ನೀವು ತಿನ್ನುವ ಆಹಾರಕ್ಕೂ ಧನಾತ್ಮಕ ಹಾಗು ಋಣಾತ್ಮಕ ಅಂಶಗಳಿರುತ್ತವೆ ಅದು ಯಾವುದು ಇಲ್ಲಿ ಓದಿ..!!

0
2643

ಧನಾತ್ಮಕ (ಪಾಸಿಟೀವ್) ಆಹಾರ.

ಸಿಹಿ ಹಣ್ಣುಗಳು : ಬಾಳೆ, ಪಪಾಯಿ, ಮಾವು, ಸೀಬೆ, ಹಲಸು, ಕರಬೂಜ, ಸಪೋಟ(ಚಿಕ್ಕು), ಸೇಬು, ರಾಮಫಲ, ಸೀತಾಫಲ, ಕಲ್ಲಂಗಡಿ, ಬೆಟ್ಟನೆಲ್ಲೀಕಾಯಿ ಇತ್ಯಾದಿ.

ಹುಳಿಹಣ್ಣುಗಳು : ಕಿತ್ತಲೆ, ದ್ರಾಕ್ಷಿ, ಮೂಸಂಬಿ, ನೇರಳೆ, ದಾಳಿಂಬೆ, ಚಕ್ಕೋತ, ನಿಂಬೆ, ಟೊಮೇಟೋ ಇತ್ಯಾದ.

ಒಣಹಣ್ಣುಗಳು : ಒಣದ್ರಾಕ್ಷಿ, ಖರ್ಜೂರ, ಅಂಜೂರ ಇತ್ಯಾದಿ.

ಸೊಪ್ಪುಗಳು : ಬಸಳೆ, ಮೆಂಥ್ಯ, ಕೊತ್ತಂಬರಿ, ಪುದೀನ, ಲೆಟ್ಯೂಸ್, ಪಾಲಕ್, ಸಬ್ಬಸಿಗೆ, ಕರಿಬೇವು, ದೊಡ್ಡಪತ್ರೆ, ಒಂದೆಲಗ, ಗರಗ ಇತ್ಯಾದಿ.

ಹಸಿರು ತರಕಾರಿಗಳು : ಪಡ್ವಲ, ಹೀರೇಕಾಯಿ, ಎಲೆಕೋಸು, ಸೌತೇಕಾಯಿ, ಟೊಮೇಟೋ, ಬುದುಗುಂಬಳ, ಸಿಹಿಗುಂಬಳ ಇತ್ಯಾದಿ.

ಗೆಡ್ಡೆಗೆಣಸುಗಳು : ಕ್ಯಾರಟ್, ಗೆಡ್ಡೆಕೋಸು, ಬೀಟ್ ರೂಟ್, ಮರಗೆಣಸು, ಸಿಹಿ ಗೆಣಸು, ಮೂಲಂಗಿ.

ಕಾಯಿಗಳು(ನಟ್ಸ್) : ತೆಂಗಿನಕಾಯಿ, ಕಡ್ಲೇಕಾಯಿಬೀಜ, ಬಾದಾಮಿ, ಗೋಡಂಬಿ, ಪಿಸ್ತ, ವಾಲ್ ನಟ್ ಇತ್ಯಾದಿ.

ರಸಗಳು : ಎಳೆನೀರು, ಹಣ್ಣಿನ ರಸಗಳು, ತರಕಾರಿ ರಸಗಳು, ದೊಡ್ಡಪತ್ರೆ ರಸ, ಒಂದೆಲಗದ ರಸ, ಗರಗದ ರಸ, ತುಳಸೀ ರಸ, ಬಿಲ್ಪತ್ರೇ ರಸ, ಗರಿಕೆಹುಲ್ಲಿನ ರಸ, ಗೋಧೀಹುಲ್ಲಿನ ರಸ, ಕಬ್ಬಿನ ರಸ ಇತ್ಯಾದಿ.

ಮೊಳಕೆ ಕಾಳುಗಳು : ಗೋಧಿ, ಹೆಸರುಕಾಳು, ಕಡಲೆಕಾಳು, ಬಟಾಣಿ, ಮೆಂಥ್ಯ, ಎಳ್ಳು, ರಾಗಿ, ಕಡ್ಲೇಕಾಯಿಬೀಜ, ಆಲ್ಫಾಲ್ಪಾ ಇತ್ಯಾದಿ.

ಮಧ್ಯಸ್ಥ ಆಹಾರ : ಮಧ್ಯಸ್ಠ, ನಿಗದಿತ ಸತ್ವ, ಮಧ್ಯಮಾನ್ನ, ರಾಜಸ(ಸೆಕೆಂಡರಿ, ನೂಟ್ರಲ್).

ಸೊಪ್ಪುಗಳು : ದಂಟು, ಚಕ್ಕೋತ, ಕಿರುಕುಸಾಲೆ, ಬೆರಕೆ ಸೊಪ್ಪು, ನುಗ್ಗೆ, ಅಗಸೆ, ಹೊನಗೊನೆ, ಗೋಣಿ, ವಿಷ್ಣುಕ್ರಾಂತಿ ಇತ್ಯಾದಿ.

ಹಸಿರು ತರಕಾರಿಗಳು : ಹುರುಳೀಕಾಯಿ, ಜವಳಿಕಾಯಿ, ಕೆಸವಿನ ದಂಟು, ಬಾಳೇಕಾಯಿ, ಹಲಸಿನಕಾಯಿ, ಬದನೆಕಾಯಿ, ಪರಂಗಿಕಾಯಿ, ಸೀಮೇಬದನೆ, ಹಾಗಲಕಾಯಿ, ಸೋರೇಕಾಯಿ, ಸಿಹಿಗುಂಬಳ, ಈರುಳ್ಳಿ, ಬೆಳ್ಳುಳ್ಳಿ, ಆಲೂಗೆಡ್ಡೆ ಇತ್ಯಾದಿ.
ಕೊಟ್ಟಣದ ಅಕ್ಕಿ, ಹೊಟ್ಟು ತೆಗೆಯದ ಹಿಟ್ಟು, ಹೊಟ್ಟು ತೆಗೆಯದ ಬೇಳೆಗಳು, ನೆನೆಸಿದ ಕಾಳುಗಳು, ಬೆಲ್ಲ, ವೀಳೇದೆಲೆ, ಹಾಲು, ಮಸರು, ಬೆಣ್ಣೆ, ತುಪ್ಪ, ಜೇನುತುಪ್ಪ.

ಹಬೆಯಲ್ಲಿ ಬೇಯಿಸಿದ ಆಹಾರ : ಕಡಿಮೆ ಉಪ್ಪು, ಹುಳಿ, ಕಾರದಿಂದ ಕೂಡಿದ ಆಹಾರ, ಹುದುಗಿಸಲ್ಪಟ್ಟ ಆಹಾರ(ಇಡ್ಲಿ, ದೋಸೆ), ಕಂದು ಬ್ರೆಡ್(ಬ್ರೌನ್ ಬ್ರೆಡ್), ಕೆಂಡದಲ್ಲಾಗಲಿ, ಓವನ್ನಿನಲ್ಲಾಗಲಿ ಸುಟ್ಟ ಆಲೂಗೆಡ್ಡೆ, ಕಡ್ಲೇಕಾಯಿ, ಕ್ಯಾರಟ್, ಗಾಣದಿಂದ ತೆಗೆದ ಎಣ್ಣೆ.

ಋಣಾತ್ಮಕ ಆಹಾರ : ಋಣಾತ್ಮಕ, ನಿಸ್ಸತ್ವ, ಮೃತಾನ್ನ, ತಾಮಸ(ನೆಗೆಟೀವ್), ಕಾಫಿ, ಟೀ, ಸಾರಾಯಿ, ನಿಕೋಟಿನ್ ಇತ್ಯಾದಿ, ಮಾಂಸ, ಮೊಟ್ಟೆ ಇತ್ಯಾದಿ, ಪಾಲೀಶ್ ಅಕ್ಕಿ, ಮೈದಾ, ಪಾಲೀಶ್ ಮಾಡಿದ ಬೇಳೆ, ಬಿಳಿಯ ಬ್ರೆಡ್, ಬೇಕರಿಯ ಇತರ ತಿಂಡಿಗಳು, ಸಕ್ಕರೆ, ಮೈದಾ, ಅದರಿಂದ ತಯಾರಿಸಲ್ಪಟ್ಟ ಆಹಾರ ಪದಾರ್ಥಗಳು, ಅತಿ ಉಪ್ಪು, ಹುಳಿ, ಖಾರಗಳಿಂದ ಪದಾರ್ಥಗಳು, ಹುರಿದ, ಕರಿದ ತಿಂಡಿಗಳು, ಐಸ್ ಕ್ರೀಮ್, ಚಾಕೋಲೇಟ್, ಬಿಸ್ಕತ್ ಇತ್ಯಾದಿಗಳು, ಪಾಶ್ಚರೈಸ್ ಮಾಡಿದ ಹಾಲು, ಕೆನೆ, ಕೆನೆಯಿಂದ ತಯಾರಿಸಿದ ಆಹಾರಗಳು, ರೀಫೈನ್ ಮಾಡಿದ ಎಣ್ಣೆ.

ಡಾಲ್ಡ ರೆಫ್ರಿಜಿರೇಟರ್ನಲ್ಲಿಟ್ಟ ಆಹಾರ : ಹಿಂದಿನ ದಿನ ಮಾಡಿ ಕುದಿಸಿಟ್ಟ ಆಹಾರ ಡಬ್ಬದ ಆಹಾರಗಳು, ಫಾಸ್ಟ್ ಫ಼ುಡ್, ಇತ್ಯಾದಿಗಳು.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here