ಕನ್ನಡತಿಗೆ ಒಂದು ವರ್ಷ. ನಟಿ ಚಿತ್ಕಲಾ ಬಿರಾದರ್ ಹೇಳಿದ್ದೇನು ಗೊತ್ತಾ.

0
2260

ನಮಗೆಲ್ಲರಿಗೂ ಗೊತ್ತಿರುವ ಹಾಗೆ ಕರ್ನಾಟಕದಾದ್ಯಂತ ಎಲ್ಲರ ಮನೆಮಾತಾಗಿರುವ ಎಲ್ಲರ ಅಚ್ಚುಮೆಚ್ಚಿನ ಧಾರಾವಾಹಿ ಎಂದರೆ ಅದು ಕನ್ನಡತಿ. ಕನ್ನಡತಿ ಎಂದ ತಕ್ಷಣ ಎಲ್ಲರೂ ಹೇಳುವುದು ಒಂದೇ ಮಾತು. ಬಹಳ ನೈಜವಾಗಿ ಮೂಡಿಬರುತ್ತಿರುವ ಒಂದೇ ಒಂದು ಸೀರಿಯಲ್. ನಾವೆಲ್ಲರೂ ಇಷ್ಟಪಟ್ಟು ನೋಡುತ್ತೇವೆ ಎಂಬುದು. ಎಲ್ಲರೂ ಕುಟುಂಬ ಸಮೇತರಾಗಿ ಕುಳಿತು ನೋಡುವ ಧಾರವಾಹಿ ಇದು.

ಇನ್ನು ಈ ಧಾರವಾಹಿಗೆ ಒಂದು ವರ್ಷ ತುಂಬುವ ಸಂದರ್ಭ. ಈ ಸಂದರ್ಭದಲ್ಲಿ ಖ್ಯಾತ ನಟಿಯಾದ ಚಿತ್ಕಲಾ ಬಿರಾದರ್ ರವರು ಕನ್ನಡತಿ ಸೀರಿಯಲ್ ಹಾಗೂ ತಂಡದ ಬಗ್ಗೆ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅದೇನೆಂದು ನೋಡೋಣ ಬನ್ನಿ.

ನಮಸ್ಕಾರ, ಇಂದಿಗೆ ನಮ್ಮ ಕನ್ನಡತಿ’ಗೆ ಒಂದು ವರ್ಷ. ಈ ಒಂದು ವರ್ಷದ ಪ್ರಯಾಣದಲ್ಲಿ ನಾವು ಕಂಡು / ಕಲಿತ ಪಾಠಗಳು ಹಲವು . ನಮ್ಮ ಪ್ರಯಾಣ ಅಂದುಕೊಂಡಿದ್ದಕ್ಕಿಂತ ಹೆಚ್ಚು ಸ್ವಾದಿಷ್ಟ ಹಾಗು ಸಾರ್ಥಕವಾಗಿದೆ ಎಂದು ಅನ್ನಿಸುತ್ತಿದೆ. ಕನ್ನಡತಿ ಭಾಷಾಭಿಮಾನದ ಬಾವುಟ ಹಿಡಿದು ಅದರಡಿಯಲ್ಲಿ ನಮ್ಮ ಸಂಸ್ಕಾರ/ಮಮಕಾರ , ಸಾವು/ ನೋವು, ಪ್ರೀತಿ / ನೀತಿ, ಅರ್ಥ/ ಸ್ವಾರ್ಥ. ಹೀಗೆ ಹಲವಾರು ವಿಷಯಗಳನ್ನು ಬಿಂಬಿಸುತ್ತ ಸಾಗುತಿದೆ.

ಇದರ ಇಂಥ ಅದ್ವಿತೀಯ ಯಶಸ್ವಿಗೆ ಮೂಲ ಕಾರಣ ನಮ್ಮ ಕಲರ್ಸ ಕನ್ನಡ ವಾಹಿನಿ ಮತ್ತು ನಮ್ಮ ಅಭಿಮಾನಿಗಳು. ಒಂದು ವಾಹಿನಿಯಾಗಿ‌ ಬರೀ ಮನರಂಜನೆಗಾಗಿ‌ ಮಾತ್ರ ನಿಲ್ಲದೆ ಇಂಥ ಜವಾಬ್ದಾರಿಯುತ ವಿಷಯಕ್ಕಾಗಿ ಕೈ ಎತ್ತಿದ್ದು ಅಭಿನಂದನಾರ್ಹ. ಕನ್ನಡತಿ’ಯನ್ನು ಎದೆಗೊತ್ತಿಕೊಂಡ ಅಭಿಮಾನಿಗಳು ಬರೀ ಅವರ ಮನಸ್ಸಿನಲ್ಲಷ್ಟೇ ಜಾಗ ಕೊಡದೆ ಅವರ ಮನೆಯಲ್ಲೂ ವಿವಿಧ ರೀತಿಯಲ್ಲಿ (ಮಗಳಿಗೆ ‘ಕನ್ನಡ’ ಎಂಬ ಹೆಸರಿಡುವಂತಹ ಕಾರ್ಯ) ನಮ್ಮನ್ನು ಸ್ವೀಕರಿಸುತ್ತಿರುವ ಪರಿ ಉಹೆಗೂ‌ ಮೀರಿದ್ದು.

ಈ ಸುಸಂಧರ್ಬದಲ್ಲಿ ನಮ್ಮ ನಿರ್ಮಾಪಕರು, ಬರಹಗಾರರು, ತಾಂತ್ರಿಕ ವರ್ಗದವರು, ಕಲಾವಿದರು ಇಂಥ ಒಂದು ಅನುಭೂತಿಯ ಭಾಗವಾಗಿದ್ದು ನಮ್ಮೆಲ್ಲರ ಯಾವುದೊ ಜನ್ಮದ ಪುಣ್ಯವೇ ಸರಿ. ಕನ್ನಡತಿ ಬರೀ ಒಂದು ಕಥೆಯಾಗದೆ ಅದೊಂದು ಶೈಲಿಯಾಗಿ, ನಮ್ಮ ಹೆಮ್ಮೆಯಾಗಿ, ಸತ್ಕಾರ್ಯವಾಗಿ, ಜವಾಬ್ದಾರಿಯಾಗಿ , ಅಭೂತಪೂರ್ವ ಬಾಂಧವ್ಯ ಬೆಸೆಯುತ್ತಿರುವ ಬದುಕಾಗಿ ಬೆಳೆದು ನಿಂತಿದೆ.

ಇದರ ಘಮ ಇನ್ನಷ್ಟು ಪಸರಿಸಲಿ, ಇದರ ಛಾಯೆ/ ಮಾಯೆ ಎಲ್ಲ ದಿಕ್ಕಿಗೂ ಇನ್ನಷ್ಟು ಹರಡಲಿ. ಈ ವಾರ್ಷಿಕೋತ್ಸವದ ಘಳಿಗೆಯಲ್ಲಿ ನಮ್ಮ ಅಭಿಮಾನಿಗಳ ಸಂಭ್ರಮ,ಸಡಗರ , ಅವರ ಸಂದೇಶಗಳ ಮಹಾಪೂರವನ್ನು ನೋಡಿ ಹೃದಯ ತುಂಬಿ ಬಂದು ನನ್ನೊಳಗಿನ ಕೃತಾರ್ಥಭಾವ ಈ ನಾಲ್ಕು ಸಾಲನ್ನು ಬರೆದು ಹಂಚಿಕೊಳ್ಳುವಂತೆ ಮಾಡಿತು. ಕನ್ನಡದ ಮೇಲಿನ ಅಭಿಮಾನ, ಕನ್ನಡತಿ’ಯ ಅಭಿಮಾನಿಗಳ ಮೇಲಿನ ನನ್ನ‌ ಪ್ರೀತಿ ಸದಾ ನನ್ನೊಳಗಿ ಹೆಮ್ಮೆಯಾಗಿ, ಹೆಮ್ಮರವಾಗಿ ಚಿಗುರುತ್ತಲೇ ಇರುತ್ತದೆ. ಜೈ ಕನ್ನಡಾಂಬೆ. ಜೈ ಕನ್ನಡತಿ.

ಹೀಗೆಂದು ಚಿತ್ಕಲಾ ಬಿರಾದರ್ ರವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಕನ್ನಡತಿ ಧಾರಾವಾಹಿ ಇಡೀ ರಾಜ್ಯವೇ ಇಷ್ಟ ಪಡುವ ಮನಸ್ಸಿಗೆ ಸಂತೋಷ ಕೊಡುವ ಅರ್ಧ ಗಂಟೆಯ ಒಂದು ಕಾರ್ಯಕ್ರಮವಾಗಿದೆ. ಕನ್ನಡವನ್ನೇ ಮರೆಯುತ್ತಿರುವ ಹಾಗೆ ಬದುಕುತ್ತಿರುವ ಎಷ್ಟೋ ಯುವಕರಿಗೆ ಈ ಧಾರಾವಾಹಿಯ ನಾಯಕಿ ಕನ್ನಡವನ್ನು ಪ್ರೀತಿಸಿ, ಬೆಳೆಸಿ, ಉಳಿಸಲು ಸ್ಫೂರ್ತಿಯಾಗಿದ್ದಾರೆ.

LEAVE A REPLY

Please enter your comment!
Please enter your name here