಾಗಿ ನಾವು ಅವರ ಕುಟುಂಬದವರಿಗೆ ಕೃತಜ್ಞತೆ ಹೇಳಿ ಅವರ ಬೆಂಬಲಕ್ಕೆ ನಿಲ್ಲಬೇಕಿದೆ ಅವರ ತ್ಯಾಗವನ್ನು ವ್ಯರ್ಥ ಮಾಡಲು ಬಿಡಬಾರದು, ಐತಿಹಾಸಿಕ ಕ್ಷಣದಲ್ಲಿ ಈ ಕ್ಷಣ ನಾವು ನಿಂತಿದ್ದೇವೆ, ಇಂದು ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳು ನಮ್ಮ ದೇಶದ ಯುವ ಪೀಳಿಗೆಯ ನಮ್ಮನ್ನು ಹೇಗೆ ಗ್ರಹಿಸುತ್ತಾರೆ ಎಂಬುದರ ಬಗ್ಗೆ ಪ್ರಭಾವ ಬೀರಲಿದೆ, ದೇಶವನ್ನು ಮುನ್ನಡೆಸುವ ಕರ್ತವ್ಯ ಪ್ರಧಾನಿಯವರದ್ದು, ಪ್ರಜಾಪ್ರಭುತ್ವದಲ್ಲಿ ಪ್ರಧಾನಿಯವರಿಗೆ ಅಂತಹ ಅಧಿಕಾರವಿದೆ, ದೇಶದ ಭದ್ರತೆಯನ್ನು ಅದರ ಕಾರ್ಯತಂತ್ರವನ್ನು ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಮೇಲೆ ಪ್ರಧಾನಿ ಹಾಗೂ ಅವರ ಕಚೇರಿಯಿಂದ ಬರುವಂತಹ ಯಾವುದೇ ಹೇಳಿಕೆಗಳು ಬೀರುವ ಪರಿಣಾಮಗಳ ಬಗ್ಗೆ ಯಾವಾಗಲೂ ಗಮನಹರಿಸಬೇಕು.

ಇಲ್ಲಿಯವರೆಗೂ ಅನೇಕ ಬಾರಿ ದಾಳಿ ಮಾಡುವ ಮೂಲಕ ಚೀನಾ ನಿರ್ಭಯವಾಗಿ ಮತ್ತು ಕಾನೂನು ಬಾಹಿರವಾಗಿ ಭಾರತದ ಭೂ ಪ್ರದೇಶವಾದ ಗಲ್ವಾನ್ ಕಣಿವೆ ಹಾಗೂ ಪಂಗೊಂಗ್ ತ್ಸೋ ಸರೋವರವನ್ನು ಅತಿಕ್ರಮವಾಗಿ ಪ್ರವೇಶ ಮಾಡುತ್ತಿದೆ, ಚೀನಾ ದೇಶದ ಬೆದರಿಕೆಗಳಿಗೆ ನಾವು ಹೆದರುವ ಅಗತ್ಯವಿಲ್ಲ, ಹಾಗೂ ದೇಶದ ಪ್ರಾದೇಶಿಕ ಸಮಗ್ರತೆ ಯೊಂದಿಗೆ ರಾಜಿ ಮಾಡಿಕೊಳ್ಳಲು ಅನುಮತಿಸುವುದಿಲ್ಲ. ಹಾಗಾಗಿ ರಾಜತಾಂತ್ರಿಕತೆ ಮತ್ತು ಕೆಲವು ನಿರ್ಣಾಯಕ ನಾಯಕತ್ವಕ್ಕೆ ತಪ್ಪು ಮಾಹಿತಿ ನೀಡುವುದು ಸರಿಯಲ್ಲ ಎಂದು ಸರ್ಕಾರಕ್ಕೆ ನೆನಪಿಸುತ್ತಾ, ಸುಳ್ಳು ಹೇಳಿಕೆ ಮೂಲಕ ಸತ್ಯವನ್ನು ಮುಚ್ಚುವುದು ಸರಿಯಲ್ಲ, ಹುತಾತ್ಮರ ಆಗಿರುವ ಕರ್ನಲ್ ಬಿ ಸಂತೋಷ್ ಬಾಬು ಮತ್ತು ಸೈನಿಕರ ತ್ಯಾಗವನ್ನು ನೆನಪಿನಲ್ಲಿಟ್ಟುಕೊಂಡು ಪ್ರಾದೇಶಿಕ ಸಮಗ್ರತೆಯನ್ನು ದೃಢವಾಗಿ ಸಮರ್ಥಿಸಿಕೊಂಡು ನ್ಯಾಯವನ್ನು ಕೊಡಿಸಬೇಕು, ಸರ್ಕಾರ ಈ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಒತ್ತಾಯಿಸಿ ದೇಶದ ಜನರ ನಂಬಿಕೆಯನ್ನು ಕಡೆಗಣಿಸಬಾರದು ಇದು ಐತಿಹಾಸಿಕ ದ್ರೋಹವಾಗಿದೆ ಎಂದು ಬರೆದಿದ್ದಾರೆ.

LEAVE A REPLY

Please enter your comment!
Please enter your name here