ಶುಭ ಸಮಾರಂಭಗಳು ಬಂದರೆ ಹೆಣ್ಣು ಮಕ್ಕಳು ತಮ್ಮ ಅಲಂಕಾರದಲ್ಲಿ ಅತಿ ಪ್ರಾಮುಖ್ಯವನ್ನು ನೀಡುವುದು ಕೈಗಳಿಗೆ ಮತ್ತು ಕಾಲುಗಳಿಗೆ ಹಚ್ಚುವ ಮೆಹಂದಿ ಗೆ ಎಂದರೆ ತಪ್ಪಾಗಲಾರದು, ಮೆಹಂದಿ ಹಚ್ಚುವುದು ಮುಖ್ಯವಲ್ಲ ಹಚ್ಚಿದ ಮೇಲೆ ಸರಿಯಾದ ರೀತಿಯಲ್ಲಿ ಕ್ರಮಗಳನ್ನು ಪಾಲಿಸಿದರೆ ಮಾತ್ರ ಮೆಹಂದಿ ಉತ್ತಮ ಬಣ್ಣವನ್ನು ನೀಡಿ ಕೈಗಳ ಅಂದವನ್ನು ಹೆಚ್ಚಿಸುತ್ತದೆ,ಅದರಂತೆ ಕೆಲವು ಮುನ್ನೆಚ್ಚರಿಕೆಯ ಕ್ರಮಗಳನ್ನು ತಿಳಿಸಲಾಗಿದೆ ಒಮ್ಮೆ ಸಂಪೂರ್ಣವಾಗಿ ಓದಿ.
ಮೊದಲೆಲ್ಲಾ ಮೆಹೆಂದಿಯನ್ನು ಮನೆಯಲ್ಲಿಯೇ ತಯಾರು ಮಾಡುತ್ತಿದ್ದರು, ಇದರ ಗುಣಮಟ್ಟ ಉತ್ತಮವಾಗಿರುತ್ತಿತ್ತು ಆದರೆ ಸತ್ಯ ಸಾಮಾನ್ಯವಾಗಿ ಅಂಗಡಿಯಿಂದ ಮೆಹೆಂದಿಯನ್ನು ತರುತ್ತಾರೆ, ಈ ರೀತಿಯಲ್ಲಿ ತರುವಾಗ ಮೆಹಂದಿಯ ಗುಣಮಟ್ಟ ಹಾಗೂ ಎಕ್ಸ್ ಪೈರಿ ದಿನಾಂಕವನ್ನು ತಪ್ಪದೇ ನೋಡಿ.
ನಿಮ್ಮ ಕೈಗಳಿಗೆ ಮೆಹೆಂದಿಯನ್ನು ಹಚ್ಚುವ ಮುನ್ನ ನಿಮಗೆ ಇಷ್ಟ ಆಗುವ ಡಿಸೈನ್ ಮೊದಲು ಸೆಲೆಕ್ಟ್ ಮಾಡಿಕೊಳ್ಳಿ, ಕಾರಣ ನಂತರದಲ್ಲಿ ಬದಲಿಸಲು ಸಾಧ್ಯವಾಗುವುದಿಲ್ಲ.
ಮೆಹಂದಿ ಹಚ್ಚಿಕೊಳ್ಳುವ ಮೊದಲು ನಿಮ್ಮ ಕೈ ಮೇಲೆ ಇರುವ ಜಿಡ್ಡು ಹಾಗೂ ಎಣ್ಣೆಯಂತಹ ಅಂಶವಿದ್ದರೆ ಮೊದಲು ಸಾಬೂನು ಬಳಸಿ ನಿಮ್ಮ ಕೈಗಳನ್ನು ಶುಭ್ರ ಪಡಿಸಿಕೊಳ್ಳಿ.
ಮೆಹಂದಿ ಹಚ್ಚುವಾಗ ಕೆಲವೊಮ್ಮೆ ಡಿಸೈನ್ಗಳು ತಪ್ಪುವುದು ಸಾಮಾನ್ಯ ಆದ ಕಾರಣ ಒಂದು ಹತ್ತಿಯ ತುಣುಕನ್ನು ಜೊತೆಯಲ್ಲೇ ಇಟ್ಟುಕೊಂಡರೆ ಉತ್ತಮ.
ಬಣ್ಣವು ಹೆಚ್ಚಾಗಿ ಕಾಣಲು ನೀವು ಮೆಹಂದಿ ಹಚ್ಚಿದ ನಂತರ ಕನಿಷ್ಠ ಪಕ್ಷ ಎರಡು ಗಂಟೆಯಾದರೂ ಕಾಯಬೇಕು.
ಮೆಹಂದಿಯ ಬಣ್ಣ ಗಾಢವಾಗಿ ಕಾಣಲು, ನಿಂಬೆ ರಸಕ್ಕೆ ಸಕ್ಕರೆಯನ್ನು ಮಿಶ್ರಣ ಮಾಡಿ ಸ್ವಲ್ಪ ಬಿಸಿ ಮಾಡಿ, ಹತ್ತಿಯನ್ನು ಬಳಸಿ ನಿಮ್ಮ ಮೆಹೆಂದಿಯ ಮೇಲೆ ಆ ಮಿಶ್ರಣವನ್ನು ಲೇಪಿಸಬೇಕು, ಮೆಹಂದಿ ಹಚ್ಚಿದ ನಂತರ ಅರ್ಧ ಗಂಟೆಗೆ ಒಮ್ಮೆ ಈ ರೀತಿ ಮಾಡಿ.
ಮೆಹಂದಿಯನ್ನು ನೀರಿನಲ್ಲಿ ತೊಳೆಯುವ ಬದಲು, ಒಣಗಿದ ಮೆಹಂದಿಯಿಂದ ಕೆರೆದು ಉದುರಿಸುವ ಪ್ರಯತ್ನಪಡಿ ನಂತರ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಕೊಳ್ಳಿ ಇದರಿಂದಲೂ ಕೂಡ ಬಣ್ಣ ಗಾಢವಾಗುತ್ತದೆ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.