ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಸೋಲಾರ್ ಕೀಟನಾಶಕ ಯಂತ್ರ..!! (SOLAR INSECTS TRAP)

0
7341

ಸೋಲಾರ್ ಕೀಟನಾಶಕ ಯಂತ್ರದ ಕಾರ್ಯವೈಖರಿ, ವಿಶೇಷತೆ, ಬಾಳಿಕೆ, ಉಪಯೋಗಗಳು, ಬೆಲೆ ಹಾಗೂ ಇನ್ನಿತರೆ ಸಂಪೂರ್ಣ ಮಾಹಿತಿಗಾಗಿ ರಚಿಸಲಾದ ವಿಶೇಷ ಲೇಖನ.

ನೀವು ನಾವೆಲ್ಲ ಇತ್ತೀಚಿನ ಕೆಲವು ವರ್ಷಗಳಿಂದ ಕಂಡಂತೆ ವರ್ಷದಿಂದ ವರ್ಷಕ್ಕೆ ಮಳೆಯು ನಿರಂತರವಾಗಿ ಕಡಿಮೆಯಾಗುತ್ತಿದ್ದು ಬರಗಾಲವು ಸೃಷ್ಟಿಯಾಗಿ ರೈತರೆಲ್ಲರು ಮಳೆ, ಅಂತರ್ಜಲ ಕುಸಿತ & ನೀರಿನ ಕೊರತೆಯಿಂದ ರೈತರು ಬೆಳೆಯಲು ಪ್ರಯತ್ನಿಸಿದ ಬೆಳೆಗಳು ಸರಿಯಾಗಿ ಬೆಳೆಯದೆ ಭೂಮಿ ಹದ ಮಾಡಲು, ಗೊಬ್ಬರ, ಬೀಜ, ಕೀಟನಾಶಕ ಕೊಂಡುಕೊಳ್ಳುವ ಸಲುವಾಗಿ ಹಣಖರ್ಚು ಮಾಡಿ ನಿರಂತರವಾಗಿ ರೈತರೆಲ್ಲರು ಸಾಲದ ಸುಳಿಗೆ ಸಿಲುಕುತ್ತಿದ್ದಾನೆ. ಹೇಗೋ ಇದ್ದಷ್ಟು, ಸಿಕ್ಕಷ್ಟು ನೀರನ್ನು ಹನಿ ನೀರಾವರಿಯಂತಾಹ ಮುಂತಾದ ರೀತಿಯಲ್ಲಿ ಹಾಗೂ ವಿದ್ಯುತ್ತಿನ ಅಭಾವ, ಸಮಸ್ಯೆಯ ನಡುವೆಯೂ ಹೊಂದಾಣಿಕೆ ಮಾಡಿಕೊಂಡು ಸ್ವಲ್ಪಸ್ವಲ್ಪನಾದ್ರು ಬೆಳೆಯಲು ಪ್ರಯತ್ನಿಸಿದರೆ ಬೆಳೆಗಳಿಗೆ ಅನೇಕಾನೇಕ ಶತ್ರು ಕೀಟಗಳು ಹುಟ್ಟಿಕೊಂಡು ಬೆಳೆಗಳೆಲ್ಲವೂ ಹೆಚ್ಚಾಗಿ ರೋಗಭಾದೆಗೆ ತುತ್ತಾಗಿ ನಾಶವಾಗುತ್ತಿವೆ.

ಇತ್ತೀಚೆಗಂತೂ ಬೆಳೆಗಳಿಗೆ ಹಾನಿಮಾಡಲೆಂದೇ ದಿನಕ್ಕೊಂದರಂತೆ ಕೀಟಗಳು ಹುಟ್ಟಿಕೊಳ್ಳುತ್ತಿರುವುದರಿಂದ ಕೃಷಿ ವಿಜ್ಞಾನಿಗಳಿಗೂ ಸವಾಲಾಗಿ ಅರಿಯದಂತಾಹ ಕೆಲವು ರೋಗ, ಕೀಟಭಾದೇಗೆ ಬೆಳೆಗಳು ಸಿಕ್ಕು & ಆ ರೋಗ ಹಾಗೂ ಕೀಟಗಳು ನಾಶಪಡಿಸಲು ಸರಿಯಾಗಿ ಕೀಟನಾಶಕಗಳು ಸಿಗದೇ ಒಂದುವೇಳೆ ಸಿಕ್ಕರೂ ತುಂಬಾ ಹೆಚ್ಚು ಬೆಲೆಗೆ ಸಿಗುವುದರಿಂದ ರೈತರೆಲ್ಲರು ಕೀಟನಾಶಕದ ಸಲುವಾಗಿ ತುಂಬಾ ಹಣ ವ್ಯಹಿಸುವ ಪರಿಸ್ಥಿತಿ ನಿರ್ಮಾಣಗಾಗಿದೆ. ಮತ್ತು ಆ ರಾಸಾಯನಿಕ ಕೀಟನಾಶಕಗಳ ಬಳಕೆಯಿಂದ ಕೃಷಿ ಭೂಮಿಯು ಸತ್ವವನ್ನು ಕಳೆದುಕೊಂಡು ಕೃಷಿ ಭೂಮಿಯ ಮಣ್ಣು ಮಾಲಿನವಾಗಿ ಕೃಷಿಮಾಡಲು ಯೋಗ್ಯವಲ್ಲದ ಭೂಮಿಯಾಗಿ ಮಾರ್ಪಾಡಾಗುತ್ತಿದೆ. ಮತ್ತು ಬೆಳೆಗಳಿಗೆ ರಾಸಾಯನಿಕ ಕೀಟನಾಶಕಗಳನ್ನು ಸಿಂಪರಣೆ ಮಾಡುವುದರಿಂದ ಆಹಾರವು ಸಹ ವಿಷವಾಗುತ್ತಿದ್ದು ನಾವೆಲ್ಲರೂ ವಿಷಪೂರಿತ ಆಹಾರವನ್ನು ಸೇವಿಸುವ ದುಃಸ್ಥಿತಿ ಎದುರಾಗಿದೆ.

ಇದಕ್ಕೆಲ್ಲ ಪರಿಹಾರವಾಗಿ ನಾಗರಿಕರು ಹಾಗೂ ರೈತರೆಲ್ಲರಿಗೂ ಖುಷಿಯವಿಚಾರವೇನೆಂದರೆ ಇದನ್ನೆಲ್ಲ ಮನಗಂಡು ಎಲ್ಲ ಬೆಳೆಗಳಿಗೆ ಮಾರಕವಾದಂತಹ ಕೀಟಗಳನ್ನು ರಾಸಾಯನಿಕ ವಸ್ತುಗಳನ್ನು ಬಳಕೆ ಮಾಡದೆ ಕೀಟಗಳನ್ನು ಸಂಪೂರ್ಣವಾಗಿ ನಾಶಪಡಿಸುವ ಉದ್ದೇಶದಿಂದ ಪರಿಸರ ಸ್ನೇಹಿ, ರಾಸಾಯನಿಕ, ವಿಷ ಮುಕ್ತ, ಸಾವಯವವಾಗಿ ಬೆಳೆಗಳನ್ನು ಬೆಳೆಯುವ ದೃಷ್ಟಿಯಿಂದ “ಸೋಲಾರ್ ಕೀಟನಾಶಕ ಯಂತ್ರ SOLAR INSECTS TRAP ವನ್ನು ಸಂಶೋಧನೆ ಮಾಡಿ ಅದನ್ನು ಅನೇಕ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಕೃಷಿ ವಿಜ್ಞಾನಿಗಳಿಂದ ಎಲ್ಲಾ ಬೆಳೆಗಳಿಗೂ ಅಧ್ಯಯನ, ಪರೀಕ್ಷೆ, ಪ್ರಯೋಗ ಮಾಡಿ, ಪ್ರಯೋಗವು ಯಶಸ್ವಿಯಾದನಂತರ ಈ ಸೋಲಾರ್ ಕೀಟನಾಶಕ ಯಂತ್ರವನ್ನು ತಯಾರಿಸಿ, ಪರೀಕ್ಷಿಸಿ, ಹೊಸ,ವಿಶೇಷ ತಂತ್ರಜ್ಞಾನಗಳಿಗೆ ಮಾರ್ಪಡಿಸಿ ವಿಷ ಮುಕ್ತ ಆಹಾರದ ಲಾಭ ಪ್ರಜೆಗಳಿಗೆ, ಕೃಷಿ ಭೂಮಿ ಹಾಗೂ ರಾಸಾಯನಿಕ ಔಷಧಿ ಖರ್ಚು ಉಳಿಯುವುದು ರೈತರಿಗೆ ಎನ್ನುವ ವ್ಯಾಖ್ಯಾನದಿಂದ ರೈತನಿಂದ ತಯಾರಿಸಲಾದ, ರೈತನಿಗೆ, ರೈತನಿಂದಲೇ ನೇರವಾಗಿ ಎಲ್ಲಾ ರೈತರಿಗೆ ಕೈಗೆಟಕುವ ದರದಲ್ಲಿ ರೈತರಿಗೆ ನೀಡಲಾಗುತ್ತಿದೆ.

ರೈತರೆಲ್ಲರು ಸೋಲಾರ್ ಕೀಟನಾಶಕ ಯಂತ್ರ SOLAR INSECTS TRAP ವನ್ನು ಅಳವಡಿಸಿಕೊಂಡು ರೈತರ ಖರ್ಚು, ಕೃಷಿ ಭೂಮಿಯನ್ನು ಉಳಿಸಿ, ಪರಿಸರ ಸ್ನೇಹಿ, ರಾಸಾಯನಿಕ ಮುಕ್ತ, ಸಾವಯವ ಬೆಳೆಗಳನ್ನು ಬೆಳೆದು ವಿಷಮುಕ್ತ ಆಹಾರವನ್ನು ಸೇವಿಸಲು ಕೈಜೋಡಿಸಬೇಕಾಗಿದೆ.

ಸೋಲಾರ್ ಕೀಟನಾಶಕ ಯಂತ್ರದ ಕಾರ್ಯವೈಖರಿ :ಈ ಯಂತ್ರದಲ್ಲಿ ಕೀಟಗಳನ್ನು ಆಕರ್ಷಿಸುವಂತಹ ವಿಶೇಷ ತಂತ್ರಜ್ಞಾನವನ್ನು ಒಳಗೊಂಡಂತಹ ಬೆಳಕು (ಬಲ್ಬ್) ನ್ನು ಅಭಿರುಧಿಪಡಿಸಿದ್ದು , ಆ ಬೆಳಕು (ಬಲ್ಬ್) ಪ್ರತಿದಿನ ಸಂಜೆ ಸಮಯದಲ್ಲಿ ಕೀಟಗಳು ಬೆಳೆಗಳನ್ನು ನಾಶಪಡಿಸುವ ಸಕ್ರಿಯವಾಗಿ ಕ್ರಿಯಾಶೀಲವಾಗುವ ಸಮಯದಲ್ಲಿ ವಿಶೇಷ ಕೀಟಗಳನ್ನು ಆಕರ್ಷಿಸುವ ಬೆಳಕು (ಬಲ್ಬ್ ) ಸ್ವಯಂಚಾಲಿತವಾಗಿ ಪ್ರಾರಂಭಗೊಂಡು (Automatic ON) ರಾತ್ರಿ ಸಮಯದಲ್ಲಿ ಸ್ವಯಂಚಾಲಿತವಾಗಿ ನಿಲ್ಲುತ್ತದೆ (Automatic OFF). ಅಂದ್ರೆ ಸಂಜೆ ಸುಮಾರು 7.00pm ಇಂದ ರಾತ್ರಿ 10.00pm ವರೆಗೂ, ಅದು ಚಾಲನೆಯಲ್ಲಿದ್ದಂತಹ ಸಮಯದಲ್ಲಿ ಕೀಟಗಳು ಆ ಬೆಳಕಿಗೆ ಆಕರ್ಷಣೆಹೊಂದಿ ಬೆಳಕಿನ ಕೆಳಗಿರುವ ಬುಟ್ಟಿಯಲ್ಲಿನ ನೀರಿನಲ್ಲಿ ಬಿದ್ದು ಸಾಯುವವು.

ಸೋಲಾರ್ ಕೀಟನಾಶಕ ಯಂತ್ರದ ಬೆಳಕು ಕೀಟಗಳನ್ನು ಆಕರ್ಷಿಸುವ ವಿಸ್ತೀರ್ಣ : ಬೆಳೆಗಳ ಎತ್ತರಕ್ಕನುಗುಣವಾಗಿ 1.5 ಎಕರೆ ಇಂದ 2.00 ಏಕರೆವರಿಗಿನ ವಿಸ್ತೀರ್ಣದಲ್ಲಿರುವ ಕೀಟಗಳನ್ನು ಆಕರ್ಷಿಸುವುದು.

ಸೋಲಾರ್ ಕೀಟನಾಶಕ ಯಂತ್ರವನ್ನು ಬಳಸಬಹುದಾದಂತಹ ಬೆಳೆಗಳು : ಹಣ್ಣು, ತರಕಾರಿ, ತೋಟಗಾರಿಕೆ, ಅರಣ್ಯ ಬೆಳೆಗಳಂತಹ ಎಲ್ಲಾ ಬೆಳೆಗಳಿಗೂ ಇದನ್ನು ಬಳಸಬಹುದು.

ಸೋಲಾರ್ ಕೀಟನಾಶಕ ಯಂತ್ರದಿಂದ ನಾಶವಾಗುವಂತಹ ಕೀಟಗಳು : ಸೈನಿಕ ಹುಳು, ರಸ ಹೀರುವ ಕೀಟ, ಕಾಯಿ ಕೊರಕ, ಕಾಂಡ ಕೊರಕ, ಬೇರು ಹುಳ, ಥ್ರಿಪ್ಸ್, ಎಲೆ ತಿನ್ನುವ ಕೀಟ, ಧ್ವಮರಿ, ಲೀಫ್ ಮೈನರ್ಸ್, ಮಥ್, ಲಾರ್ವ, ಮುಂತಾದ ಪ್ರತಿಯೊಂದು ಹಾರಾಡುವ ಕೀಟಗಳು ಈ ಯಂತ್ರದಿಂದ ನಾಶವಾಗುವವು ಆದ್ರೆ ಓಡಾಡುವ ಕೀಟಗಳು ನಾಶವಾಗುವುದಿಲ್ಲ ಆದ್ರೆ ಮುಖ್ಯವಾಗಿ ತಿಳಿಯಬೇಕಾಗಿರುವ ವಿಷಯವೇನೆಂದರೆ ಓಡಾಡುವ ಕೀಟಗಳು ಜನಿಸುವುದು ಹಾರಾಡುವ ಕೀಟಗಳ ಮೊಟ್ಟೆಗಳಿಂದ ಅಂದ್ರೆ ಪೋಷಕ ಕೀಟಗಳೆಲ್ಲವು ನಾಶವಾಗುವವು, ಪೋಷಕ ಕೀಟಗಳು ನಾಶವಾದನಂತರ ಓಡಾಡುವ ಕೀಟಗಳು ಜನಿಸಲು ಸಾಧ್ಯವಿಲ್ಲ.

ಸೋಲಾರ್ ಕೀಟನಾಶಕ ಯಂತ್ರದ ಬಾಳಿಕೆ : 3 ರಿಂದ 5 ವರ್ಷ.

ಸೋಲಾರ್ ಕೀಟನಾಶಕ ಯಂತ್ರವನ್ನು ಬಳಸುವುದರಿಂದ ಆಗುವ ಉಪಯೋಗಗಳು : ಕೃಷಿ ಭೂಮಿಯ ಮಣ್ಣು ಮಲಿನತೆ, ಹಾಳಾಗುವುದು ತಡೆಗಟ್ಟುವುದು, ವಿಷ ಆಹಾರದ ಸೇವನೆ ತಪ್ಪುವುದು, ರೈತರಿಗೆ 80% ರಿಂದ 95% ವರಿಗೂ ರಾಸಾಯನಿಕ ಕೀಟನಾಶಕಗಳ ಖರ್ಚು ಉಳಿಯುವುದು, ಮತ್ತು ಇದನ್ನು ಸ್ಥಾಳಂತರಿಸಬಹುದು, ಮುಂತಾದವು.

ಆದ್ದರಿಂದ ಸೋಲಾರ್ ಕೀಟನಾಶಕ ಯಂತ್ರ SOLAR INSECTS TRAPವನ್ನು ರೈತರೆಲ್ಲರು ಅಳವಡಿಸಿಕೊಂಡು ರೈತರ ಖರ್ಚು, ಕೃಷಿ ಭೂಮಿಯನ್ನು ಉಳಿಸಿ, ಪರಿಸರ ಸ್ನೇಹಿ, ರಾಸಾಯನಿಕ ಮುಕ್ತ, ಸಾವಯವ ಬೆಳೆಗಳನ್ನು ಬೆಳೆದು ವಿಷಮುಕ್ತ ಆಹಾರವನ್ನು ಸೇವಿಸಲು ಕೈಜೋಡಿಸಬೇಕಾಗಿದೆ.

ಸೋಲಾರ್ ಕೀಟನಾಶಕ ಯಂತ್ರದ ಬೆಲೆ : ಕರ್ನಾಟಕದಲ್ಲಿ ರೂ-4875/-, ಹೊರರಾಜ್ಯಗಳಿಗೆ ರೂ 4950/-.

ಈ ಸೋಲಾರ್ ಕೀಟನಾಶಕ ಯಂತ್ರವನ್ನು ಬೆಂಗಳೂರಿನ IIHR, ಹಾಗೂ GKVK, ಮಂಗಳೂರಿನ CPRI, ದಾವಣಗೆರೆಯ ICER, ಧಾರವಾಡ-ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯ, ಶಿವಮೊಗ್ಗದ ಅಡಿಕೆ ಸಂಶೋಧನಾ ಕೇಂದ್ರ, ಮುನಿರಬಾದ್ ನ ತೋಟಗಾರಿಕಾ ಕಾಲೇಜು, ಹೈದ್ರಾಬಾದ್ ನ ಇಕ್ರಿಸಾಟ್ ಸಂಸ್ಥೆಗಳಿಂದ ಮತ್ತು ಇನ್ನು ಹತ್ತಾರು ಕೃಷಿ ವಿಜ್ಞಾನಿಗಳು, ಹಲವಾರು ಕೀಟ ಶಾಸ್ತ್ರಜ್ಞರಿಂದ ಪರೀಕ್ಷೆ ಮತ್ತು ಪ್ರಯೋಗಕ್ಕೊಳಪಟ್ಟು ಯಶಸ್ವಿಯಾಗಿ ಅವರೆಲ್ಲರ ಮತ್ತು ಬಳಕೆದಾರರ ಮೆಚ್ಚುಗೆಗೆ ಪಾತ್ರವಾಗಿರುತ್ತದೆ. ಇದರಲ್ಲಿ ಕೀಟಗಳನ್ನು ಆಕರ್ಷಿಸುವಂತಹ ವಿಶೇಷವಾದ ಗುಣಗಳನ್ನು ಹೊಂದಿರುವ ಅಂತರರಾಷ್ಟ್ರೀಯ ಗುಣಮಟ್ಟದ ಬೆಳಕು (ಬಲ್ಬ್) ನ್ನು ಬಳಸಲಾಗಿದೆ. ಈ MGK ಸೋಲಾರ್ ಕೀಟನಾಶಕ ಯಂತ್ರವು ಸಂಪೂರ್ಣ ಸ್ವಯಂ ಚಾಲಿತ, ಅಧಿಕ ಬಾಳಿಕೆ ಮತ್ತು 6 ತಿಂಗಳ ವಾರಂಟಿಯೊಂದಿಗೆ ಉಚಿತ ಸೇವೆಯನ್ನು ಸಹ ನೀಡಲಾಗುತ್ತದೆ. ಇದು ತುಕ್ಕು ಮತ್ತು ನೀರು ನಿರೋಧಕವನ್ನೂ ಸಹ ಹೊಳಗೊಂಡಿರುವಂತಹದ್ದಾಗಿದ್ದು ಇದನ್ನು ಎಲ್ಲ ತರಹದ ತರಕಾರಿ, ತೋಟಗಾರಿಕೆ, ವಾಣಿಜ್ಯ, ಅರಣ್ಯ ಬೆಳೆಗಳಿಗೆ ಬಳಸಬಹುದಾಗಿದೆ.

ಇದನ್ನು ರಾಸಾಯನಿಕ ಕೀಟನಾಶಕಗಳ ಮುಕ್ತ, ವಿಷಮುಕ್ತ ಆಹಾರದ ಲಾಭ ಪ್ರಜೆಗಳಿಗೆ, ಕೃಷಿ ಭೂಮಿ & ರಾಸಾಯನಿಕ ಔಷಧಿ ಖರ್ಚು ಉಳಿಯುವುದು ರೈತರಿಗೆ ಎನ್ನುವ ವ್ಯಾಖ್ಯಾನದಿಂದ ರೈತನಿಂದ ಸಂಶೋಧಿಸಲ್ಪಟ್ಟ ಈ ಕೀಟನಾಶಕ ಯಂತ್ರವನ್ನು ರೈತನಿಂದ, ರೈತರಿಗಾಗಿ, ರೈತರಿಂದಲೇ, ರೈತರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಎಲ್ಲ ರೈತರಿಗೆ ಕೈಗೆಟಕುವ ದರದಲ್ಲಿ ತಲುಪಿಸುವ ಪ್ರಯತ್ನ ಮಾಡಲಾಗುತ್ತಿದ್ದು ರೈತರೆಲ್ಲರು ಈ MGK ಸೋಲಾರ್ ಕೀಟನಾಶಕ ಯಂತ್ರವನ್ನು ಅಳವಡಿಸಿಕೊಂಡು, ಸಾವಯಾವ, ಪರಿಸರ ಸ್ನೇಹಿ, ರಾಸಾಯನಿಕ ಮುಕ್ತ, ವಿಷಮುಕ್ತ ಬೆಳೆಗಳನ್ನು ಬೆಳೆದು , ರೈತರ ಕೃಷಿ ಭೂಮಿ & ಔಷಧಿ ಖರ್ಚು ಉಳಿಸಲು ರೈತರೆಲ್ಲರೂ ಕೈ ಜೋಡಿಸಬೇಕಾಗಿದೆ.

ಸೋಲಾರ್ ಕೀಟನಾಶಕ ಯಂತ್ರದ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಗೌಡ್ರು ನಾಗರಾಜ, Phone – 6363737439.

LEAVE A REPLY

Please enter your comment!
Please enter your name here