ಮನುಷ್ಯನಿಗೆ ಯಾವ ಆಹಾರ ಸರಿ, ಯಾವ ಆಹಾರದಿಂದ ಯಾವ ಭಾವನೆಗಳು ಉತ್ಪತ್ತಿಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ, ಇನ್ನು ಮೇಲೆ ತಿಳಿಸಿರುವ ಮೀನು ಮಾಂಸ ಈರುಳ್ಳಿ-ಬೆಳ್ಳುಳ್ಳಿ ಗಳು ನಿಜಕ್ಕೂ ಪ್ರೋಟೀನ್ ತುಂಬಿರುವ ಆಹಾರ ಆಗಿರುತ್ತದೆ, ಇವುಗಳು ನಮ್ಮ ದೇಹಕ್ಕೆ ಒಳ್ಳೆಯ ಆರೋಗ್ಯವನ್ನು ನೀಡುತ್ತದೆ ಆದರೆ ನಮ್ಮ ಮನಸ್ಸು ಹಿಡಿತದಲ್ಲಿ ಇಟ್ಟುಕೊಳ್ಳಲು, ತಾಮಸ ಗುಣಗಳನ್ನು ಅಧಿಕ ಮಾಡುವ ಆಹಾರ ಸೇವನೆ ಮಾಡಬಾರದು, ಪ್ರತಿಯೊಬ್ಬ ಮನುಷ್ಯನಿಗೂ ಆಧ್ಯಾತ್ಮಿಕತೆ ಎನ್ನುವುದು ಬೇಕೇ ಬೇಕು, ನಾವು ನಮ್ಮ ಅಂತರಂಗದ ಕೊಳೆ ತೊಳೆದುಕೊಳ್ಳಲು ಆಧ್ಯಾತ್ಮ ಬಹಳ ಮುಖ್ಯ.
ನಮ್ಮ ಪ್ರಾಚೀನ ಕಾಲದಲ್ಲಿ ಶಾಸ್ತ್ರಗಳು ಕೆಲವು ದಿನಗಳನ್ನು ದೇವರು, ಮಡಿ, ಮೈಲಿಗೆ ಹಾಗೂ ಉಪವಾಸಗಳಿಗೆ ಮೀಸಲಿಡುತ್ತಿದ್ದರು, ಅಂತಹ ಸಮಯದಲ್ಲಿ ಈರುಳ್ಳಿ-ಬೆಳ್ಳುಳ್ಳಿ ಮಾಂಸ ಮೀನುಗಳನ್ನು ಸೇವನೆ ಮಾಡುತ್ತಿರಲಿಲ್ಲ, ದಿನಗಳಲ್ಲಿ ಯಾವುದೇ ಪದಾರ್ಥಗಳ ಸೇವನೆ ಸಹ ಇತಿ ಮಿತಿಯಲ್ಲಿ ಇರುತ್ತಿತ್ತು, ಹೀಗೆ ನಮ್ಮ ಬದುಕಿನಲ್ಲಿ ನವರಸಗಳು ಸಂದರ್ಭಗಳಿಗೆ ಅನುಗುಣವಾಗಿ ವರ್ತಿಸುತ್ತದೆ ಎಂದರೆ ತಪ್ಪಾಗುವುದಿಲ್ಲ.
ವಾಸ್ತವದಲ್ಲಿ ಹೇಳುವುದಾದರೆ ಈರುಳ್ಳಿ-ಬೆಳ್ಳುಳ್ಳಿ ಆಧುನಿಕ ಯುಗದಲ್ಲಿ ನಮ್ಮ ಆರೋಗ್ಯದ ಮೇಲೆ ಪ್ರಮುಖ ಪಾತ್ರ ವಹಿಸುತ್ತದೆ ಎಂದರೆ ತಪ್ಪಾಗುವುದಿಲ್ಲ, ಹೀಗಾಗಿ ನಮ್ಮ ಬಿಪಿ ಶುಗರ್, ಕೊಲೆಸ್ಟ್ರಾಲ್, ಹೃದಯ ಆರೋಗ್ಯ ಗಳನ್ನು ಉತ್ತಮವಾಗಿ ನೀಡುವಲ್ಲಿ ತಟ್ಟೆಗಳು ಪ್ರಮುಖ ಪಾತ್ರ ವಹಿಸುತ್ತದೆ.
ಮೀನು ಮಾಂಸ ತಿನ್ನುವುದು ಇತಿ ಮಿತಿಯಲ್ಲಿ ಸೇವನೆ ಮಾಡುವುದು ಸೂಕ್ತ, ಬದುಕು ಯಾವಾಗಲೂ ಒಂದು ಚೌಕಟ್ಟಿನಲ್ಲಿ ಇದ್ದರೆ ನೈತಿಕತೆಗೆ ಸನಿಹ ಆಗುತ್ತದೆ, ಅದೇ ರೀತಿ ಆಹಾರ ಸೇವನೆ ಸಹ ಒಂದು ಚೌಕಟ್ಟಿಗೆ ಒಳಪಡಬೇಕು, ಆಧ್ಯಾತ್ಮ ಎಂಬುದು ವಯಸ್ಸು ಅನುಭವದಿಂದ ತಾನೇ ತಾನಾಗಿ ಒಲಿದು ಬರುತ್ತದೆ,ಆದರೆ ಆಹಾರ ಎನ್ನುವುದು ನಮ್ಮ ಆರೋಗ್ಯ ಪರಿಸ್ಥಿತಿ ನೋಡಿಕೊಂಡು ಬಳಸಿದರೆ ಒಳ್ಳೆಯದು.
ಬದುಕು ತರಕ್ಕೆ ನಿಲುಕು ಅಂತಹುದು ಎಂದು ಹೇಳಬಹುದು,ಆಯಾ ಸಂದರ್ಭಕ್ಕೆ ತಕ್ಕಂತೆ ನಾವು ಹೇಗೆ ವರ್ತಿಸುತ್ತೇವೆ ಎನ್ನುವ ಸಂಗತಿ ಮನದಲ್ಲಿ ಇಟ್ಟುಕೊಳ್ಳುವಂತೆ ಆಹಾರ ಕ್ರಮ, ಋತು, ಸಂದರ್ಭ, ವಯಸ್ಸು, ಆರೋಗ್ಯ ಮತ್ತು ಮಾನಸಿಕ ಸ್ಥಿತಿಗಳನ್ನು ಅನುಸರಿಸಿದರೆ ಉತ್ತಮ, ಆಗ ಯಾವುದೇ ರೀತಿ ತೊಂದರೆ ಗಳು ಎದುರಾಗುವುದಿಲ್ಲ,ಆಯಾ ಕಾಲಕ್ಕೆ ತಕ್ಕಂತೆ ಆಹಾರ ಪದ್ಧತಿಗಳು ರೂಢಿ ಮಾಡಿಕೊಂಡು ಸಾತ್ವಿಕತೆ ಹಾದಿಯಲ್ಲಿ ನಡೆದುಕೊಂಡು, ಒಳ್ಳೆಯ ನಡತೆ ಗೆ ಹೆಸರು ವಾಸಿ ಎನಿಸಿಕೊಳ್ಳಿ.