ಒಡೆದ ಪಾದಗಳು ಅಂದರೆ ಬಿರುಕುಬಿಟ್ಟ ಕಾಲುಗಳು ನಿಮಗೆ ಸಮಸ್ಯೆ ಉಂಟುಮಾಡುವುದರ ಜೊತೆ ಮುಜುಗರವನ್ನು ಉಂಟುಮಾಡುತ್ತದೆ, ನಿಮ್ಮ ಪಾದಗಳ ಆರೋಗ್ಯ ನಿರ್ಲಕ್ಷ್ಯದಿಂದ ಕೆಲವೊಮ್ಮೆ ಭಾರಿ ನೋವುಗಳನ್ನು ಸಹಿಸಿ ಕೊಳ್ಳಬೇಕಾಗುತ್ತದೆ, ಆದರೆ ಕೆಲವರಿಗೆ ಪಾದಗಳು ಒಡೆಯುವ ಸಮಸ್ಯೆ ಯಾವಾಗಲೂ ಕಾಡುತ್ತಲೇ ಇರುತ್ತದೆ. ಇದರಿಂದ ಅವರಿಗೆ ತಮಗೆ ಬೇಕಾದಂತಹ ಚಪ್ಪಲಿಯನ್ನು ಧರಿಸಲು ಸಾಧ್ಯವಾಗುವುದಿಲ್ಲ.
ಒಡೆದ ಪಾದಗಳ ಚಿಕಿತ್ಸೆಗೆ ಹಲವಾರು ರೀತಿಯ ಕ್ರೀಮ್‌ಗಳು ಲಭ್ಯವಿದೆ ಆದರೆ ನೈಸರ್ಗಿಕ ರೀತಿಯಲ್ಲಿ ಒಡೆದ ಪಾದಗಳಿಗೆ ಚಿಕಿತ್ಸೆ ನೀಡಬೇಕಾದರೆ ಏನು ಮಾಡಬೇಕೆಂದು ನೀವು ನಿಮಗೆ ತಿಳಿಸುತ್ತೇವೆ, ಒಡೆದ ಪಾದಗಳಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಿದೆ ಇದ್ದರೆ ಹಲವಾರು ರೀತಿಯ ಸೋಂಕುಗಳು ಕಾಡಬಹುದು. ಒಡೆದ ಪಾದಗಳಿಗೆ ಚಿಕಿತ್ಸೆ ನೀಡುವಂತಹ ನೈಸರ್ಗಿಕ ಹಾಗೂ ಸರಳ ವಿಧಾನ ಈ ಕೆಳಗಿದೆ.
ಮನೆಯಲ್ಲೂ ಚಪ್ಪಲಿ ಬಳಸಿ : ಮನೆಯ ಹೊರಗೆ ಅಥವಾ ಒಳಗಡೆ, ವ್ಯಾಯಾಮ ಮಾಡುವಾಗ ನೀವು ಚಪ್ಪಲಿ ಹಾಕದೆ ಇದ್ದರೆ ಇದರಿಂದ ಒಡೆದ ಪಾದ, ಫಂಗಲ್ ರೋಗಗಳು ಇತ್ಯಾದಿಗಳಿಗೆ ಕಾರಣವಾಗಬಹುದು. ಇದರಿಂದ ಎಲ್ಲಾ ಸಮಯದಲ್ಲಿ ಚಪ್ಪಲಿ ಹಾಕುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅದರಲ್ಲೂ ಹೊರಗಡೆ ಹೋಗುವಾಗ ಸಾಕ್ಸ್ ಬಳಸಿ.
ಸರಿಯಾದ ಚಪ್ಪಲಿ : ನಿಮ್ಮ ಪಾದದ ಗಾತ್ರದ ಚಪ್ಪಲಿಯನ್ನೇ ಬಳಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಹೆಚ್ಚಿನವರು ತಮ್ಮ ಪಾದದ ಗಾತ್ರಕ್ಕಿಂತ ದೊಡ್ಡದಾದ ಅಥವಾ ಸಣ್ಣದಾಗಿರುವ ಚಪ್ಪಲಿ ಧರಿಸುತ್ತಾರೆ. ಸರಿಯಾದ ಚಪ್ಪಲಿ ಹಾಕದೆ ಇದ್ದರೆ ಅದರಿಂದ ಪಾದಗಳಿಗೆ ನೋವುಂಟಾಗಿ ಗ್ರಂಥಿಗಳಿಗೆ ಹಾನಿಯಾಗಬಹುದು
ಕಾಲಿನ ವ್ಯಾಯಮ ಮಾಡಿ : ವ್ಯಾಯಮವು ಕಾಲಿನಲ್ಲಿ ರಕ್ತಸಂಚಲನವನ್ನು ಸರಿಯಾಗಿರುವಂತೆ ಮಾಡುವುದರಿಂದ ಕೆಲವು ರೀತಿಯ ಕಾಲಿನ ವ್ಯಾಯಾಮಗಳು ಇದೆ. ವ್ಯಾಯಾಮವು ರಕ್ತಸಂಚಲನವನ್ನು ಹೆಚ್ಚಿಸಿ ಉರಿಯೂತ ಕಡಿಮೆ ಮಾಡಿ ಪಾದಗಳು ಒಡೆಯುವುದನ್ನು ಕಡಿಮೆ ಮಾಡುತ್ತದೆ. ಪಾದಗಳನ್ನು ಸುತ್ತಲು ತಿರುಗಿಸುತ್ತಾ ಇರುವುದು ತುಂಬಾ ಸಹಕಾರಿಯಾಗಲಿದೆ.
ಪಾದಗಳ ಮಸಾಜ್ : ಪಾದಗಳು ಒಡೆಯುವುದಕ್ಕೆ ನೈಸರ್ಗಿಕವಾದ ಚಿಕಿತ್ಸೆ ಬೇಕಿದ್ದರೆ ಎಣ್ಣೆಯಿಂದ ಪಾದಗಳಿಗೆ ಮಸಾಜ್ ಮಾಡಿಕೊಳ್ಳಬೇಕು. ದಿನಾಲೂ ಪಾದಗಳಿಗೆ ಮಸಾಜ್ ಮಾಡುವುದರಿಂದ ಆ ಪ್ರದೇಶಕ್ಕೆ ರಕ್ತಸಂಚಲನವು ಹೆಚ್ಚಾಗುತ್ತದೆ ಮತ್ತು ಚರ್ಮವು ಮೃದುವಾಗಿ ಪಾದಗಳು ಒಡೆಯುವುದು ಕಡಿಮೆಯಾಗುವುದು.