ಮೈಸೂರಿನಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಮೋದಿಗೆ ಜೈ ಎಂದ ಜೆಡಿಎಸ್ ಕಾರ್ಯಕರ್ತರು..!!

0
163

ಮೈಸೂರು ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ವಿಜಯ್ ಶಂಕರ್ ಅವರಿಗೆ ಬೆಂಬಲ ನೀಡುವ ಸಲುವಾಗಿ ಜೆಡಿಎಸ್ ಸಭೆಯನ್ನು ಆಯೋಜಿಸಿತ್ತು, ಈ ಸಭೆಯಲ್ಲಿ ಜೆಡಿಎಸ್ ನ ಹಲೋ ಕಾರ್ಯಕರ್ತರು ಭಾಗಿಯಾಗಿದ್ದರು, ಇದೇ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರು ಮಾತನಾಡುತ್ತಿರುವಾಗ ಕೆಲ ಕಾರ್ಯಕರ್ತರು ತಮ್ಮ ಅಸಮಾಧಾನವನ್ನು ತೋರಿದ್ದಾರೆ.

ಈಗ ನೀವು ಮೈತ್ರಿ ಅಂತ ಹೇಳುತ್ತಿದ್ದೀರಿ ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ವಿರುದ್ಧ ಪ್ರಕರಣ ದಾಖಲಾಗಿತ್ತು, ಇದನ್ನೆಲ್ಲ ಮರೆತು ನಾವು ಹೇಗೆ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಂಡು ಅವರ ಅಭ್ಯರ್ಥಿಯ ಪರ ಪ್ರಚಾರ ಮಾಡುವುದು, ಎಂದು ನೇರವಾಗಿ ನಾಯಕರನ್ನು ಕಾರ್ಯಕರ್ತರು ಪ್ರಶ್ನಿಸಿದರು.

ಇಷ್ಟಕ್ಕೆ ಮುಗಿಯಲಿಲ್ಲ ಜೆಡಿಎಸ್ನ ಕಾರ್ಯಕರ್ತರು ಕೊನೆಗೆ ಬಿಜೆಪಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೈ ಎಂದು ಕೂಗಿದರು, ಹಾಗೂ ಮಾಜಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು ನಮ್ಮ ಬಳಿ ಬಂದು ಮತ ಕೇಳಲು ಆ ಮೇಲೆ ನೋಡುತ್ತೇವೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಗಲಾಟೆ ತೀವ್ರತೆಯನ್ನು ಪಡೆಯುವುದನ್ನು ನೋಡಿ ಸಚಿವ ಜಿಟಿ ದೇವೇಗೌಡ ಅವರು ಎದ್ದು ನಿಂತು ಕೈಮುಗಿದು ಕಾರ್ಯಕರ್ತರಿಗೆ ಗಲಾಟೆ ನಿಲ್ಲಿಸುವಂತೆ ಕೇಳಿಕೊಂಡರು ಆದರೂ ಜಗ್ಗದ ಕಾರ್ಯಕರ್ತರು ಮೈತ್ರಿ ಸರ್ಕಾರದ ವಿರುದ್ಧ ವಿರೋಧವನ್ನು ವ್ಯಕ್ತ ಪಡಿಸಿದರು ಕೊನೆಯಲ್ಲಿ ಸಚಿವರೇ ಸ್ಟೇಜ್ ಬಿಟ್ಟು ಕೆಳಗಿಳಿದು ಕಾರ್ಯಕರ್ತರ ಸಮಾಧಾನಕ್ಕೆ ಯತ್ನಿಸಿದರು, ಆದರೂ ಕಾರ್ಯಕರ್ತರು ಜಗ್ಗಲಿಲ್ಲ.

LEAVE A REPLY

Please enter your comment!
Please enter your name here