ಅಮಿತ್ ಶಾ ಅವರನ್ನು ಭೇಟಿ ಮಾಡಿದ ಸುಮಲತಾ, ಕಾರಣವೇನು ಗೊತ್ತಾ.?

0
4276

ಬಿಜೆಪಿ ಪಕ್ಷದ ಚಾಣಾಕ್ಷ ರಾದ ಅಮಿತ್ ಷಾ ಅವರನ್ನು ಭೇಟಿ ಮಾಡಿದ ನೂತನ ಸಂಸದೆ ಸುಮಲತಾ ಅಂಬರೀಶ್.

ಸುಮಲತಾ ಅಂಬರೀಶ್ ಅವರು ಸಮೀಕ್ಷಾ ಅವರನ್ನು ಭೇಟಿ ಮಾಡಿ ಅವರ ಕ್ಷೇತ್ರವಾದ ಮಂಡ್ಯದಲ್ಲಿನ ಹಲವು ಕಾಮಗಾರಿಗಳಿಗೆ ಕೇಂದ್ರ ಸರ್ಕಾರವು ಅನುದಾನ ಮಾಡಬೇಕು ಎಂಬ ಬೇಡಿಕೆಯನ್ನು ಹೊತ್ತು ಗೃಹ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ, ಅಮಿತ್ ಷಾ ಅವರನ್ನು ಭೇಟಿ ಮಾಡಿರುವುದಾಗಿ ಸುಮಲತಾ ಅವರ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಫೋಟೋ ಹಂಚಿಕೊಳ್ಳುವ ಮುಖಾಂತರ ತಿಳಿಸಿದ್ದಾರೆ ಹಾಗೂ ದೇಶದ ಗೃಹ ಸಚಿವರೊಂದಿಗೆ ಕ್ಷೇತ್ರದ ಹಲವಾರು ಕೆಲಸಗಳಿಗೆ ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಸುಮಲತಾ ಅವರು ಅಮಿತ್ ಷಾ ಅವರನ್ನು ಭೇಟಿಯಾಗಿರುವ ಬಗ್ಗೆ ಸುಮಲತಾ ಅವರ ಮೂಲಗಳು ಹೇಳುವ ಪ್ರಕಾರ ದಲ್ಲಿ, ಸುಮಲತಾ ಅವರು ಈ ಬಾರಿ ಮಂಡ್ಯ ಜಿಲ್ಲೆಯ ಕಡೆ ಮುಂಗಾರು ಮಳೆ ಕೈಕೊಟ್ಟಿದೆ, ಹಾಗೂ ಮಂಡ್ಯ ರೈತರು ಅವಲಂಬಿಸಿರುವುದು ಕಾವೇರಿ ನೀರನ್ನು ಮಾತ್ರ, ಸರಿಯಾದ ಮಳೆ ಇಲ್ಲದ ಕಾರಣ ಕಾವೇರಿ ನದಿಯಲ್ಲಿ ನೀರು ಕಡಿಮೆಯಾಗಿದೆ, ಇದೇ ಕಾರಣಕ್ಕಾಗಿಯೇ ರೈತರು ಆತಂಕಕ್ಕೆ ಒಳಗಾಗಿದ್ದಾರೆ, ಇದೇ ಕಾರಣಕ್ಕಾಗಿಯೇ ಸುಮಲತಾ ಅವರು ಅಮಿತ್ ಷಾ ಅವರನ್ನು ಭೇಟಿ ಮಾಡಿ ಜಿಲ್ಲೆಯ ಸಮಸ್ಯೆ ಹೇಳಿಕೊಂಡಿದ್ದಾರಂತೆ.

ಹಿಂದೆ ಸುಮಲತಾ ಅವರು ಕೇಂದ್ರದ ರೈಲ್ವೆ ಸಚಿವರಾದ ಪಿಯುಶ್ ಗೋಯಲ್ ಅವರನ್ನು ಭೇಟಿ ಮಾಡಿದ್ದನ್ನು ನಾವು ಸ್ಮರಿಸಿಕೊಳ್ಳಬಹುದು, ಅಂದು ಸುಮಲತಾ ಅವರು ಬೆಂಗಳೂರು-ಮೈಸೂರು ನಡುವೆ ರೈಲಿನಲ್ಲಿ ಪ್ರಯಾಣ ಮಾಡುವ ಮಹಿಳೆಯರಿಗೆ ಹೆಚ್ಚು ಭೂಮಿಗಳನ್ನು ಅಳವಡಿಸುವಂತೆ ಹಾಗೂ ರೈಲ್ವೇ ಸ್ಟೇಷನ್ ನಲ್ಲಿ ಮಹಿಳೆಯರಿಗೆ ಹೆಚ್ಚಿನ ಪೊಲೀಸ್ ಭದ್ರತೆ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದರು.

ಹಾಗೂ ಮುಂಬೈ ನಗರಿಯಲ್ಲಿ ಇರುವ ರೀತಿಯಲ್ಲಿ ಮಹಿಳೆಯರಿಗಾಗಿ ವಿಶೇಷ ರೈಲನ್ನು ಬೆಳಗ್ಗೆ ಮತ್ತು ಸಂಜೆ ಕೆಲಸಕ್ಕೆ ತೆರಳುವ ಸಮಯದಲ್ಲಿ ವಿಶೇಷ ಮಹಿಳಾ ರೈಲನ್ನು ನೀಡಬೇಕು ಹಾಗೂ ಕೆಆರ್ ನಗರದಲ್ಲಿ ರೈಲ್ವೆ ಪೊಲೀಸ್ ಫೋರ್ಸ್ ಟ್ರೈನಿಂಗ್ ಸೆಂಟರ್ ತರಬೇಕು ಎಂಬ ಮನವಿಯನ್ನೂ ಮಾಡಿಕೊಂಡಿದ್ದರು.

LEAVE A REPLY

Please enter your comment!
Please enter your name here