ಪುರುಷರ ಮುಖ ಸುಂದರವಾಗಿ ಕಾಣಲು ಇಲ್ಲಿದೆ ಟಿಪ್ಸ್..!!

0
4351

ಸ್ವಲ್ಪ ಜನರನ್ನು ಬಿಟ್ಟರೆ ಪ್ರತಿಯೊಬ್ಬ ಮನುಷ್ಯನಿಗೂ ಮುಖದ ಅಂದದ ಬಗ್ಗೆ ಇನ್ನಿಲ್ಲದ ಕಾಳಜಿ ವಹಿಸುತ್ತಾರೆ, ಇನ್ನು ಮಹಿಳೆಯರಂತು ತಮ್ಮ ತ್ವಚೆಯ ಅಂದ ಕಳೆದುಕೊಳ್ಳದ ಹಾಗೆ ಇನ್ನಿಲ್ಲದ ಕಾಳಜಿ ತಗೋತಾರೆ, ಹಾಗಾದ್ರೆ ಪುರುಷರು ಏನ್ಮಾಡ್ತಾರೆ ಅವ್ರಿಗೆ ಮುಕದ ಅಂದದ ಬಗ್ಗೆ ಕಾಳಜಿ ಇರುವುದಿಲ್ಲವ.

ಪ್ರತಿಯೊಬ್ಬ ಪುರುಷನಿಗೂ ತಾನು ಎಲ್ಲರಂತೆ ಅಂದವಾಗಿ ಕಾಣಬೇಕು ಅನ್ನೋ ಆಸೆ ಅವರಲ್ಲಿ ಇರುತ್ತದೆ, ಆದರೆ ಬೇರೆಯವರ ಬಳಿ ಹೇಳಿಕೊಳ್ಳುವುದಿಲ್ಲ ಅಷ್ಟೇ, ಸಾಮಾನ್ಯವಾಗಿ ಪುರುಷರು ಅಂದವಾಗಿ ಕಾಣಬೇಕು ಅಂದ್ರೆ ಮೊದಲು ತಲೆಯ ಕೂದಲ ಅಂದವನ್ನು ಹೆಚ್ಚಿಸಿಕೊಳ್ಳಬೇಕು ಅದಕ್ಕಾಗಿ ಮೊದಲು ಕೆಲವೊಂದು ಟಿಪ್ಸ್

ಹೆಚ್ಚಿನ ಪುರುಷರಿಗೆ ಡ್ರೈ ಸ್ಕಿನ್ ಅಂದರೆ ಒಣ ಚರ್ಮ ಹೆಚ್ಚಿರುತ್ತದೆ, ಡ್ರೈ ಸ್ಕಿನ್ ನಿಂದ ನೀವು ಶಾಶ್ವತ ಪರಿಹಾರ ಬೇಕಾದ್ರೆ ಪ್ರತಿದಿನ 4 ರಿಂದ 5 ಲೀಟರ್ ನೀರು ಕುಡಿಯಿರಿ, ಮಾಶ್ಚರೈಸರ್ ಕ್ರೀಮ್ ಹೆಚ್ಚಾಗಿ ಬಳಕೆ ಮಾಡಿ, ನಿಮ್ಮ ಚರ್ಮ ಎಣ್ಣೆ ಅಂಶದಿಂದ ಕೂಡಿದ್ರೆ ಲೋಷನ್ ಬಳಕೆ ಸದಾ ಮಾಡಿ.

ಬೆಳಗ್ಗೆ ಎದ್ದ ಕೂಡಲೇ ಮುಖ ಶೇವ್ ಮಾಡೋದು ಒಳ್ಳೆಯದು ಶೇವ್ ನಿಮ್ಮ ಮುಖದ ತೇವಾಂಶವನ್ನು ಕಡಿಮೆ ಮಾಡುತ್ತದೆ, ಸಧ್ಯ ಲೈಟ್ ಆಗಿ ಗಡ್ಡ ಬಿಡೋದು ಸಖತ್ ಪ್ಯಾಶನ್ ಆಗಿದೆ ನಿಮಗೆ ಅದು ಚೆನ್ನಾಗಿದ್ದರೆ ಟ್ರೈ ಮಾಡಿ ನೋಡಿ, ದಿನಕ್ಕೆ ಐದು ಬಾರಿ ಮುಖ ತೊಳೆಯಿರಿ, ಇದು ಆಯಿಲ್ ಸ್ಕಿನ್ ನಿಂದ ಹಾಗು ಮೊಡವೆ ಇಂದ ದೂರ ಇಡುತ್ತದೆ.

ತುಂಬಾ ಹಣ್ಣಾದ ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿ ಅದನ್ನು ಮುಖಕ್ಕೆ ಹಚ್ಚಿಕೊಂಡು 10 ನಿಮಿಷದ ನಂತರ ಬೆಚ್ಚಗಿನ ನೀರಲ್ಲಿ ಮುಖ ತೊಳೆಯಿರಿ, ಟೊಮಾಟೊ ಹಣ್ಣನ್ನು ಎರಡು ಪೀಸ್ ಮಾಡಿ ಚೆನ್ನಾಗಿ ಮುಖಕ್ಕೆ ಮಸಾಜ್ ಮಾಡಿ 5 ನಿಮಿಷದ ನಂತರ ಬಿಸಿ ನೀರಿನ ಆವಿ ತೆಗೆದುಕೊಂಡರೆ ಫಾಸ್ಟ್ ಆಗಿ ಹೊಳೆಯುವ ಮತ್ತು ಫ್ರೆಶ್ ತ್ವಚೆ ನಿಮ್ಮದಾಗುತ್ತದೆ. ಮುಖದ ಕಾಂತಿ ಹೆಚ್ಚಿಸಲು ಬಾದಾಮಿ, ಬೇವಿನ ಎಲೆ, ಚಂದನ, ಮತ್ತು ಗಸಗಸೆಯನ್ನು ಚೆನ್ನಾಗಿ ಅರೆದು ಅದಕ್ಕೆ ಸ್ವಲ್ಪ ನಿಂಬೆರಸ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ ಹಚ್ಚಿದ ಅರ್ಧಗಂಟೆ ನಂತರ ಬಿಸಿ ನೀರಿಂದ ಸ್ನಾನ ಮಾಡಿಕೊಳ್ಳಿ ವಾರಕ್ಕೆ ಎರಡು ಬಾರಿ ಈ ಟಿಪ್ಸ್ ಅನುಸರಿಸಿ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here