ಈ ಸ್ಮಾರ್ಟ್ ಫೋನ್ ದುನಿಯಾದಲ್ಲಿ ಎಲ್ಲರು ಈಗ ಸ್ಮಾರ್ಟ್ ಫೋನ್ ನ ಅಡಿಯಾಳುಗಳಾಗಿ ಬಿಟ್ಟಿದ್ದಾರೆ, ಸಮಯಕ್ಕೆ ಸರಿಯಾಗಿ ಊಟ ಮಾಡುತ್ತಾರೋ ಇಲ್ಲವು ಸಮಯಕ್ಕೆ ಸರಿಯಾಗಿ ವಾಟ್ಸ್ ಆಪ್ ನಲ್ಲಿ ಗುಡ್ ಮಾರ್ನಿಂಗ್, ಗುಡ್ ನೈಟ್, ಫಾರ್ವರ್ಡ್ ಮೆಸೇಜ್ಗಳು, ಸ್ಟೇಟಸ್ ಗಳು ಮಾತ್ರ ಮಿಸ್ ಆಗಲ್ಲ, ಈಗಿನ ಸಮಯದಲ್ಲಿ ಸ್ಮಾರ್ಟ್‌ಫೋನ್‌ಗಳೆ ಎಲ್ಲರ ಮಿತ್ರರಾಗಿಬಿಟ್ಟಿದೆ ಹೀಗಿರುವಾಗ ತಮ್ಮ ಸ್ಮಾರ್ಟ್‌ಫೋನ್ speed ಒಂದು ಚೂರು ಕಡಿಮೆಯಾದರೂ ಏನೋ ಕಳೆದುಕೊಂಡಂತೆ ಭಾಸವಾಗುತ್ತದೆ, ತಲೆ ಕೆಡಿಸಿಕೊಳ್ಳದೆ ಈ ಸಲಹೆಗಳನ್ನು ಅನುಸರಿಸಿ ಹಾಗು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಬ್ರೌಸಿಂಗ್ ವೇಗ ಹೆಚ್ಚಿಸಿಕೊಳ್ಳಿ, ಸ್ಮಾರ್ಟ್‌ಫೋನ್ ಬಳಸುವ ನಿಮ್ಮ ಅಭ್ಯಾಸ ಹಾಗೂ ಬ್ರೌಸಿಂಗ್ ಮಾಡುವ ಮಾರ್ಗದಲ್ಲಿ ಒಂದಷ್ಟು ಶಿಸ್ತು ರೂಢಿಸಿಕೊಂಡರೆ ನಿಮ್ಮ ಇಂಟರ್ನೆಟ್ ವೇಗ ಹೆಚ್ಚಿಸಬಹುದ.
4ಜಿ ಇಂಟರ್ನೆಟ್ ಕನೆಕ್ಷನ್ ಇದ್ದರೂ ಸ್ಮಾರ್ಟ್‌ಫೋನ್‌ನ ಬ್ರೌಸಿಂಗ್ ವೇಗ 2ಜಿಗಿಂತ ಕಡಿಮೆ ಇರುತ್ತದೆ ಎಂಬುದು ಬಹುತೇಕರ ದೂರು, ಎಷ್ಟೇ ದುಬಾರಿ ಸ್ಮಾರ್ಟ್‌ಫೋನ್ ನಿಮ್ಮಲ್ಲಿದ್ದರೂ ಇಂಟರ್ನೆಟ್‌ನ ವೇಗವು ಸ್ಥಳ ಮತ್ತು ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ ಎಂಬುದೂ ಈಗ ಸತ್ಯ.
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಬ್ರೌಸಿಂಗ್ ವೇಗ ಹೆಚ್ಚಿಸಲು ಕೆಲವು ಸಲಹೆಗಳು ಇಲ್ಲಿವೆ, ಸ್ಮಾರ್ಟ್‌ಫೋನ್ ಬಳಸುವ ನಿಮ್ಮ ಅಭ್ಯಾಸ ಹಾಗೂ ಬ್ರೌಸಿಂಗ್ ಮಾಡುವ ಮಾರ್ಗದಲ್ಲಿ ಒಂದಷ್ಟು ಶಿಸ್ತು ರೂಢಿಸಿಕೊಂಡರೆ ನಿಮ್ಮ ಇಂಟರ್ನೆಟ್ ವೇಗ ಹೆಚ್ಚಿಸಬಹುದು.
ಬ್ರೌಸಿಂಗ್ ವೇಗವು ನೀವು ಯಾವ ಬ್ರೌಸರ್ ಬಳಸುತ್ತಿದ್ದೀರಿ ಎಂಬುದನ್ನೂ ಅವಲಂಬಿಸಿರುತ್ತದೆ, ಈಗ ಬಹುತೇಕರು ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್ ಕ್ರೋಮ್ ಬ್ರೌಸರ್ ಬಳಸುವುದು ಸಾಮಾನ್ಯ, ಗೂಗಲ್ ಕ್ರೋಮ್ ಉತ್ತಮ ಬ್ರೌಸರ್ ಆದರೂ ಅದರ ಮೂಲಕ ಬ್ರೌಸ್ ಮಾಡುವಾಗ ಬ್ರೌಸಿಂಗ್ ವೇಗ ತಗ್ಗುವುದೂ ಇದೆ, ಇದಕ್ಕೆ ಕಾರಣ ನೀವು ಬ್ರೌಸಿಂಗ್ ವೇಳೆ ಬಳಸುವ ಪಾಸ್‌ವರ್ಡ್, ಬುಕ್‌ಮಾರ್ಕ್ ಹಾಗೂ ಹಿಸ್ಟರಿಯನ್ನು ಕ್ರೋಮ್ ನೆನಪಿಟ್ಟುಕೊಳ್ಳುವುದು, ಕ್ರೋಮ್‌ನ ಈ ಸ್ಮರಣಗುಣದ ಕಾರಣದಿಂದ ನೀವು ಹಿಸ್ಟರಿ ಕ್ಲಿಯರ್ ಮಾಡದೆ ಬ್ರೌಸಿಂಗ್ ಮಾಡಿದರೆ ವೇಗ ತಗ್ಗುತ್ತದೆ, ಹೀಗಾಗಿ ಪ್ರತಿ ಬಾರಿ ಬ್ರೌಸ್ ಮಾಡುವ ಮುನ್ನ ಬ್ರೌಸಿಂಗ್ ಡೇಟಾ ಕ್ಲಿಯರ್ ಮಾಡಿ.
ನಿಮ್ಮ ಸ್ಮಾರ್ಟ್‌ಫೋನ್‌ನ ಇತರೆ ಆ್ಯಪ್‌ಗಳ ಕ್ಯಾಚ್ ಕ್ಲಿಯರ್ ಮಾಡದೇ ಇರುವುದು ಕೂಡ ಬ್ರೌಸಿಂಗ್ ವೇಗ ತಗ್ಗಲು ಕಾರಣವಾಗಬಹುದು, ಹೀಗಾಗಿ ಆ್ಯಪ್ ಕ್ಯಾಚ್ ಕ್ಲಿಯರ್ ಮಾಡಿ ಇದಕ್ಕಾಗಿ ನಿಮ್ಮ ಮೊಬೈಲ್‌ನ ಸೆಟ್ಟಿಂಗ್ಸ್‌ಗೆ ಹೋಗಿ ಆ್ಯಪ್ ಮೇಲೆ ಕ್ಲಿಕ್ ಮಾಡಿ, ಬಳಿಕ ನೀವು ಯಾವ ಆ್ಯಪ್‌ನ ಕ್ಯಾಚ್ ಕ್ಲಿಯರ್ ಮಾಡಬೇಕೋ ಅದರ ಮೇಲೆ ಕ್ಲಿಕ್ ಮಾಡಿ, ನಂತರ ಸ್ಟೋರೇಜ್ ಮೇಲ್ ಕ್ಲಿಕ್ಕಿಸಿ, ಇಲ್ಲಿ ಕಾಣುವ ಕ್ಲಿಯರ್ ಕ್ಯಾಚ್ ಮೇಲೆ ಕ್ಲಿಕ್ ಮಾಡಿದರೆ ಆ ಆ್ಯಪ್‌ನ ಕ್ಯಾಚ್ ಕ್ಲಿಯರ್ ಆಗುತ್ತದೆ, ಇದಲ್ಲದೆ ಫೋನ್‌ನ ಸೆಟ್ಟಿಂಗ್‌ನಲ್ಲಿ ಸ್ಟೋರೇಜ್‌ಗೆ ಹೋಗಿ ಅಲ್ಲಿ ಕ್ಯಾಚ್ ಕ್ಲಿಯರ್ ಆಯ್ಕೆ ಮಾಡಿದರೆ ನಿಮ್ಮ ಸ್ಮಾರ್ಟ್‌ಫೋನ್‌ನ ಎಲ್ಲಾ ಕ್ಯಾಚ್ ಕ್ಲಿಯರ್ ಆಗುತ್ತದೆ.
ಇಷ್ಟು ಮಾತ್ರವಲ್ಲದೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಹೆಚ್ಚು ಸ್ಪೇಸ್ ತೆಗೆದುಕೊಳ್ಳುವ ಅನಗತ್ಯ ಆ್ಯಪ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿ, ನಿಮ್ಮ ಮೊಬೈಲ್‌ನ ಇನ್‌ಬಿಲ್ಟ್ ಸ್ಟೋರೇಜ್ ಸಾಮರ್ಥ್ಯ ಕಡಿಮೆ ಇದ್ದರೂ ಅದು ಬ್ರೌಸರ್ ಮೇಲೆ ಪ್ರಭಾವ ಬೀರುತ್ತದೆ ಎಂಬುದು ನಿಮಗೆ ತಿಳಿದಿರಲಿ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.