ಭಾರತೀಯರು ಗೋವು ಮತ್ತು ಗೊಮೂತ್ರಕ್ಕೆ ಯಾಕೆ ಪ್ರಾಮುಖ್ಯತೆ ನೀಡುತ್ತಾರೆ ಗೊತ್ತಾ ?

0
5237

ಗೋಮೂತ್ರ : ಗೋಮೂತ್ರದಲ್ಲಿ ಅದ್ಭುತವಾದ ಔಷಧೀಯ ಗುಣಗಳಿವೆ, ಸುಮಾರು 148 ರೋಗಗಳಿಗೆ ಗೋಮೂತ್ರವು ಔಷಧಿಯಂತೆ ಕೆಲಸ ಮಾಡುತ್ತದೆ, ಕ್ಯಾನ್ಸರ್‌ನಿಂದ ಪ್ರಾರಂಭಿಸಿ ಅಜೀರ್ಣ, ಹೊಟ್ಟೆ ನೋವು, ಚರ್ಮ ರೋಗಗಳವರೆಗೆ ಗೋಮೂತ್ರದಿಂದ ವಾಸಿಯಾಗುವ ರೋಗಗಳ ಪಟ್ಟಿ ಬೆಳೆಯುತ್ತದೆ, ಗೋಮೂತ್ರವು ಕ್ಯಾನ್ಸರ್ ವಿರುದ್ಧ ಪರಿಣಾಮಕಾರಿ ಎಂಬ ಸತ್ಯವು ಇತ್ತೀಚೆಗೆ ಪ್ರಚಾರಕ್ಕೆ ಬಂದಿರುವುದಾದರೂ ಇದರ ಉಲ್ಲೇಖವು ವೇದಗಳಲ್ಲಿ ಬಂದಿದೆ, ಶರೀರದ ಮೇಲೆ ಗಂಟುಗಳು ಆದಲ್ಲಿ ಗೋಮೂತ್ರದ ನೊರೆಯಿಂದ ತೇವ ಭರಿತವಾಗಿಸುವುದು, ಗೋಮೂತ್ರವನ್ನು ಅದರ ಮೇಲೆ ಧಾರೆಯಂತೆ ಸುರಿಯುವುದು, ಗೋಮೂತ್ರದಿಂದ ತೊಳೆಯುವುದು ಮೊದಲಾದ ಚಿಕಿತ್ಸಾ ವಿಧಾನವನ್ನು ಅಥರ್ವವೇದದಲ್ಲಿ ಹೇಳಲಾಗಿದೆ, ರಸೌಷಧಿಗಳ ಶೋಧನೆಗೂ ಗೋಮೂತ್ರವನ್ನು ಬಳಸುತ್ತಾರೆ.

ಗೋಮಯ : ಹಸುವಿನ ಸೆಗಣಿಯು ಕ್ರಿಮಿನಾಶಕ ಗುಣಗಳನ್ನು ಹೊಂದಿರುವುದರಿಂದ ಮೊದಲು ಜನರು ನೆಲವನ್ನು ಸಾರಿಸಲು ಉಪಯೋಗಿಸುತ್ತಿದ್ದರು. ಈಗಲೂ ಹಳ್ಳಿಗಳಲ್ಲಿ ಜನರು ಇದನ್ನು ಬಳಸುತ್ತಾರೆ. ಬೆರಣಿಯ ಭಸ್ಮವು ಚಳಿ, ಜ್ವರ ಇತ್ಯಾದಿಗಳಲ್ಲಿ ಮೈ ಶಾಖವನ್ನು ಕಾಪಾಡಲು ಸಹಾಯ ಮಾಡುತ್ತದೆ.

ಗೋಕ್ಷೀರ (ಹಸುವಿನ ಹಾಲು) : ಎಳೆಯ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಉಪಯುಕ್ತ. ಹಾಲು ವಾತ, ಪಿತ್ಥ, ಕಫಗಳೆಂಬ ಮೂರು ದೋಷಗಳನ್ನು ಹೋಗಲಾಡಿಸುತ್ತದೆ.

ದಧಿ (ಮೊಸರು) : ಹಸುವಿನ ಮೊಸರು ಶರೀರಕ್ಕೆ ಬಲಕರ. ವಾತ ಹರವೂ ದೇಹಪುಷ್ಟಿಕರವೂ ಆಗಿದೆ. ಮೊಸರಿಗೆ ಸಕ್ಕರೆ ಹಾಕಿ ಸೇವಿಸಿದರೆ ರಕ್ತದೋಷ ಹಾಗೂ ಪಿತ್ತದೋಷಗಳನ್ನು ಹೋಗಲಾಡಿಸಿ ಮೈ ಉರಿಯನ್ನು ಕಡಿಮೆ ಮಾಡುತ್ತದೆ.

ನವನೀತ (ಬೆಣ್ಣೆ) : ತದ್‌ಹಿತಂ ಬಾಲಕೇ ವೃದ್ಧೇ ವಿಶೇಷಾದಮೃತಂ ಶಿಶೋಃ| ತಾಜಾ ಬೆಣ್ಣೆಯು ಮಕ್ಕಳಿಗೂ ಮತ್ತು ವೃದ್ಧರಿಗೂ ಹಿತವಾಗಿರುತ್ತದೆ. ಎಳೆ ಮಕ್ಕಳಿಗೆ ಅಮೃತದಂತೆ. ಅಗ್ನಿವರ್ಧಕ, ವಾತಪಿತ್ತಹರ, ಧಾತುಕ್ಷಯ, ಅತಿಸಾರ ಹಾಗೂ ದಮ್ಮುಗಳನ್ನು ನಿವಾರಿಸುತ್ತದೆ.

ಘೃತ (ತುಪ್ಪ) : ತುಪ್ಪವು ವಾತಪಿತ್ತಹರ, ವಿಷಹರ, ಕಣ್ಣಿನ ರೋಗಗಳನ್ನು ಹೋಗಲಾಡಿಸಿ ದೃಷ್ಟಿಯನ್ನು ಚುರುಕುಗೊಳಿಸುತ್ತದೆ. ಖಾಯಿಲೆಗಳಲ್ಲಿ ಅರಿಶಿನ ಹಾಕಿ ಕಾಯಿಸಿದ ತುಪ್ಪವು ಉಪಯುಕ್ತವಾಗಿದೆ.

ಗೋರೋಜನ : ಗೋವಿನ ಪಿತ್ತಕೋಶದಲ್ಲಿ ಉತ್ಪತ್ತಿಯಾಗುವ ಗೋರೋಜನವು ಸರ್ವಾಂಗೀಣ ಆರೋಗ್ಯವರ್ಧಕ. ಇದು ದುಷ್ಟಶಕ್ತಿಗಳ ತೊಂದರೆಯನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ.

ಗೊರಸು : ಹಸುವಿನ ಗೊರಸು ಧೂಪಗಳಲ್ಲಿ ಕ್ರಿಮಿಹರ ಮತ್ತು ರಕ್ಷೋಘ್ನವಾಗಿ ಬಳಸಲ್ಪಡುತ್ತದೆ.

LEAVE A REPLY

Please enter your comment!
Please enter your name here