ರಾಮಾಯಣ ಮತ್ತು ಮಹಾಭಾರತಗಳು ರಾಷ್ರೀಯ ಮಹಾಕಾವ್ಯಗಳೆಂದೇ ಪ್ರಸಿದ್ದಿ ಪಡೆದಿದೆ. ಇದು ಗಂಗಾ ಹಿಮಾಲಯದಂತೆ ಶಾಶ್ವತವಾದವು. ಇವುಗಳಿಗೆ ಸಮಾನವಾದ ಮಹಾಕಾವ್ಯಗಳು ಜಗತ್ತಿನಲ್ಲೆಲ್ಲಿಯೂ ಇಲ್ಲ. ಇವು ಸಂಸ್ಕೃತಿಯ ಅಭಿವ್ಯಕ್ತಿ ಮಾಧ್ಯಮಗಳಾಗಿ ಅಕ್ಷಯ ನಿಧಿಗಳಾಗಿವೆ.
ರಾಮಾಯಣದ ಕಥಾಪ್ರಪಂಚದಲ್ಲಿ ರಾಮ ನಾಯಕನಾದರೆ, ಹನುಮಂತ ಉಪನಾಯಕ. ಸ್ವಾಮಿನಿಷ್ಠೆಗೆ, ಭಕ್ತಿಗೆ ಇನ್ನೊಂದು ಹೆಸರು ಹನುಮಂತ. ಅಂಜನೆಯ ಗರ್ಭದಲ್ಲಿ ಹುಟ್ಟಿ ಆಂಜನೇಯನೆನಿಸಿದ. ಹನೂಮಂತ, ವಾಯಪುತ್ರ, ಪವನಸಂಭವ, ಮಾರುತಿ ಹೀಗೆ ಅನೇಕ ಹೆಸರುಗಳಿಂದ ಪ್ರಸಿದ್ಧನಾದವನು. ವಾಯುವಿನ ಅಂಶದಿಂದ ಕೇಸರಿಯಲ್ಲಿ ವಾನರನಾಗಿ ಹುಟ್ಟಿ, ಸುಗ್ರೀವನ ಮಂತ್ರಿಯಾದನು. ಅವನ ಅಸಾಧಾರಣವಾದ ಬಲ, ಪರಾಕ್ರಮ, ಬುದ್ಧಿವಂತಿಕೆ ರಾಮಾಯಣದುದ್ದಕ್ಕೂ ತೋರಿಬರುತ್ತದೆ.
ಬುದ್ಧಿವಂತಿಕೆ, ದೇಹದಾರ್ಢ್ಯ, ಕೀರ್ತಿ, ಧೈರ್ಯ, ಅಂಜದಿರುವಿಕೆ, ಆರೋಗ್ಯ, ಉತ್ಸಾಹ, ಮಾತುಗಾರಿಕೆ ಈ ಎಲ್ಲವೂ ಹನುಮಂತನ ಈ ಮಂತ್ರವನ್ನು ಮನಃಪೂರ್ವಕವಾಗಿ 9 ಭಾರಿ ಜಪಿಸಿ.
ಅಸಾಧ್ಯ ಸಾಧಕ ಸ್ವಾಮಿನ್ ಅಸಾಧ್ಯಂ ತವ ಕಿಂ ವದ. ರಾಮ ದೂತ ಕೃಪಾ ಸಿಂಧೋ ಮತ್ ಕಾರ್ಯಂ ಸಾಧಯ ಪ್ರಭೋ..
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.