ಗ್ರೀನ್ ಟೀ ಆರೋಗ್ಯ ಅಂಶಗಳನ್ನ ಕೇಳಿದ್ರೆ ಶಾಕ್ ಆಗೋದು ಖಂಡಿತ ನೀವು..!!

0
2284

ಮನುಷ್ಯರಿಗೆ ಹಲವು ಬಗೆಯ ರೋಗಗಳು ಬಾಧಿಸುವುದು ಸಾಮಾನ್ಯವಾಗಿದೆ ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡುತ್ತಿರುವುದಾದರೂ ಜೀವನ ಶೈಲಿಯಿಂದಾಗಿ ರೋಗರುಜಿನಗಳೂ ನಾನಾ ರೀತಿಯಲ್ಲಿ ಕಾಟಕೊಡಲಿವೆ.

ಸಾಮಾನ್ಯವಾಗಿ ದಿನನಿತ್ಯದ ಒತ್ತಡದ ಬದುಕಿನಲ್ಲಿ ಆಯಾಸವೆನಿಸಿದಾಗ ಕಾಫಿ ಅಥವಾ ಚಹಾ ಸೇವನೆಗೆ ಹಾತೊರೆಯುತ್ತಾರೆ ಆದರೆ ಇತ್ತೀಚೆಗೆ ಹಾಲು ಬೆರೆಸದ ಬ್ಲಾಕ್ ಟೀ, ಗ್ರೀನ್ ಟೀ ಗಳತ್ತ ಜನರ ಒಲವು ಹೆಚ್ಚಾಗತೊಡಗಿದೆ ಇದು ಆರೋಗ್ಯಕರ ಹಾಗೂ ಚೈತನ್ಯ ಭರಿಸುವ ಪೇಯವೆಂದು ಜನಪ್ರಿಯವಾಗುತ್ತಿದೆ.

ಮಾಮೂಲಿ ಚಹದಷ್ಟು ರುಚಿಕರವಾಗಿರದಿದ್ದರೂ ಗ್ರೀನ್ ಟೀನಲ್ಲಿ ಆರೋಗ್ಯಕ್ಕೆ ಪೂರಕವಾದ ಅಂಶಗಳಿವೆ, ಕ್ಯಾನ್ಸರ್ ನಂತರ ಮಾರಕ ರೋಗದೊಂದಿಗೆ ಹೋರಾಡುವ ಸಾರ್ಮರ್ಥ್ಯದ ಜತೆಗೆ ದೇಹದ ತೂಕ ಇಳಿಸಲು ಗ್ರೀನ್ ಟೀ ಸಹಕಾರಿ ಎಂದು ಹೇಳಲಾಗುತ್ತಿದೆ ಧೂಮಪಾನ ಮಾಡುವವರ ಆರೋಗ್ಯ ಸುಧಾರಣೆಯಲ್ಲಿ ಗಮನದಲ್ಲಿಟ್ಟುಕೊಂಡು ಮಾರುಕಟ್ಟೆಗೆ ಪರಿಚಯಿಸಿದ ಪೇಯವೇ ಗ್ರೀನ್ ಟೀ ಮೊದಲು ಚೀನಾದವರು ಗ್ರೀನ್ ಟೀಯಲ್ಲಿರುವ ಔಷಧೀಯ ಗುಣಗಳನ್ನು ಮೊದಲು ಪತ್ತೆ ಹಚ್ಚಿದ್ದರು, ನಂತರ ಏಷ್ಯಾದ ರಾಷ್ಟ್ರಗಳಿಗೂ ಪರಿಚಯಿಸಿದರು ಇದರಲ್ಲಿವೆ ಎನ್ನಲಾದ ಆಂಟಿ ಆಕ್ಸಿಡೆಂಟ್‌ಗಳಿಂದ ಹೆಚ್ಚು ಜನಪ್ರಿಯವಾಗಿದೆ.

ಗ್ರೀನ್ ಟೀಯಲ್ಲಿರುವ ಕ್ಯಾಟಿಚಿನ್ ಎಂಬ ಆಂಟಿ ಆಕ್ಸಿಡೆಂಟ್ ದೇಹದಲ್ಲಿರುವ ಬ್ಯಾಕ್ಟೀರಿಯಾ ಹಾಗೂ ವೈರಸ್ಸುಗಳನ್ನು ನಿರ್ಮೂಲನೆ ಮಾಡಿ ದೇಹವನ್ನು ರೋಗಗಳಿಂದ ಸಂರಕ್ಷಣೆ ಮಾಡುತ್ತಾರೆ.

ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಿ ಮಧುಮೇಹದಿಂದ ರಕ್ಷಣೆ ಒದಗಿಸುತ್ತದೆ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್‌ನಲ್ಲಿ ಕರಗಿಸುವ ಸಾರ್ಮರ್ಥ್ಯ ಇದಕ್ಕಿದೆ ಕ್ಯಾನ್ಸರ್‌ಗೆ ಕಾರಣವಾಗುವ ಜೀವಕೋಶಗಳನ್ನು ನಾಶಪಡಿಸುತ್ತದೆ ಗ್ರೀನ್ ಟೀ ಖಿನ್ನತೆ ದೂರಮಾಡಲು ಸಹಕಾರಿ ಇದರಲ್ಲಿರುವ ಅಮೀನೋ ಆಸಿಡ್ ಖಿನ್ನತೆಗೆ ರಾಮಬಾಣವಾಗಿದೆಯಂತೆ.

ಆದ್ದರಿಂದಲೇ ಮಾರುಕಟ್ಟೆಯಲ್ಲಿ ಇದಕ್ಕೆ ಭಾರೀ ಬೇಡಿಕೆ ಉಂಟಾಗಿದೆ ಎಚ್ಚರತೂಕ ಇಳಿಸಿಕೊಳ್ಳುವ ಆಶಯದಿಂದ ಗ್ರೀನ್ ಟೀಯನ್ನು ಬೆಳಗಿನ ವೇಳೆ ಖಾಲಿ ಹೊಟ್ಟೆಗೆ ಸೇವಿಸಬಾರದು ಡೀ ಹೈಡ್ರೆಷನ್ ಆಗುವ ಸಂಭವವಿರುತ್ತದೆ ಊಟದ ಜೊತೆಗೆ ಗ್ರೀನ್ ಟೀ ಸೇವಿಸಲೆ ಬಾರದು ಅದರಿಂದ ಆಹಾರದಲ್ಲಿನ ಪೌಷ್ಠಿಕಾಂಶಗಳು ಸರಿಯಾಗಿ ಹೀರಲ್ಪಡುವುದಿಲ್ಲ ಹಾಲಿನ ಉತ್ಪನ್ನಗಳ ಜೊತೆಗೆ ಗ್ರೀನ್ ಟೀ ಸೇವಿಸಬಾರದು ಇದರಿಂದ ಚಹದ ಪರಿಣಾಮ ಕಡಿಮೆಯಾಗುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here