ಪ್ರತಿನಿತ್ಯ ನಿಮ್ಮ ಊಟದ ಜೊತೆ ಮೊಸರು ಸೇವನೆ ಮಾಡೋದ್ರಿಂದ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೋತ್ತಾ?

0
3759

ಹಾಲಿನ ಮೂಲದಿಂದ ತಯಾರಾಗುವ ಪದಾರ್ಥಗಲ್ಲಿ ಮೊಸರು ಬಹಳ ಉಪಕಾರಿ ಮತ್ತು ರುಚಿಕರವೂ ಹೌದು ಆದರೆ ಕೆಲವರಿಗೆ ಮೊಸರು ಅಷ್ಟು ಇಷ್ಟವಾಗುವುದಿಲ್ಲ ಆದ್ದರಿಂದ ಅಂತವರು ಮೊಸರಿನಿಂದ ದೂರವೇ ಉಳಿದುಬೀಡುವುತ್ತಾರೆ ಅಂತವರು ತಪ್ಪದೆ ಈ ಮಾಹಿತಿಯನ್ನು ತಪ್ಪದೆ ಓದಬೇಕು, ಮೊಸರು ಪ್ರತಿಯೊಬ್ಬರಿಗೂ ಸುಲಭವಾಗಿ ಸಿಗುವಂತದ್ದು ಆಗಾಗಿ ಅದರ ಉಪಯೋಗವನ್ನು ಪಡೆದು ಕೊಂಡರೆ ಒಳ್ಳೆಯದು, ಕೆಲವರು ಮೊಸರು ಸೇವನೆ ಮಾಡುತ್ತಿದ್ದರು, ಅದರ ಲಾಭದಾಯಕ ಅಂಶಗಳು ತಿಳಿದಿರುವುದಿಲ್ಲ.

ಮೊಸರು ಸೇವನೆಯಿಂದ ಸಿಗುವಂತ ಅರೋಗ್ಯಕರಿ ಅಂಶಗಳು.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮನುಷ್ಯನಿಗೆ ಉತ್ತಮ ಅರೋಗ್ಯ ರೊಪಿಸಿಕೊಳ್ಳಲ್ಲು ರೋಗ ನಿರೋಧಕ ಶಕ್ತಿ ತುಂಬಾನೇ ಅವಶ್ಯಕ ಆದ್ದರಿಂದ ಮೊಸರು ಸೇವನೆ ಮಾಡುವುದು ಒಳ್ಳೆಯದು.

ಮೊಸರು ಜೀರ್ಣ ಕ್ರಿಯೆಯನ್ನು ಹೆಚ್ಚಿಸುತ್ತದೆ, ತಿನ್ನುವಂತ ಊಟ ಸರಿಯಾಗಿ ಜೀರ್ಣ ಆಗದೆ ಇದ್ದಾಗ ಮೊಸರು ಸೇವನೆಯಿಂದ ಜೀರ್ಣ ಕ್ರಿಯೆಯನ್ನು ಹೆಚ್ಚುತ್ತದೆ.

ಮೊಸರಿನಲ್ಲಿನ ಕ್ಯಾಲ್ಸಿಯಂ ಮೂಳೆಗಳ ಬೆಳವಣಿಗೆಗೆ ಸಹಕಾರಿಯಾಗಿದೆ.

ಸಂಧಿವಾತದ ವಿರುದ್ಧ ಹೋರಾಡಲು ಮೊಸರು ಸಹಕಾರಿ.

ಬೇಧಿ, ಮಲಬದ್ಧತೆ, ನಿದ್ರಾಹೀನತೆ, ಕಾಮಾಲೆಯಂತಹ ಕಾಯಿಲೆಗಳಿಗೆ ಮೊಸರು ಅತ್ಯುತ್ತಮ ಔಷಧ.

ಒಂದು ಕಪ್ ಮೊಸರಿಗೆ ಒಂದು ಚಮಚ ಜೇನುತುಪ್ಪ ಬೆರಸಿ ಸೇವಿಸಿದರೆ ಬಾಯಿಹುಣ್ಣು ನಿವಾರಣೆಯಾಗುತ್ತದೆ.

ಹೃದಯದ ಆರೋಗ್ಯಕ್ಕೆ ಹಾನಿಯಾಗುವಂಥ ಕೊಲೆಸ್ಟ್ರಾಲ್‌ಗಳನ್ನು ಕಡಿಮೆ ಮಾಡುತ್ತದೆ.

ರಕ್ತದೊತ್ತಡವನ್ನು ಕಡಿಮೆ ಮಾಡುವ ಮೂಲಕ ಹೃದಯಾಘಾತದ ಸಂಭವವನ್ನು ತಪ್ಪಿಸುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here