ಈ ರೀತಿ ಮಾಡಿ. ದೈನಂದಿನ ಮನೆಗೆಲಸಗಳನ್ನು ಥಟ್ಟಂತ ಮುಗಿಸಿಕೊಳ್ಳಿ.

0
1674

ಸಾಮಾನ್ಯವಾಗಿ ಇಂದಿನ ಚಿಕ್ಕ-ಚೊಕ್ಕ ಕುಟುಂಬದಲ್ಲಿ ಪತಿ-ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದರೆ ಹೆಚ್ಚು. ಯಾವುದಾದರೂ ಸಭೆ-ಸಮಾರಂಭ ನಡೆದಾಗ ಮಾತ್ರ ಅತಿಥಿಗಳ ಆಗಮನವಾಗುವುದು. ಆದ್ದರಿಂದ ನಾವು ಒಂದು ಪುಟ್ಟ ಸಂಸಾರಕ್ಕೆ ಉಪಯುಕ್ತವಾಗುವಂತಹ ಕೆಲವು ಸಲಹೆಗಳನ್ನು ಇಂದು ತಿಳಿದುಕೊಳ್ಳೋಣ. ತರಕಾರಿಗಳನ್ನು ಮೊದಲು ತೊಳೆದು ನಂತರ ಹೆ’ಚ್ಚಬೇಕು, ಹೆ’ಚ್ಚಿದ ನಂತರ ತೊಳೆದರೆ ಜೀ’ವಸತ್ವಗಳು ಹಾಳಾಗುತ್ತದೆ. ಬೆಳ್ಳುಳ್ಳಿಗೆ ಸ್ವಲ್ಪ ಎಣ್ಣೆಯನ್ನು ಹಚ್ಚಿ ನಂತರ ಬಿಸಿಲಿನಲ್ಲಿ ಒಣಗಿಸಿದರೆ ಸಿಪ್ಪೆ ಸುಲಿಯುವುದು ತುಂಬಾ ಸುಲಭ.

ಈರುಳ್ಳಿಯನ್ನು ಸ್ವಲ್ಪ ಸಮಯ ಬಿ’ಸಿನೀರಿನಲ್ಲಿ ಇಟ್ಟು ನಂತರ ತಣ್ಣೀರಿನಲ್ಲಿ ಹಾಕಿದರೆ ಸಿಪ್ಪೆಯನ್ನು ಬೇಗ ತೆಗೆಯಬಹುದು. ಸೊಪ್ಪನ್ನು ಸಕ್ಕರೆ ಹಾಕಿದ ನೀರಿನಲ್ಲಿ ಸ್ವಲ್ಪ ಸಮಯ ನೆನೆಸಿ ನಂತರ ಅಡಿಗೆ ತಯಾರಿಸಿದರೆ ತುಂಬಾ ರುಚಿಯಾಗಿರುತ್ತದೆ. ಸಾಮಾನ್ಯವಾಗಿ ಅಡುಗೆ ಸಾಮಗ್ರಿಗಳನ್ನು ತರುವಾಗ ಕಾಳುಗಳನ್ನು ತರುತ್ತೇವೆ. ಆದರೆ ಬಳಸದೆ ಹಾಗೇ ಇಟ್ಟು ಬಿಡುತ್ತೇವೆ. ಅವರೆಕಾಳು ಹಾಗೆಯೇ ಇಟ್ಟರೆ ಸುಕ್ಕು ಬರುತ್ತದೆ. ಅಂತಹ ಬೀಜದ ಜೊತೆಗೆ ಅಕ್ಕಿಯನ್ನು ಹಾಕಿ ನೆನೆಸಿ ದೋಸೆಹಿಟ್ಟು ತಯಾರಿಸಿ ದೋಸೆ ಮಾಡಬಹುದು. ಕಾಳುಗಳ ದೋಸೆ ತುಂಬಾ ರುಚಿಯಾಗಿರುತ್ತದೆ.

ಕೆಲವೊಮ್ಮೆ ಅನ್ನ ತುಂಬಾ ಉಳಿದುಬಿಡುತ್ತದೆ ತುಂಬಾ ಹಣ ವೆಚ್ಚಮಾಡಿ ಅನ್ನವನ್ನು ಹಾಳು ಮಾಡಲು ಯಾರಿಗೂ ಮನಸ್ಸು ಬರುವುದಿಲ್ಲ. ಅಂತಹ ಸಮಯದಲ್ಲಿ ಉಳಿದ ಅನ್ನಕ್ಕೆ ಸ್ವಲ್ಪ ಜೀರಿಗೆ, ಕೆಂ’ಪು ಖಾರ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ ನಂತರ ಸಂಡಿಗೆ ರೀತಿಯಲ್ಲಿ ಇಟ್ಟು ಒಣಗಿಸಿ, ನಿಮಗೆ ಬೇಕಾದ ಎಣ್ಣೆಯಲ್ಲಿ ಹಾಕಿ ಕರಿದು ತಿಂದರೆ ತುಂಬಾ ರುಚಿಯಾಗಿರುತ್ತದೆ. ಚಪಾತಿ ಮಾಡುವಾಗ ಮೃದುವಾಗಿ ಬರಲು 1 ಕಪ್ ಮೊಸರು, ಎರಡು ಹಣ್ಣಾದ ಬಾಳೆ ಹಣ್ಣನ್ನು ಗೋಧಿ ಹಿಟ್ಟಿಗೆ ಸೇರಿಸಿ ಚೆನ್ನಾಗಿ ಕಲಸಿ. ಆಗ ಚಪಾತಿ ಮೃದುವಾಗುತ್ತದೆ.

ಕಾಫಿ ಡಿಕಾಕ್ಷನ್ ಹಾಕುವಾಗ ಒಂದು ಚಿಟಿಕೆ ಉಪ್ಪು ಅಥವಾ ಸಕ್ಕರೆ ಹಾಕಿದರೆ, ಕಾಫಿ ತುಂಬಾ ರುಚಿಯಾಗಿರುವುದು ಹಾಗೂ ಗಟ್ಟಿಯಾಗಿರುವುದು. ಅಕ್ಕಿ ಬೇಯುವಾಗ ಒಂದೆರಡು ಹನಿ ನಿಂಬೆರ’ಸ ಹಾಕಿದರೆ ಅನ್ನ ಬೆಳ್ಳಗೆ ಮಲ್ಲಿಗೆ ಹೂವಿನಂತೆ ಕಾಣುವುದು. ಕಾಲಿಫ್ಲವರ್ ಬೇ’ಯುವಾಗ ಸ್ವಲ್ಪ ಹಾಲು ಸೇರಿಸಿದರೆ ತುಂಬಾ ರುಚಿಯಾಗಿ ಹಾಗೂ ಬೆಳ್ಳಗೆ ಕಾಣಿಸುವುದು. ಸೊಪ್ಪನ್ನು ಕಬ್ಬಿಣದ ಬಾಣಲೆಯಲ್ಲಿ ಹುರಿಯಬಾರದು. ಈ ರೀತಿ ಮಾಡುವುದರಿಂದ ಕಪ್ಪಾಗುತ್ತದೆ. ಅಕ್ಕಿ ಬೇಯುವಾಗ ಒಂದೆರಡು ತೊಟ್ಟು ನಿಂಬೆರಸ ಹಾಕಿದರೆ ಅನ್ನ ಬೆಳ್ಳಗೆ ಉದುರಾಗಿ ಆಗುತ್ತದೆ.

ಹೊಸ ಅಕ್ಕಿ ಬೇಯುವಾಗ ಸ್ವಲ್ಪ ಉಪ್ಪು ಹಾಕಿದರೆ ಅನ್ನ ತುಂಬಾ ರುಚಿಯಾಗಿರುತ್ತದೆ. ಮಸಾಲೆ ಹೆಚ್ಚಿರುವ ಅಡುಗೆಗಳನ್ನು ತಿಂದಾಗ ಜೀರ್ಣವಾಗುವುದು ಕಷ್ಟವಾಗುತ್ತಿದ್ದರೆ ಜೀರಿಗೆಪುಡಿ, ಬೆಲ್ಲವನ್ನು ನೀರಿಗೆ ಬೆರೆಸಿ ಕರಗಿದ ನಂತರ ಕುಡಿಯಿರಿ. ಆಗ ಅಜೀರ್ಣದ ಸಮಸ್ಯೆಗಳು ಉಂಟಾಗುವುದಿಲ್ಲ. ಕಜ್ಜಾಯವು ಗರಿಯಾಗಿರಬೇಕಾದರೆ ಸ್ವಲ್ಪ ಸಣ್ಣ ರವೆಯನ್ನು ಕಜ್ಜಾಯದ ಹಿಟ್ಟಿಗೆ ಹಾಕಿಕೊಂಡು ಕಲಸಿ. ಆಗ ಕಜ್ಜಾಯ ಗರಿಗರಿಯಾಗಿರುತ್ತದೆ.

ಸಕ್ಕರೆ ಡಬ್ಬದಲ್ಲಿ ಇರುವೆ ಮುತ್ತದಂತೆ ಎರಡು ಕರ್ಪೂರದ ಬಿಲ್ಲೆಗಳನ್ನು ಹಾಕಿದರೆ ಅದರ ವಾಸನೆಗೆ ಇರುವೆಗಳು ಬರುವುದಿಲ್ಲ. ಹಪ್ಪಳವನ್ನು ಹಾಕಿ ಇಡುವ ಡಬ್ಬದಲ್ಲಿ ಒಂದು ಚಮಚ ಮೆಂತ್ಯೆ ಹಾಕಿ. ಆಗ ಹಪ್ಪಳಗಳು ತಾಜಾ ಆಗಿರುತ್ತದೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್’ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್’ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here