ಧ್ರುವ ಸರ್ಜಾರ ಪೊಗರಿಗೆ ರಶ್ಮಿಕಾಳೇ ಎದುರಾಳಿ ಆಗುವಳು !

0
2013

ನಟ ಧ್ರುವ ಸರ್ಜಾ ಈಗಷ್ಟೇ ಮದುವೆಯಗಿದ್ದಾರೆ.ಸತತವಾಗಿ ಹಿಟ್ ಮೇಲೆ ಹಿಟ್ ಕೊಟ್ಟಿರುವ ಸರ್ಜಾ ಸದ್ಯ ಪೊಗರು ಚಿತ್ರದ ಮೇಲೆ ಭಾರೀ ನಿರೀಕ್ಷೆ ಇಟ್ಟಿದ್ದಾರೆ. ಪೊಗರು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಏಕಕಾಲದಲ್ಲಿ ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷಗಳಲ್ಲಿ ರಿಲೀಸ್ ಆಗುತ್ತಿದೆ. ಕನ್ನಡದ ಯುವ ಪ್ರತಿಭಾನ್ವಿತ ನಿರ್ದೇಶಕ ನಂದಕಿಶೋರ್ ಚಿತ್ರಕ್ಕೆ ಕತೆ ,ಚಿತ್ರಕತೆ ಬರೆದು ನಿರ್ದೇಶಿಸಿದ್ದಾರೆ. ಈಗಾಗಾಲೇ ಇವರ ನಿರ್ದೇಶನದ ವಿಕ್ಟರಿ ಮತ್ತು ರನ್ನ ಚಿತ್ರಗಳು ಬ್ಲಾಕ್ ಬಸ್ಟರ್ ಆಗಿವೆ. ಆಗಾಗಿ ನಿರೀಕ್ಷೆ ಹೆಚ್ಚೇ ಇದೆ. ಧ್ರುವ ಸರ್ಜಾರಿಗೆ ಇದು ನಾಲ್ಕನೇ ಚಿತ್ರವಾಗಿದೆ. ಮಾಡಿದ ಮೂರೂ ಚಿತ್ರಗಳೂ ಸುಪರ್ ಹಿಟ್ ಆಗಿದ್ದು ಕನ್ನಡದ ನಿರ್ಮಾಪಕರ ಪಾಲಿಗೆ ಇವರು ಲಕ್ಕಿ ಸ್ಟಾರ್ ಆಗಿದ್ದಾರೆ. ಧ್ರುವ ಈ ಚಿತ್ರಕ್ಕಾಗಿ ವಿಶೇಷ ತಯಾರಿ ನಡೆಸಿದ್ದಾರೆ. ದೇಶವನ್ನು ಹುರಿಗೊಳಿಸಿ ಸಿಕ್ಸ್ ಪ್ಯಾಕ್ ಮಾಡಿದ್ದಾರೆ. ಚಿತ್ರದ ಪಾತ್ರ ಸ್ವಲ್ಪ ರಗಡ್ ಆಗಿರುವುದರಿಂದ ಅದಕ್ಕೆ ತಕ್ಕಂತೆ ಒರಟಾದ ಗಡ್ಡವನ್ನು ಬಿಟ್ಟಿದ್ದಾರೆ. ಇವರು ಸಿನಿಮಾಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೆಂದರೆ ಮದುಮಗನಾಗಿದ್ದಾಗಲೂ ತಮ್ಮ ಗಡ್ಡವನ್ನು ತೆಗೆಯದೇ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆದಷ್ಟು ಬೇಗ ಅಭಿಮಾನಿಗಳಿಗೆ ಚಿತ್ರವನ್ನು ತೋರಿಸಬೇಕು ಎಂದು ಚಿತ್ರದ ಡಬ್ಬಿಂಗ್ ಕೆಲಸವನ್ನು ಮುಗಿಸಿಕೊಟ್ಟಿದ್ದಾರೆ. ಚಿತ್ರದ ಡೈಲಾಗ್ ಟ್ರೆಲರ್ ಬಿಡುಗಡೆ ಆಗಿ ಸಿಕ್ಕಾಪಟ್ಟೆ ವೀವ್ಸ್ ಬಂದಿದೆ. ಅತಿ ವೇಗವಾಗಿ ವೀವ್ಸ್ ಗಳಿಸಿದ ಟ್ರೇಲರ್ ಎಂದು ರೆಕಾರ್ಡ್ ಮಾಡಿದೆ.

ಚಿತ್ರದ ನಾಯಕಿಯಾಗಿ ಕನ್ನಡದ ಕಿರಿಕ್ ಪಾರ್ಟಿ ಖ್ಯಾತಿಯ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ರಕ್ಷಿತ್ ಶೆಟ್ಟಿ ಜೊತೆ ಎಂಗೇಜ್’ಮೆಂಟ್ ಕ್ಯಾನ್ಸಲ್ ಆದ ನಂತರ ತೆಲುಗು, ತಮಿಳಿನಲ್ಲಿ ಬಿಜಿ ಇರುವ ರಶ್ಮಿಕಾ ತೆಲುಗಿನಲ್ಲಿ ಭಾರೀ ಬೇಡಿಕೆಯ ನಟಿ. ವಿಜಯ್ ದೇವರಕೊಂಡ‌ನ ಜೊತೆಗೆ ಎರಡು ಚಿತ್ರಗಳಲ್ಲಿ ಅಭಿನಯಿಸಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡ ರಶ್ಮಿಕಾಳಿಗೆ ಮಹೇಶ್ ಬಾಬು ಜೊತೆ ನಟಿಸಲು ಉತ್ತಮ ಅವಕಾಶ ದೊರೆತಿದೆ. ಸರಿಲೇರು ನೀಕೆವ್ವರು ಚಿತ್ರದಲ್ಲಿ ನಟಿಸಿರುವ ರಶ್ಮಿಕಾಳಿಗೆ ಒಂದೇ ದಿನದಲ್ಲಿ ತಾನು ಅಭಿನಯಿಸಿರುವ ಎರಡು ಚಿತ್ರಗಳು ಬಿಡುಗಡೆ ಆಗುವ ಅದೃಷ್ಟ ದೊರೆತಿದೆ. ಮುಂದಿನ ಜನವರಿ 17 ರಂದು ಎರಡೂ ಚಿತ್ರಗಳು ಬಿಡುಗಡೆ ಆಗುತ್ತಿವೆ.

ಇದು ಒಂದು ರೀತಿಯಲ್ಲಿ ಅದೃಷ್ಟವೂ ಹೌದು. ಇನ್ನೊಂದು ರೀತಿಯಲ್ಲಿ ಸಂಕಟವೂ ಹೌದು. ಏಕೆಂದರೆ ಆಕೆ ನಟಿಸಿರುವ ಪೊಗರು ಮತ್ತು ಸರಿಲೇರು ನೀಕೆವ್ವರು ಚಿತ್ರಗಳು ಎಲ್ಲಾ ಭಾಷೆಗಳಲ್ಲಿ ಬಿಡುಗಡೆ ಆಗುತ್ತಿವೆ. ಆಗ ಆಕೆ ಯಾವುದಕ್ಕೆ ಪ್ರಚಾರ ಕೊಡಬೇಕು ? ತೆಲುಗಿಗಾ ? ಅಥವಾ ತನ್ನ ಮಾತೃ ಭಾಷೆಗಾ ? ಇಕ್ಕಟಿನಲ್ಲಿ ಸಿಲುಕಿರುವ ರಶ್ಮಿಕಾ ಯಾವುದೇ ಚಿತ್ರಕ್ಕೆ ಮೊದಲು ಅದರ ಬಗ್ಗೆ ಟ್ವೀಟ್ ಮಾಡಿದರೂ ಟ್ರೋಲ್’ಗೆ ಗುರಿಯಾಗುವುದು ಖಂಡಿತ. ಮೊದಲೇ ಕೆಲವೊಂದು ವಿವಾದಗಳಿಗೆ ಗುರಿಯಾಗಿರುವ ಕ್ರೇಜಿ ಕ್ವೀನ್ ರಶ್ಮಿಕಾಳಿಗೆ ಎರಡೂ ಚಿತ್ರಗಳು ಗೆದ್ದರೆ ಇಡೀ ದಕ್ಷಿಣ ಭಾರತದಲ್ಲಿ ನಂಬರ್ ಒನ್ ಆಗುವ ಅವಕಾಶ ದೊರೆಯುತ್ತದೆ. ಸರಿಲೇರು ನಿಕೆವ್ವರು ಚಿತ್ರದಲ್ಲಿ ಮಹೇಶ್ ಬಾಬು ಸೈನಿಕನ ಪಾತ್ರದಲ್ಲಿ ನಟಿಸಿದ್ದು ಟೀಸರ್ ಈಗಾಗಲೇ ಉತ್ತಮ ರೆಸ್ಪಾನ್ಸ್ ಪಡೆದಿದೆ. ರಶ್ಮಿಕಾ ಇದರಲ್ಲಿ ಹಳ್ಳಿ ಹುಡುಗಿಯ ಮುಗ್ದೆಯ ಪಾತ್ರದಲ್ಲಿ ಮಿಂಚಿದ್ದಾರೆ. ಚಿತ್ರವನ್ನು ಅನಿಲ್ ರವಿಪುಡಿ ನಿರ್ದೇಶನ ಮಾಡಿದ್ದು ದೇವಿಶ್ರೀ ಪ್ರಸಾದ್ ಸಂಗೀತ ಇದೆ. ಕನ್ನಡದ ಪೊಗರು ಚಿತ್ರದಲ್ಲಿ ರಶ್ಮಿಕಾ ಕಾಲೇಜು ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜನವರಿ 17 ರಂದು ಸಂಕ್ರಾಂತಿಯಂದು ಫಲಿತಾಂಶ ಗೊತ್ತಾಗುತ್ತದೆ.

LEAVE A REPLY

Please enter your comment!
Please enter your name here