ಯುರೋಪಿಯನ್ ದೇಶಗಳಲ್ಲಿ ಸಾವಿರಾರು ಜನರ ಪ್ರಾಣಕಸಿದ ಕೊರೋನ ವೈರಸ್ ಪ್ರಪಂಚದ ಎಲ್ಲಾ ನಾಗರಿಕರ ಎದೆಯಲ್ಲಿ ಆತಂಕ ಸೃಷ್ಟಿ ಮಾಡಿರುವುದು ಸುಳ್ಳಲ್ಲ, ಇನ್ನು ದೇಶದಲ್ಲಿ ಕರೋನ ಬಿಸಿ ಎಷ್ಟಿದೆಯೆಂದರೆ ದೇಶದ ಪ್ರಧಾನಿಗಳಾದ ನರೇಂದ್ರ ಮೋದಿಯವರು ಮುಂದಿನ ಭಾನುವಾರ ಸಾರ್ವಜನಿಕ ಸ್ವಯಂ ಕರ್ಫ್ಯೂ ಘೋಷಣೆ ಮಾಡಿದ್ದಾರೆ, ಕಣ್ಣಿಗೆ ಕಾಣದ ಈ ಪ್ರಚಂಡ ವೈರಸ್ರಭಸದಲ್ಲಿ ದೇಶವನ್ನು ಹಾಗು ರಾಜ್ಯವನ್ನು ವ್ಯಾಪಿಸುತ್ತಿದೆ, ಇಂತಹ ಭಯದ ವಾತಾವರಣದಲ್ಲಿ ವ್ಯಕ್ತಿಯೊಬ್ಬ ಸಾರ್ವಜನಿಕ ಸ್ಥಳದಲ್ಲಿ ಕರ್ಚಿಫ್ ಇಲ್ಲದೆ ಸೀನಿದ್ದನೆ ಇದರಿಂದ ಭಯಗೊಂಡ ಅಲ್ಲಿನ ಜನರು ಆತನಿಗೆ ಮನಸ್ಸೋ ಇಚ್ಛೆ ಹಿಗ್ಗಾಮುಗ್ಗಥಳಿಸಿದ್ದಾರೆ.
ಈ ಘಟನೆ ನಡೆದಿರುವುದು ಮಹಾರಾಷ್ಟ್ರದಲ್ಲಿ, ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಬೈಕ್ ಸವಾರನೊಬ್ಬ ದಾರಿಯಲ್ಲಿ ಸಂಚರಿಸುತ್ತಾ ಸೀನಿದ್ದಾನೆ ಅಷ್ಟೇ, ಕೊರೋನ ಭಯ ಎಷ್ಟಿದೆ ಅಂದರೆ ಯಾರಾದರೂ ದಾರಿಯಲ್ಲಿ ಸೀನಿದರೆ ಸಾಕು ಅಥವಾ ಕೆಮ್ಮಿದರೆ ಸಾಕು ಅವರನ್ನು ಅಪರಾಧಿ ಎನ್ನುವ ದೃಷ್ಟಿಯಲ್ಲಿ ಜನರು ನೋಡಲು ಪ್ರಾರಂಭಿಸಿದ್ದಾರೆ, ಇನ್ನು ಈ ಮಾತಿಗೆ ಉದಾಹರಣೆಯಂತೆ ಮೇಲೆ ಸೀನಿದ ಬೈಕ್ ಸವಾರನ ಬೈಕ್ ಅಡ್ಡಗಟ್ಟಿ ಜನರು ಸ್ಥಳದಲ್ಲಿ ಹಿಡಿದು ಹೊಡೆದಿದ್ದಾರೆ.
ಇನ್ನೂ ಮಾಹಿತಿಯ ಪ್ರಕಾರ ಜನರು ಮೊದಲು, ಆತನನ್ನು ಅಡ್ಡಗಟ್ಟಿ ಕೊರೋನ ಬಯ ಜನರಲ್ಲಿ ಮನೆ ಮಾಡಿದೆ, ಈ ವೈರಸ್ ನಿಂದ ತಪ್ಪಿಸಿಕೊಳ್ಳಲು ಮುಖಕ್ಕೆ ಮಾಸ್ಕ್ ಧರಿಸ ಬೇಕು, ಅದರಲ್ಲೂ ಸೀನುವಾಗ ಅಥವಾ ಕೆಮ್ಮುವಾಗ ಬಾಯಿಗೆ ನಿಮ್ಮ ಕೈ ಅಡ್ಡ ಇಡಬೇಕು ಎಂಬುವ ಸಾಮಾನ್ಯ ಜ್ಞಾನವಿದ್ದರೂ, ಈ ರೀತಿ ಮಾಡುತ್ತಿದ್ದಿ ಎಂದು ಜನರು ಪ್ರಶ್ನಿಸಿದ್ದಕ್ಕೆ ಆ ಯುವಕ ಜನರೊಂದಿಗೆ ಮಾತಿನ ಚಕಮಕಿಗೆ ಇಳಿದನಂತೆ, ಮಾತು ಅತಿಯಾದ ನಂತರವೇ ಜಗಳಕ್ಕೆ ತಿರುಗಿ ನಂತರ ಸಾರ್ವಜನಿಕರು ಆತನನ್ನು ಹಿಗ್ಗಾಮುಗ್ಗಥಳಿಸಿದ್ದಾರೆ ಎನ್ನಲಾಗಿದೆ.
ಅದೇನೇ ಇರಲಿ ಸಾರ್ವಜನಿಕರು ದಯಮಾಡಿ ನೆಗಡಿ ತಲೆನೋವು ಅಥವಾ ಕೆಮ್ಮು ಈ ರೀತಿಯ ಕೊರೋನ ವೈರಸ್ ಲಕ್ಷಣಗಳು ನಿಮ್ಮಲ್ಲಿ ಇದ್ದರೆ ಮೊದಲು ಮಾಸ್ಕ ಧರಿಸಿ ಹಾಗೂ ಪರೀಕ್ಷೆಯನ್ನು ಮಾಡಿಸಿಕೊಳ್ಳಿ, ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಬರೆದು ತಿಳಿಸಿ.