ಜಪಾನಿನ ಈ ವಿಧಾನ ಅನುಸರಿಸಿದರೆ ಯಾವುದೇ ಕೆಲಸದಲ್ಲಿ ಎಕ್ಸ್ಪರ್ಟ್ ಆಗ್ತೀರ!

0
3461

ಕೆಲವು ವ್ಯಕ್ತಿಗಳು ಒಂದು ಕೆಲಸವನ್ನು ಮಾಡಲು ದೃಡವಾದ ನಿರ್ಧಾರ ತೆಗೆದುಕೊಳ್ಳುತ್ತಾರೆ .ಆದರೆ ಅದು ಸ್ವಲ್ಪ ದಿನಗಳಲ್ಲಿ ಆಸಕ್ತಿ ಕಡಿಮೆ ಆಗುತ್ತದೆ. ಅದನ್ನು ಅರ್ಧಕ್ಕೆ ನಿಲ್ಲಿಸಿ ಬೇರೆ ಏನಾದರೂ ಮಾಡಬೇಕು ಎಂದು ಇನ್ನೊಂದು ನಿರ್ಧಾರ ತೆಗೆದುಕೊಳ್ಳುತ್ತಾರೆ. ಅದನ್ನೂ ಕೂಡ ಅವರು ಪೂರ್ತಿ ಮಾಡುವುದಿಲ್ಲ.

ಇನ್ನೂ ಕೆಲವರು ಇರ್ತಾರೆ. ಅವರು ಯಾವುದೇ ಕೆಲಸವನ್ನು ಮಾಡುವುದಕ್ಕೆ ಮೊದಲು ಅದು ನನಗೆ ಆಗುವುದಿಲ್ಲ ಎಂದು ಮೊದಲೇ ಕೈ ಚೆಲ್ಲುತ್ತಾರೆ.ಕಾರಣ ಅ ಕೆಲಸ ಅವರಿಗೆ ದೊಡ್ಡದು ಅನ್ನಿಸುತ್ತದೆ.

ಇದಕ್ಕೆ ಕಾರಣ ನಮ್ಮ ಮೈಂಡ್ ಮತ್ತು ಮನಸ್ಸು ತಕ್ಷಣ ಬದಲಾವಣೆಗೆ ಸ್ಪಂದಿಸುವುದಿಲ್ಲ.ಉದಾಹರಣೆಗೆ ಬೆಳಿಗ್ಗೆ ಬೇಗ ಎದ್ದು ವ್ಯಾಯಾಮ ಮಾಡಬೇಕು, ಓದಬೇಕು, ಬರೆಯಬೇಕು ಎಂದು ರಾತ್ರಿ ನಿರ್ಧಾರ ಮಾಡಿ ಮಲಗ್ತೀರ . ಆದರೆ ಬೆಳಿಗ್ಗೆ ಬೇಗ ಏಳುವುದೇ ಇಲ್ಲ. ಇನ್ನು ಕೆಲವೊಮ್ಮೆ ಎರಡು ದಿನ ಬೇಗ ಏಳ್ತೀರ. ಆದರೆ ಮೂರನೇ ದಿನ ಮತ್ತೆ ಏಳುವುದೇ ಇಲ್ಲ.

ಲವ್ ಫೆಲ್ಯೂರ್ ಆದವರು , ಜೀವನದಲ್ಲಿ ನೊಂದವರು ಬದಲಾಗಬೇಕು ಎಂದು ತೀರ್ಮಾನಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದರೆ ಎರಡು ದಿನ ಆದ ಮೇಲೆ ಅದೇ ಹಳೆಯ ಚಿಂತೆಗೆ ಒಳಗಾಗುತ್ತಾರೆ.

ಇದಕ್ಕೆ ಪರಿಹಾರ ಏನು ? ಕಷ್ಟಕರವಾದ ಕೆಲಸ ಸುಲಭವಾಗಿಸುವುದು ಹೇಗೆ ? ಎಷ್ಟೇ ದೊಡ್ಡ ಕೆಲಸವಾದರೂ ಅದರಲ್ಲಿ ಎಕ್ಸ್ ಪರ್ಟ್ ಆಗುವುದು ಹೇಗೆ ? ಒಳ್ಳೆಯ ಅಭ್ಯಾಸವನ್ನು ನಮ್ಮಲ್ಲಿ ರೂಡಿಸಿಕೊಳ್ಳುವುದು ಹೇಗೆ ? ಇದಕ್ಕೆ ಉತ್ತಮ ವಿಧಾನವಿದೆ. ಅದನ್ನು KAIZEN ಎಂದು ಕರೆಯಲಾಗುತ್ತದೆ. ಈ ವಿಧಾನ ಜಪಾನಿನ ಜನರು ಬಳಸುತ್ತಾರೆ.ಕೈಜನ್ ಅಂದ್ರೆ ಯಾವುದೇ ದೊಡ್ಡ ಕೆಲಸವನ್ನು ಚಿಕ್ಕ ಚಿಕ್ಕದಾಗಿ ಮಾಡಿ ಅದನ್ನು ಮುಂದುವರೆಸುತ್ತಾ ಹೋಗಿ ಅದರಲ್ಲಿ ಸಫಲತೆಯನ್ನು ಕಾಣುತ್ತಾರೆ.

ನಾವೂ ಕೂಡ ಈ ಕೈಜನ್ ಮೆತಡ್’ನ ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಹವ್ಯಾಸವನ್ನು ರೂಢಿಸಿಕೊಳ್ಳಬಹುದು. ಉದಾಹರಣೆಗೆ ನೀವು ದಿನ ವ್ಯಾಯಾಮ ಮಾಡಬೇಕು ಅಂದುಕೊಂಡಿದ್ದೀರಿ‌. ಪ್ರತಿ ದಿನ ಒಂದು ಅಥವಾ 2 ಗಂಟೆ ವ್ಯಾಯಾಮ ಸಡನ್ನಾಗಿ ಮಾಡಬೇಡಿ. ಮೊದಲು ಎರಡು ಪುಷ್ ಅಪ್ ಮತ್ತು ಇತರ ಸಣ್ಣ ವ್ಯಾಯಾಮವನ್ನು 5 ನಿಮಿಷ ಮಾತ್ರ ಮಾಡಿ.ನಂತರ ಎರಡನೇ ದಿನ ಇದರ ಸಂಖ್ಯೆ ಮತ್ತು ಸಮಯ ಹೆಚ್ಚು ಮಾಡುತ್ತಾ ಹೋಗಿ . ಕೊನೆಗೆ ಅದು ನಿಮಗೆ ಅಭ್ಯಾಸವಾಗಿ ಹೋಗುತ್ತದೆ. ಹೀಗೆ ಯಾವುದಾದರೂ ವಿಷಯ ತಿಳಿದುಕೊಳ್ಳಬೇಕಿದ್ದರೆ ಅದನ್ನು ಪ್ರತಿ ದಿನ ಸ್ವಲ್ಪ ಸ್ವಲ್ಪವೇ ತಿಳಿಯುವ ಅಭ್ಯಾಸ ಮಾಡಿಕೊಳ್ಳಿ. ನಂತರ ಮುಂದುವರೆಯುತ್ತಾ ಅದರ ಬಗ್ಗೆ ಆಸಕ್ತಿ ಮೂಡಿ ನೀವು ಆ ವಿಷಯದಲ್ಲಿ ಪರಿಣಿತರಾಗ್ತೀರ .

ಇನ್ನೂ ಹೇಳಬೇಕೆಂದರೆ ಬೆಳಿಗ್ಗೆ 5 ಗಂಟೆಗೆ ಏಳಬೆಕೆಂದರೆ ಮೊದಲು ನೀವು 7 ಗಂಟೆಗೆ ಏಳಬೇಕು. ನಂತರ ,6.45 ಗಂಟೆಗೆ ಏಳಿ. ನಂತರ 6.30 , ನಂತರ 6 ನಂತರ 5.30 ಕೊನೆಗೆ 5 ಗಂಟೆಗೆ ಏಳುವ ಅಭ್ಯಾಸ ಮಾಡಿಕೊಳ್ಳಿ, ನೋಡಿದಿರಾ ಜಪಾನ್ ನವರು ಹೇಗೆ ಸಕ್ಸಸ್ ಆದರು ಎಂದು .

LEAVE A REPLY

Please enter your comment!
Please enter your name here