ದಿನಕ್ಕೆ 5 ಬಾದಾಮಿ ತಿನ್ನುವ ಅಭ್ಯಾಸವಿದ್ದರೆ ಮಿದುಳಿನ ಆರೋಗ್ಯ ಜೊತೆಯಲ್ಲಿ ಇದೆ ಇನ್ನು ಹಲವು ಲಾಭ..!!

0
5245

ಹೌದು ಬಾದಾಮಿ ಸೇವನೆ ನಮ್ಮ ಉತ್ತಮ ಆರೋಗ್ಯವನ್ನು ವೃದ್ಧಿಸುತ್ತದೆ ಹಾಗು ಸಮೃದ್ಧವಾದ ನಾರಿನಂಶವನ್ನು ಒಳಗೊಂಡಿರುವ ಇದರಲ್ಲಿ ನೈಸರ್ಗಿಕವಾಗಿ ಸಕ್ಕರೆ ಅಂಶವು ಕಡಿಮೆ ಪ್ರಮಾಣದಲ್ಲಿದೆ. ಇದು ಕೊಲೆಸ್ಟ್ರಾಲ್ ಪ್ರಮಾಣವನ್ನು ಹೆಚ್ಚಿಸದೆ ದೇಹದ ಆರೋಗ್ಯವನ್ನು ರಕ್ಷಿಸುತ್ತದೆ.ಬಾದಾಮಿ ಸ್ವಾಭಾವಿಕವಾಗಿ ಅತಿ ಹೆಚ್ಚಿನ ಪ್ರಮಾಣದ ಪೌಷ್ಠಿಕಾಂಶ ಪೂರೈಸುವ ತಿನಿಸು. ಇದರಲ್ಲಿ ಕಡಿಮೆ ಪ್ರಮಾಣದ ಕೊಲೆಸ್ಟ್ಟಾಲ್ ಇರುವುದರಿಂದ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಹಸಿ ಬಾದಾಮಿಯನ್ನು ತಿನ್ನಬಹುದು. ಇಲ್ಲವೇ ರೋಸ್ಟ್ ಮಾಡಿಯಾದರೂ ತಿನ್ನಬಹುದು ಹೇಗೆ ತಿಂದರೂ ಬಾದಾಮಿ ರುಚಿಕರ ಹಾಗೂ ಆರೋಗ್ಯಕರ.

ಹೃದಯ ಸಂಬಂದಿ ರೋಗಗಳ ನಿಯಂತ್ರಣಕ್ಕೆ ಬಾದಾಮಿಯಲ್ಲಿ ಉತ್ತಮವಾಗಿ ಕೆಲಸ ಮಾಡುತ್ತದೆ, ಅಲ್ಲದೇ ಇದರಲ್ಲಿರುವ ವಿಟಮಿನ್ ಇ ಹೃದಯದ ಕಾಯಿಲೆಗಳನ್ನು ದೂರವಿರಿಸುತ್ತದೆ ಹಾಗೂ ಮೆಗ್ನೀಶಿಯಂ ಹೃದಯಸ್ತಂಭನದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.

ಕೂದಲೀನ ಬೆಳವಣಿಗೆಗೆ ವಿಟಮಿನ್ ಬಿ ಒಳಗೊಂಡಿದ್ದು ಕೂದಲ ಹೊಳಪು ಹಾಗೂ ಆಯುಷ್ಯನ್ನು ಹೆಚ್ಚಿಸುತ್ತದೆ, ಬಾದಾಮಿ ಎಣ್ಣೆ ಕೂದಲಿಗೆ ಒಳ್ಳೆಯದು.

ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ ಹಾಗು ಮುಖದ ಚರ್ಮ ಸುಕ್ಕುಗಟ್ಟಿದ್ದರೆ ಅದರ ನಿವಾರಣೆಯನ್ನು ಮಾಡುತ್ತದೆ, ಇದರಲ್ಲಿ ವಿಟಮಿನ್ ಇ ಇರುವುದರಿಂದ ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ.

ಹೊಟ್ಟೆ ನೋವು, ಕೆಟ್ಟ ಉಸಿರಾಟ ಮತ್ತು ಅಜೀರ್ಣವನ್ನು ಉಂಟಗುವ ಸಮಯದಲ್ಲಿ ಬಾದಾಮಿ ತಿನ್ನೋದು ಒಳ್ಳೆಯದು.

ತೂಕದಲ್ಲಿ ಇಳಿಕೆ ಬಾದಾಮಿ ದೇಹದಲ್ಲಿರುವ ಕಾರ್ಬೋಹೈಡ್ರೇಟ್ ಪ್ರಮಾಣವನ್ನು ಕಡಿಮೆಮಾಡುತ್ತದೆ. ಜೀರ್ಣಕ್ರಿಯೆಯನ್ನು ಸಾಮಾನ್ಯಗೊಳಿಸಿ ತೂಕ ಕಡಿಮೆ ಮಾಡುತ್ತದೆ.

ಮಿದುಳಿನ ಆರೋಗ್ಯ ಕಾಪಾಡುವುದು ಬಾದಾಮಿಯಲ್ಲಿರುವ ವಿಟಮಿನ್ ಇ ನೆನೆಪಿನ ಶಕ್ತಿಯನ್ನು ಹೆಚ್ಚಿಸಿ, ಮೆದುಳಿನ ಆರೋಗ್ಯವನ್ನು ಕಾಪಾಡುತ್ತದೆ. ಮಿದುಳು ಸಂಬಂಧಿ ಕಾಯಿಲೆಯನ್ನು ನಿವಾರಿಸುವುದು. ಮಿದುಳಿನ ಆಯಷ್ಯವನ್ನು ದೀರ್ಘಕಾಲದವರೆಗೆ ತಡೆಯುತ್ತದೆ.

ಪ್ರತಿದಿನ ಇಂತಿಷ್ಟು ಪ್ರಮಾಣದ ಬಾದಾಮಿ ತಿಂದರೆ ಸಣಕಲು ದೇಹದವರು ತೂಕ ಹೆಚ್ಚಿಸಿಕೊಳ್ಳಬಹುದು ಹಾಗೂ ಆರೋಗ್ಯಯುತವಾಗಿರಬಹುದು. ಜೊತೆಗೆ ಸ್ಥೂಲಕಾಯದವರು ಬಾದಾಮಿ ತಿಂದರೆ ದೇಹದಲ್ಲಿರುವ ಕೊಬ್ಬನ್ನು ಕರಗಿಸುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here