ಕಲರ್ಸ್ ಕನ್ನಡ ಕನ್ನಡದ ಖಾಸಗಿ ವಾಹಿನಿಯಲ್ಲಿ ಮೂಡಿಬರುತ್ತಿರುವ ಬಿಗ್ ಬಾಸ್ ಏಳನೇ ಆವೃತ್ತಿ ಕಾರ್ಯಕ್ರಮ ಸದ್ಯ ಕನ್ನಡಿಗರ ಮನೆ ಮಾತಾಗಿದೆ, ಪ್ರತಿಬಾರಿಯಂತೆ ಈ ಬಾರಿಯೂ ಬಿಗ್ ಬಾಸ್ ಮನೆಗೆ ಸಿನಿಮಾ ಹಾಗೂ ಸೀರಿಯಲ್ ಕ್ಷೇತ್ರದ ಘಟಾನುಘಟಿಗಳು ಮನೆಯ ಸದಸ್ಯರಾಗಿದ್ದಾರೆ, ಅದರಲ್ಲೂ ಈ ಬಾರಿ ಎಲ್ಲರಿಗೂ ಅಚ್ಚರಿ ಮೂಡಿಸುವಂತೆ ಮಾಡಿದ್ದು ಹಿರಿಯ ಪತ್ರಕರ್ತ ರವಿಬೆಳೆಗೆರೆ ಅವರ ಎಂಟ್ರಿ.
ಹೌದು ಬಿಗ್ ಬಾಸ್ ಮನೆಗೆ ಹಿರಿಯ ಪತ್ರಕರ್ತರಾದ ರವಿ ಬೆಳಗೆರೆ ಅಭ್ಯರ್ಥಿಯಾಗಿ ಬಂದಿದ್ದರು ಆದರೆ ಅವರ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿ ಒಂದೇ ದಿನಕ್ಕೆ ಮನೆಯಿಂದ ಹೊರ ಬಿದ್ದಿದ್ದರು, ಮತ್ತೆ ಚೇತರಿಸಿಕೊಂಡು ಬಿಗ್ ಬಾಸ್ ಮನೆಗೆ ಮರಳಿದರು, ಆದರೆ ರವಿ ಬೆಳಗೆರೆ ಅವರ ಆರೋಗ್ಯ ಬಿಗ್ ಬಾಸ್ ಮನೆಯಲ್ಲಿ ಕೊಡುವ ಟಾಸ್ಕ್ ಗಳನ್ನು ಸಂಪೂರ್ಣ ಮಾಡುವಷ್ಟು ಉತ್ತಮವಾಗಿಲ್ಲ, ಆದಕಾರಣ ಬಿಗ್ ಬಾಸ್ ಕಾರ್ಯಕ್ರಮ ಆಯೋಜಕರು ವೈದ್ಯರ ಸಲಹೆ ಮೇರೆಗೆ ರವಿ ಬೆಳಗೆರೆ ಅವರನ್ನು ಕಾರ್ಯಕ್ರಮದಿಂದ ಸ್ಪರ್ಧಿಯಾಗಿ ವಜಾ ಮಾಡಿದ್ದಾರೆ.
ಹಾಗೂ ರವಿ ಬೆಳಗೆರೆ ಅವರಿಗೆ ಗೌರವ ನೀಡುವ ಉದ್ದೇಶದಿಂದ ಬಿಗ್ ಬಾಸ್ ಮನೆಯ ಮೊದಲ ವಾರ ರವಿ ಬೆಳಗೆರೆ ಅವರನ್ನು ಸ್ಪರ್ಧಿಯಾಗಿ ನೋಡುವ ಬದಲು ಅವರನ್ನು ಅತಿಥಿಯಾಗಿ ಸ್ವೀಕರಿಸಬೇಕು ಹಾಗೂ ಅವರಿಗೆ ಅತಿಥಿ ಸತ್ಕಾರವನ್ನು ನೀಡಬೇಕು ಎಂದು ಬಿಗ್ ಬಾಸ್ ಎಲ್ಲ ಸ್ಪರ್ಧಿಗಳಿಗೂ ಸೂಚನೆ ನೀಡಿದ್ದಾರೆ, ಬಿಗ್ ಬಾಸ್ ಕಾರ್ಯಕ್ರಮಕ್ಕೆ ರವಿಬೆಳಗೆರೆಯವರು, ಬಂದ ದಿನದಿಂದಲೂ ಪ್ರೇಕ್ಷಕ ಮಹಾಪ್ರಭುಗಳಿಗೆ ಇವರ ಆರೋಗ್ಯವನ್ನು ಗಮನಿಸಿ ಇವರು ನಡೆಯಲು ಕುರಿ ಪ್ರತಾಪ್ ಅವರ ಸಹಾಯವನ್ನು ಪಡೆಯುತ್ತಿದ್ದಾರೆ ಇನ್ನು ಬಿಗ್ ಬಾಸ್ ನೀಡುವ ಟಾಸ್ಕ್ ಗಳನ್ನು ಹೇಗೆ ಮಾಡುತ್ತಾರೆ ಎಂಬ ಅನುಮಾನವಿತ್ತು.
ಅದೇನೇ ಇರಲಿ ಇಂತಹಾ ವಯಸ್ಸಿನಲ್ಲಿ ನವ ಯುವಕನಂತೆ ರವಿಬೆಳಗೆರೆ ಅವರು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬರಲು ಮನಸ್ಸು ಮಾಡಿದ್ದು ಹಾಗೂ ಬಂದು ತಮ್ಮ ಸಂಪೂರ್ಣ ಪ್ರಯತ್ನವನ್ನು ಪಟ್ಟಿದ್ದು ಪ್ರಶಂಸೆ ನೀಡಬೇಕಾದ ವಿಚಾರವೇ, ಉಳಿದಂತೆ ಬಿಗ್ ಬಾಸ್ ಮನೆಯಲ್ಲಿ ಸಧ್ಯ ಕುರಿ ಪ್ರತಾಪ್ ಅವರು ಪ್ರೇಕ್ಷಕ ಮಹಾಪ್ರಭುಗಳಿಗೆ ಮನೋರಂಜನೆ ನೀಡುತ್ತ ನಗೆಯ ಕಡಲಲ್ಲಿ ತೆಲಿಸುತ್ತಿದ್ದಾರೆ, ಉಳಿದಂತೆ ಇತರ ಸ್ಪರ್ಧಿಗಳು ಮುಂದಿನ ದಿನಗಳಲ್ಲಿ ಮನೆಗೆ ಹೊಂದಿಕೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡುತ್ತಾರ ? ಕಾಯಬೇಕಾಗಿದೆ.