ಕಂಕಣ ಭಾಗ್ಯ ತಡವಾಗಲು ಈ ದೋಷಗಳೇ ಮುಖ್ಯ ಕಾರಣ..!!

0
8105

ಕಾಲ ಬದಲಾಗುತ್ತಿದೆ ಅದರ ಜೊತೆಯಲ್ಲಿ ಪ್ರತಿಯೊಂದು ಆಚರಣೆಗಳು ಕೂಡ ಬದಲಾಗುತ್ತಲೇ ಇದೆ, ಅದರಲ್ಲಿ ಒಂದು ಮದುವೆ, 18 ವರ್ಷ ದಾಟಿದರೆ ಸಾಕು ಮೊದಲು ಮದುವೆ ಮಾಡುತ್ತಿದ್ದರು, ಈಗ ಮದುವೆಯಾಗಲು ಉನ್ನತ ಶಿಕ್ಷಣ ಹಾಗೂ ಉತ್ತಮ ಕೆಲಸದ ಅಥವಾ ದುಡಿಮೆಯ ಅವಶ್ಯಕತೆ ಇದೆ, ಈ ರೀತಿಯ ಹಲವು ಕಾರಣಗಳಿಗೆ ಮದುವೆ ವಿಳಂಬವಾಗುತ್ತಿದೆ.

ಸರಿಯಾದ ಸಂಗಾತಿ ಎಷ್ಟೇ ಹುಡುಕಿದರೂ ಸಿಗದಿರುವುದು ಒಂದು ಮುಖ್ಯ ಕಾರಣವಾದರೆ ಮತ್ತೊಂದು ಹೊರ ದೇಶಗಳ ಸಂಸ್ಕೃತಿ ನಮ್ಮವರ ಮೇಲೆ ಅತಿ ಹೆಚ್ಚು ಪ್ರಭಾವವನ್ನು ಬೀರುತ್ತದೆ ಎಂದರೆ ತಪ್ಪಾಗಲಾರದು, ಇನ್ನು ಭಾರತೀಯ ಸಂಸ್ಕೃತಿ, ಧರ್ಮ, ಆಚಾರ ಹಾಗೂ ವಿಚಾರಗಳ ಮೇಲೆ ನಿಮಗೆ ನಂಬಿಕೆ ಇದ್ದರೆ ಈ ಸಮಸ್ಯೆಗೆ ಧಾರ್ಮಿಕ ಪರಿಹಾರಗಳನ್ನು ತಿಳಿಸಲಾಗುವುದು.

ನಮ್ಮ ಧರ್ಮದ ಪ್ರಕಾರ ಹೇಳಬೇಕಾದರೆ ಮದುವೆ ವಿಳಂಬವಾಗಲು ಮುಖ್ಯ ಕಾರಣಗಳಲ್ಲಿ ಒಂದು ಪಿತೃ ದೋಷ ಹಾಗೂ ಎರಡು ಸರ್ಪ ದೋಷ, ಇವುಗಳನ್ನು ತಿಳಿಯಲು ಅಥವಾ ಬಗೆಹರಿಸಿಕೊಳ್ಳಲು ಏನು ಮಾಡಬೇಕು ಎಂಬುದರ ಬಗ್ಗೆ ವಿವರವಾಗಿ ತಿಳಿಸುತ್ತೇವೆ ಮುಂದೆ ಓದಿ.

ಮೊದಲಿಗೆ ಪಿತೃದೋಷ ದ ಬಗ್ಗೆ ವಿವರಣೆಯನ್ನು ನೀಡುತ್ತೇವೆ, ಪಿತೃದೋಷ ವೆಂದರೆ ಇದು ಯಾವ ರೀತಿಯ ಶಾಪವಲ್ಲ, ನಿಮ್ಮ ಹಿರಿಯರು ಅಥವಾ ಪೂರ್ವಿಕರು ಮಾಡಿರುವ ಕೆಲವೊಂದು ಕೆಟ್ಟ ಕಾರ್ಯಗಳ ಫಲವಾಗಿ ಮುಂದಿನ ಪೀಳಿಗೆಯು ಅದನ್ನು ಅನುಭವಿಸಬೇಕಾಗಿ ಬರುತ್ತದೆ, ಇದು ಕೂಡ ಮದುವೆ ವಿಳಂಬಕ್ಕೆ ಅತಿ ಪ್ರಮುಖ ಕಾರಣ ಎನ್ನಬಹುದು, ಇನ್ನು ಕಿತ್ತೂರು ದೋಷವನ್ನು ಕಡಿಮೆ ಮಾಡಿಕೊಳ್ಳಲು ಏನು ಮಾಡಬೇಕು ಎಂಬುದು ಪರಿಹಾರ ನೀಡುತ್ತೇವೆ ಮುಂದೆ ಓದಿ.

ಪಿತೃ ದೋಷ ನಿವಾರಣೆಗೆ ಹಣ ಬಟ್ಟೆ ಹಾಗೂ ಆಹಾರಗಳನ್ನು ಬಡವರಿಗೆ ಅಥವಾ ಅದರ ನಿಜವಾದ ಅಗತ್ಯವಿದ್ದವರಿಗೆ ದಾನ ಮಾಡಬೇಕು, ಶನಿವಾರದಂದು ಮರೆಯದೆ ಅಕ್ಕಿಯಿಂದ ಉಂಡೆಯನ್ನು ಮಾಡಿ ಅದನ್ನು ಹಸುಗಳಿಗೆ ತಿನ್ನಿಸಬೇಕು, ಹಾಗೂ ಕಾಗೆ ಅಥವಾ ಮೀನುಗಳಿಗೆ ತಿನ್ನಿಸಬಹುದು, ಶಿವನಿಗೆ ಅಭಿಷೇಕ ಮಾಡಿಸುವುದರಿಂದ ಪಿತೃ ದೋಷ ದಿಂದ ಪಾರಾಗಬಹುದು.

ಎರಡನೆಯ ಅತಿ ಮುಖ್ಯ ಕಾರಣವೆಂದರೆ ಅದು ಸರ್ಪ ದೋಷ, ಸರ್ಪದೋಷ ಹಾವಿನ ಶಾಪ ವಾಗಿರುತ್ತದೆ, ಹಾವನ್ನು ಹೊಡೆದವರಿಗೆ ಅಥವಾ ಕೊಂದವರಿಗೆ ಈಶಪ್ಪ ತಟ್ಟುತ್ತದೆ, ಇದರಿಂದ ಗಾಯಕ್ ಒಳಗಾದ ಅಥವಾ ಸಾವನ್ನು ಕಂಡ ಸರ್ಪ ನೀಡಿದ ಶಾಪವು ಜನರನ್ನು ಕಾಡುತ್ತಿರುತ್ತದೆ, ಈ ಸರ್ಪದೋಷದಿಂದ ಮದುವೆಯಷ್ಟೇ ಅಲ್ಲ ಉದ್ಯೋಗದಲ್ಲಿಯೂ ಸಮಸ್ಯೆಗಳು ಕಾಣುತ್ತದೆ, ಈ ಜನುಮದಲ್ಲಿ ಅಷ್ಟೇ ಅಲ್ಲದೆ ಮುಂದಿನ ಜನ್ಮದಲ್ಲೂ ನಿಮ್ಮನ್ನು ಕಾಡುವ ಶಕ್ತಿ ಸರ್ಪ ದೋಷಕ್ಕೆ ಇದೆ, ಹಾಗಾದರೆ ಇದಕ್ಕೆ ಪರಿಹಾರ ಗಳಿಗೆ ಮುಂದೆ ಓದಿ.

ಸರ್ಪದೋಷ ನಿವಾರಣೆಗೆ ನಂಬಿರುವ ಪ್ರಮುಖ ದೇವರೆಂದರೆ ಸುಬ್ರಮಣ್ಯ ಸ್ವಾಮಿ, ಅಥವಾ ಕಾರ್ತಿಕೇಯ ಇಲ್ಲ ಮುರುಗನ್ ಎಂದು ಕರೆಯುತ್ತೇವೆ, ಸುಬ್ರಹ್ಮಣ್ಯ ಸ್ವಾಮಿಯ ನಿತ್ಯ ಆರಾಧನೆ ನಿಮ್ಮನ್ನು ಸರ್ಪದೋಷದಿಂದ ವಿಮುಕ್ತಗೊಳಿಸುತ್ತದೆ.

ಸುಬ್ರಹ್ಮಣ್ಯ ಸ್ವಾಮಿಯ ದೇವಸ್ಥಾನಗಳಿಗೆ ಭೇಟಿ ನೀಡಬೇಕು ಹಾಗೂ ಪೂಜೆಗಳನ್ನು ಸಲ್ಲಿಸಬೇಕು, ಅಥವಾ ಶಿವಲಿಂಗವನ್ನು ಸುತ್ತಿಕೊಂಡಿರುವ ಅಂತಹ ಸರ್ಪಗಳಿಗೆ ಹಾಲಿನ ಅಭಿಷೇಕವನ್ನು ಮಾಡಿಸಬೇಕು, ಹೀಗೆ ಮಾಡುವುದರಿಂದ ಸರ್ವದೋಷ ನಿವಾರಣೆಯಾಗಿ ನಿಮ್ಮ ಜೀವನದಲ್ಲಿ ಇರುವ ಹಲವು ಕಷ್ಟಗಳು ನಿವಾರಣೆಯಾಗುತ್ತದೆ ಹಾಗೂ ಮದುವೆ ವಿಳಂಬವಾದರೆ ಸಮಸ್ಯೆಯು ಕಳೆದು ಕಂಕಣ ಬಲ ಕೂಡಿ ಬರುತ್ತದೆ.

LEAVE A REPLY

Please enter your comment!
Please enter your name here