ಹೌದು ಹುಲಿಯಾ ಎಂದು ಹೇಳಿದವನು‌ ಇಂದು ಬಿಜೆಪಿ ಪರ ಬ್ಯಾಟಿಂಗ್ !

0
2558

ಈ ವರ್ಷ ವಾಟ್ಸಪ್ ಹಾಗೂ ಫೇಸ್ಬುಕ್ನಲ್ಲಿ ನಿಖಿಲ್ ಎಲ್ಲಿದಿಯಪ್ಪ, ಯಾಕಣ್ಣ, ಹಾಗೂ ಇನ್ನಿತರ ಡೈಲಾಗು ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಇತ್ತೀಚೆಗೆ ಉಪಚುನಾವಣೆಗೆ ಕಾಂಗ್ರೆಸ್ ಪ್ರಚಾರಸಭೆಯಲ್ಲಿ ಸಿದ್ದರಾಮಯ್ಯರವರು ಇಂದಿರಾ ಗಾಂಧಿಯವರ ಬಗ್ಗೆ ಮಾತನಾಡುತ್ತಿರುವಾಗ ಇದಕ್ಕೆ ಪ್ರತಿಕ್ರಿಯಿಸಿದ ಬೆಳಗಾವಿ ಮೂಲದ ಪೀರಪ್ಪ ಕಟ್ಟಿಮನಿ ಹೌದು ಹುಲಿಯ ಎಂಬ ಡೈಲಾಗ್ ಮೂಲಕ ರಾತ್ರೋರಾತ್ರಿ ಫೇಮಸ್ ಆದರು. ಇನ್ನು ಸಾಮಾಜಿಕ ಜಾಲತಾಣದಲ್ಲಿ ಆಗಲಿ ಟಿವಿಯಲ್ಲಿ ಆಗಲಿ ಎಲ್ಲಕಡೆ ಡೈಲಾಗ್ಸ್ ಸಿಕ್ಕಾಪಟ್ಟೆ ಫೇಮಸ್ಸು.ಇನ್ನು ಹುಲಿಯ ಟಿ-ಶರ್ಟ್ ಕೂಡ ಮಾರುಕಟ್ಟೆಗೆ ಎಂಟ್ರಿ ಆಗಿದೆ.

ಬೆಳಗಾವಿಯಲ್ಲಿ ಸಿದ್ದ ರಾಮಯ್ಯನವರು ಭಾಷಣ ಮಾಡುತ್ತಿದ್ದರು. ಅವರ ಅಪಾರ ಅಭಿಮಾನಿಯಾದ ವ್ಯಕ್ತಿ ಅವರು ಇಂದಿರಾ ಗಾಂಧಿ ಬಗ್ಗೆ ಮಾತನಾಡುತ್ತಿದ್ದಾಗ ಎಕ್ಸೈಟ್ ಆಗಿ ಆ ಪದ ಬಳಸುತ್ತಾರೆ. ಸಿದ್ದರಾಮಯ್ಯನವರು ಇಂದಿರಾ ಗಾಂಧಿ ಈ ದೇಶಕ್ಕೋಸ್ಕರ ಪ್ರಾಣ ತೆತ್ತರು. ಎನ್ನುವಾಗ ಅಲ್ಲೇ ಮುಂದೆ ಕೂತಿದ್ದ ವ್ಯಕ್ತಿ ‘ಹೌದು ಹುಲಿಯಾ’ ಎನ್ನುತ್ತಾರೆ. ಇದು ನ್ಯೂಸ್ ಚಾನಲ್’ಗಳಲ್ಲಿ ಬಂದು ಆ ಪದ ಸಕ್ಕತ್ ವೈರಲ್ ಆಗುತ್ತೆ. ಈ ಡೈಲಾಗ್ ಡಿಜೆಯಲ್ಲೂ ಬಳಸುಕೊಳ್ಳಲಾಗಿದೆ. ಹೌದು ಹುಲಿಯಾ ಟಿ ಶರ್ಟ್’ಗಳು ಮಾರುಕಟ್ಟೆಗೆ ಬಂದಿದೆ.

ಸಾಮಾನ್ಯವಾಗಿ ಕೆಲವು ಜನರು ಯಾವ ಪಕ್ಷಕ್ಕೂ ಸೇರಿರುವುದಿಲ್ಲ. ಅವರಿಗೆ ಯಾವ ಆಸಕ್ತಿಯೂ ಇರುವುದಿಲ್ಲ. ಇನ್ನೂ ಕುಡುಕರಿಗಂತೂ ಅದೂ ದೂರದ ಮಾತು. ಯಾರು ಹಣ ಕೊಟ್ಟು ಪ್ರಚಾರದ ಸಭೆಗೆ ಕರೆದುಕೊಂಡು ಹೋಗುತ್ತಾರೋ ಅವರಿಗೆ ಜೈ ಅನ್ನುತ್ತಾರೆ. ಹೌದು ಹುಲಿಯಾ ಅಂದವನ ಕತೆಯೂ ಇದೆ. ಅನಕ್ಷರಸ್ಥನಾದ ಈತ ಸೆಲೆಬ್ರಿಟಿ ಆದರೂ ಅದರ ಮಹತ್ವ ತಿಳಿಯಲಿಲ್ಲ. ಈಗ ಬಿಜೆಪಿ ಗೆದ್ದಿತೆಂದು ಅದರ ಹಿಂದೆ ಹೋಗಿದ್ದಾನೆಂದರೆ ಆತ ನಿಜವಾಗಿಯೂ ಬಿಜೆಪಿಯವನಲ್ಲ. ಕೇವಲ ಯಾವ ಪಕ್ಷಕ್ಕೂ ಸೇರದ ಮತದಾರ ಅಷ್ಟೇ.

ಇದೆ ವೇಳೆ ಇಂದು ಬಿಜೆಪಿ ಉಪಚುನಾವಣೆಯಲ್ಲಿ ಭರ್ಜರಿ ಗೆಲವು ಸಾಧಿಸಿದೆ. ಈ ಸಂಭ್ರಾಮಾರಣೆ ಎಲ್ಲಾ ಕಡೆ ಮನೆ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಗರು ಕಾಂಗ್ರೇಸ್ ಹಾಗೂ ಜೆಡಿಎಸ್ ಪಕ್ಷವನ್ನು ಹಿಗ್ಗಮುಗ್ಗಾ ಟ್ರೋಲ್ ಮಾಡುತಿದ್ದಾರೆ. ಅಷ್ಟಕ್ಕೂ ವೈರಲ್ ಆದ ಈ ಹೊಸ ವಿಡಿಯೊದಲ್ಲಿ ಏನಿದೆ ? ಹೌದು ಹುಲಿಯಾ ಖ್ಯಾತಿಯ ಪಿರಪ್ಪ ಬಿಜೆಪಿ ಪರ ಹೇಳಿದ್ದೇನು ? ಸಂಪೂರ್ಣ ವಿಡಿಯೊ ಕೆಳಗಿದೆ‌ ನೋಡಿ.

LEAVE A REPLY

Please enter your comment!
Please enter your name here