ಕೇವಲ ಐದು ನಿಮಿಷದಲ್ಲಿ ನಿಮ್ಮ ಮೊಬೈಲ್ ನಲ್ಲಿ ಪಡೆಯಬಹುದು ಜಾತಿ, ಆದಾಯ ಪ್ರಮಾಣ ಪತ್ರ..!!

0
5831

ಜಾತಿ ಆದಾಯ ಪ್ರಮಾಣ ಪತ್ರವನ್ನು ಪಡೆಯಬೇಕೆಂದರೆ ಸರಕಾರಿ ಕಚೇರಿಗಳಲ್ಲಿ ಎಷ್ಟು ಮಾಡಬೇಕು ಎಂಬುದು ನಿಮಗೂ ಸಹ ಚೆನ್ನಾಗಿ ತಿಳಿದಿದೆ, ಎಷ್ಟು ಬಾರಿ ಸರ್ಕಾರಿ ಕಚೇರಿಗೆ ಮೆಟ್ಟಿಲನ್ನು ಹತ್ತಿ ಇಳಿದರೂ ಕೆಲಸ ಮಾತ್ರ ಬೇಗ ನಡೆಯುವುದಿಲ್ಲ ಸಾಲದಕ್ಕೆ ಕೆಲವೊಮ್ಮೆ ಲಂಚವನ್ನು ಕೊಡಬೇಕಾಗುತ್ತದೆ, ಇಷ್ಟಕ್ಕೆ ಮುಗಿಯುವುದಿಲ್ಲ ಅಲ್ಲಿರುವ ಅಧಿಕಾರಿಗಳ ನಿರ್ಲಕ್ಷ ದರ್ಪ ಕಿರುಕುಳಕ್ಕೆ ಮಾನಸಿಕವಾಗಿ ಕುಗ್ಗಿ ಬಿಡುತ್ತೇವೆ.

ಕಾಲ ಬದಲಾಗಿದೆ ಈಗ ನೀವು ಜಾತಿ ಆದಾಯ ಪ್ರಮಾಣ ಪತ್ರವನ್ನು ಪಡೆಯಲು ಅಷ್ಟೊಂದು ಪಜೀತಿ ಪಡಬೇಕಾಗಿಲ್ಲ, ನಿಮ್ಮ ಮೊಬೈಲ್ ಮುಖಾಂತರವೇ ಆನ್ಲೈನ್ ನಲ್ಲಿ ಕೇವಲ 20 ರೂಪಾಯಿಗಳನ್ನು ಪಾವತಿಸಿ, ಐದರಿಂದ ಹತ್ತು ನಿಮಿಷದೊಳಗೆ ನಿಮ್ಮ ಜಾತಿ, ಆದಾಯದ ಪ್ರಮಾಣಪತ್ರವನ್ನು ಪಡೆಯಬಹುದು ಅದರ ಸಂಪೂರ್ಣ ಮಾಹಿತಿ ನೀಡಿದ್ದೇವೆ, ಒಮ್ಮೆ ಸಂಪೂರ್ಣವಾಗಿ ಓದಿ.

ನಾಡ ಕಚೇರಿ ವೆಬ್ಸೈಟ್ ಗೆ ಭೇಟಿ ನೀಡಿ, ಆನ್ಲೈನ್ ಅರ್ಜಿ ಸ್ವೀಕೃತಿ ವಿಭಾಗದಲ್ಲಿನ ಆನ್ಲೈನ್ ಅರ್ಜಿ ಆಪ್ಷನ್ ಆಯ್ಕೆ ಮಾಡಿ, ಅಧಿಕೃತ ವೆಬ್ಸೈಟ್ ಗೆ ಪ್ರವೇಶಿಸಿ.

ಮುಂದಿನ ಹಂತದಲ್ಲಿ ಜಾತಿ ಅಥವಾ ಆದಾಯ ಪ್ರಮಾಣಪತ್ರ ಪಡೆಯಬೇಕೆಂದರೆ ನ್ಯೂ ರಿಕ್ವೆಸ್ಟ್ (New Request) ವಿಧಾನ ಆಯ್ಕೆ ಮಾಡಬೇಕು.

ನ್ಯೂ ರಿಕ್ವೆಸ್ಟ್ (New Request) ಮೇಲೆ ಕ್ಲಿಕ್ ಮಾಡಿದ ನಂತರ ಹಲವಾರು ಸೇವೆಗಳ ಪಟ್ಟಿ ತೆರೆದುಕೊಳ್ಳುತ್ತದೆ. ಅದರಲ್ಲಿ ನಿಮಗೆ ಬೇಕಾದ ಸೇವೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ನಿಮಗೆ ಆದಾಯ ಪತ್ರ ಬೇಕಿದ್ದರೆ Income Certificate ಮೇಲೆ ಕ್ಲಿಕ್ ಮಾಡಿ.

ಆದಾಯ ಪತ್ರಕ್ಕಾಗಿ ಆಪ್ಷನ್ ಆಯ್ಕೆ ಮಾಡಿದ ನಂತರ ಪ್ರಮಾಣಪತ್ರ ಬೇಕಿರುವುದು ಯಾವ ಭಾಷೆಯಲ್ಲಿ (certificate required) ಎಂಬ ಆಪ್ಷನ್ ತೆರೆದುಕೊಳ್ಳುತ್ತದೆ. ನಿಮಗೆ ಕನ್ನಡದಲ್ಲಿ ಬೇಕಿದ್ದರೆ Kannada ಮೇಲೆ ಕ್ಲಿಕ್ ಮಾಡಿ. ಕೆಳಗಡೆ ಕೆಂಪು ಅಕ್ಷರಗಳಲ್ಲಿ ನೀಡಿರುವ ಆದಾಯ ಪ್ರಮಾಣಪತ್ರವನ್ನು ಆಯ್ಕೆ ಮಾಡಿ.

ಈ ಹಂತದಲ್ಲಿ ನಿಮ್ಮ ವೈಯಕ್ತಿಕ ವಿವರಗಳಾದ ಪಡಿತರ ಸಂಖ್ಯೆ, ಆಧಾರ್ ಸಂಖ್ಯೆ, ವಿಳಾಸ ಇತ್ಯಾದಿಗಳನ್ನು ಭರ್ತಿ ಮಾಡಿ ಪ್ರೋಸೀಡ್ ಕೊಡಬೇಕು.

ಕೊನೆಯಲ್ಲಿ ಆನ್ಲೈನ್ ಪೇಮೆಂಟ್ ಪೇಜ್ ತೆರೆಯುತ್ತದೆ. ಕೇವಲ ರೂ. 20 ಪಾವತಿಸಿ, ಮೊಬೈಲ್ ಅಥವಾ ಆನ್ಲೈನ್ ಮೂಲಕ 5-10 ನಿಮಿಷಗಳಲ್ಲಿಯೇ ಜಾತಿ/ಆದಾಯ ಪ್ರಮಾಣ ಪತ್ರಗಳನ್ನು ಪಡೆಯಬಹುದು.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here