ಬಿಗ್ಬಾಸ್ ಕನ್ನಡ ಕುತೂಹಲದ ಘಟ್ಟ ತಲುಪುತ್ತಿದೆ. ಯಾರು ವಿನ್ ಆಗುತ್ತಾರೆ ಎಂಬುದನ್ನು ಊಹಿಸಬಹುದಾದರೂ ಕೊನೆಯ ಗಳಿಗೆಯಲ್ಲಿ ಏನಾಗುತ್ತದೋ ಬಲ್ಲವರಾರು ?
ಬಿಗ್ ಬಾಸ್ ಈ ಸಲ ಕೇವಲ ಸೆಲೆಬ್ರಿಟಿಗಳನ್ನೆ ಮನೆಯಲ್ಲಿ ಇಟ್ಟುಕೊಂಡಿದ್ದು ಆಶ್ಚರ್ಯವೇನೂ ಅಲ್ಲ. ಕಾರಣ ಕಳೆದ ವರ್ಷ ಪ್ರಯೋಗ ಮಾಡಿ ಕೈ ಸುಟ್ಟುಕೊಂಡಿದ್ದ ಅನುಭವ ಮತ್ತೆ ಆಗಬಾರದು ಎಂಬುದಾಗಿತ್ತು. ಏಕೆಂದರೆ ಕಳೆದ ವರ್ಷ ಸಾಮನ್ಯ ಜನರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಅವರಿಂದ ಯಾವುದೇ ಮನರಂಜನೆ ಸಿಗದೆ ಟಿಆರ್ ಪಿ ಕೆಳಗೆ ಬಿದ್ದಿತ್ತು. ಅದಕ್ಕೆ ಈ ಸಲ ಮನರಂಜನೆ ನೀಡುವವರನ್ನೇ ಆಯ್ಕೆ ಮಾಡಲಾಯಿತು.
ಈ ವಾರ ಆರ್ ಜೆ ಪೃಥ್ವಿ ಬಿಗ್ಬಾಸ್ ಮನೆಯಿಂದ ಹೊರ ಹೋಗಿದ್ದಾರೆ. ಅವರು ಹೊರಹೋಗಬಹುದು ಎಂಬ ಕಲ್ಪನೆ ಕೂಡ ಯಾರಿಗೂ ಇರಲಿಲ್ಲ . ಹೆಚ್ಚಿನ ವೀಕ್ಷಕರ ಅಭಿಪ್ರಾಯ ಭೂಮಿಕಾ ಶೆಟ್ಟಿ ಹೋಗಬೇಕಾಗಿತ್ತು ಎಂದು. ಆದರೆ ಸ್ವಲ್ಪ ಓಟಿನಲ್ಲೇ ಅವರು ಉಳಿದುಕೊಂಡಿದ್ದಾರೆ.
ಇನ್ನ ಪೃಥ್ವಿಗೆ ಸುಮಾರು ಒಂದು ಲಕ್ಷದ ಓಟುಗಳು ಬಿದ್ದಿದ್ದಾವೆ. ಹಾಗಾದರೆ ಇನ್ನುಳಿದ ಸ್ಪರ್ಧಿಗಳಿಗೆ ಎಷ್ಟು ಓಟುಗಳು ಬಿದ್ದಿರಬಹುದು ಎಂದು ಊಹಿಸಿ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಪೃಥ್ವಿ ಹೋದ ಮೇಲೆ ಅವರಿಗೆ ಕ್ಲೋಸ್ ಫ್ರೆಂಡ್ ಆಗಿದ್ದ ರಕ್ಷಾ ಮತ್ತು ಪ್ರಿಯಾಂಕ ಅತ್ತಿದ್ದಾರೆ.
ಇನ್ನೂ ಸುದೀಪ್ ಜೊತೆ ವಾರದ ಎಪಿಸೋಡ್’ನಲ್ಲಿ ಮಾತನಾಡಿದ ಪೃಥ್ವಿ ನನಗೆ ಬಿಗ್ಬಾಸ್ ಹೊಸ ತರಹದ ಅನುಭವ ಆಗಿತ್ತು. ಇಲ್ಲಿ ನನಗೆ ಹೊಸ ಹೊಸ ಸ್ನೇಹಿತರು ದೊರೆತರು. ಅವರ ಬಿಹೆವಿಯರ್ ನನಗೆ ಗೊತ್ತಾಯಿತು. ನನಗೆ ಇಲ್ಲಿ ಯಾವುದೇ ಕೊರತೆ ಇರಲಿಲ್ಲ. ಆದರೆ ಊಟ ತಿಂಡಿಯ ವಿಷಯದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆಗಿದೆ. ಸ್ವಲ್ಪ ತೂಕ ಕಡಿಮೆ ಆಗಿದ್ದೇನೆ ಅಂದಕೊಂಡಿದ್ದೇನೆ ಎಂದು ಹೇಳಿದರು.
ಇನ್ನೂ ಈ ಸೀಜನ್ ನಲ್ಲಿ ಯಾರು ಗೆಲ್ಲುವುದು ಎಂದು ಕೇಳಿದರೆ ಕುರಿ ಪ್ರತಾಪ್ , ಶೈನ್ ಶೆಟ್ಟಿ ಹಾಗೂ ವಾಸುಕಿ ವೈಭವ್ ಮೇಲೆ ಪೈಪೋಟಿ ಇದೆ. ಅವರಲ್ಲಿ ಒಬ್ಬರು ಗೆಲ್ಲಬಹುದು ಎಂದಿದ್ದಾರೆ. ಕಳೆದ ಸೀಜನ’ನಲ್ಲಿ ಚಂದನ್ ಶೆಟ್ಟಿ ಗೆದ್ದಿದ್ದರು. ಗೆದ್ದ ಸ್ಪರ್ಧಿಗೆ 50 ಲಕ್ಷ ದುಡ್ಡಿನ ಜೊತೆಗೆ ಬಿಗ್ಬಾಸ್ ಟ್ರೋಫಿ ದೊರೆಯಲಿದೆ. ಇದರೊಂದಿಗೆ ಅವರಿಗೆ ಮುಂದಿನ ಸಿನಿ ಬದುಕಿಗೆ ಸಹಾಯ ಮಾಡುತ್ತದೆ.