ವಾತ ಹಾಗು ಅಜೀರ್ಣದಿಂದ ಮುಕ್ತಿ ಹೊಂದಲು ಮೆಂತ್ಯ ಕಾಳನ್ನ ಈ ರೀತಿ ಬಳಸಿ!

0
3039

ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಇರುವಂತಹ ಮೆಂತ್ಯ ಕಾಳು ಒಂದು ಅತ್ಯುತ್ತಮ ಮನೆ ಮದ್ದು ಎಂದರೆ ತಪ್ಪಾಗಲಾರದು ಏಕೆಂದರೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಸಣ್ಣ ಮೆಂತ್ಯೆ ಕಾಳಿನಲ್ಲಿದೆ ಹಲವು ಪರಿಹಾರಗಳು, ಇಂತಹ ಸಣ್ಣ ಮೆಂತ್ಯ ಕಾಳಿನ ದೊಡ್ಡ ಆರೋಗ್ಯ ಲಾಭಗಳ ಬಗ್ಗೆ ಎಂದು ತಿಳಿಯೋಣ.

ಮೆಂತ್ಯ ಕಾಳನ್ನು ಬಾಂಡಲಿಯಲ್ಲಿ ಚೆನ್ನಾಗಿ ಹುರಿದುಕೊಂಡು ನಂತರ ಅದಕ್ಕೆ ಸ್ವಲ್ಪ ಉಪ್ಪು ಮತ್ತು ಒಣದ್ರಾಕ್ಷಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ದಿನಕ್ಕೆ ಒಂದು ಬಾರಿ ಸೇವಿಸಿದರೆ ರಕ್ತ ಬೇದಿ ಇಂತಹ ಸಮಸ್ಯೆಗಳು ಪರಿಹಾರವಾಗುತ್ತದೆ.

ಮೆಂತ್ಯೆ ಕಾಳನ್ನು ನೆನೆಸಿ ಅರೆದು ದೇಹದ ಯಾವುದೇ ಭಾಗದಲ್ಲಿ ಊತ ಕಾಣಿಸಿಕೊಂಡರು ಅಲ್ಲಿ ಚೆನ್ನಾಗಿ ಲೇಪಿಸುವುದರಿಂದ ಊತವು ಬಹುಬೇಗ ಕಡಿಮೆಯಾಗುತ್ತದೆ.

ಎಳ್ಳೆಣ್ಣೆ ಯಲ್ಲಿ ಉಪ್ಪು ಮತ್ತು ಮೆಂತ್ಯೆ ಕಾಳನ್ನು ಬೆರೆಸಿ ಚೆನ್ನಾಗಿ ಹುರಿದು ಬಟ್ಟೆಯಲ್ಲಿ ಕಟ್ಟಿ ವಾತ ಇರುವ ಸಂದಿಗಳಲ್ಲಿ ನೋವಿದ್ದರೆ ಬಟ್ಟೆ ಕಟ್ಟಿ ಬಿಸಿ ಕಾವು ಇಡುವುದರಿಂದ ವಾತದ ಸಮಸ್ಯೆ ಕಡಿಮೆಯಾಗುತ್ತದೆ.

ನೀರಿನಲ್ಲಿ ನೆನೆಸಿದ ಮೆಂತ್ಯವನ್ನು ಆರ್ಯರು ಎಳ್ಳೆಣ್ಣೆಯಲ್ಲಿ ಬೆರೆಸಿ ಚೆನ್ನಾಗಿ ಕುದಿಸಬೇಕು, ನಂತರ ಸೊಸಿ ಶೇಖರಣೆ ಮಾಡಿಕೊಳ್ಳಬೇಕು, ಈ ರೀತಿ ಶೇಖರಣೆ ಮಾಡಿಕೊಂಡ ಎಣ್ಣೆಯನ್ನು ಕೂದಲಿಗೆ ಹಚ್ಚಿದರೆ ಕೂದಲು ದಟ್ಟವಾಗಿ ಹಾಗೂ ಕಪ್ಪಾಗಿ ಬೆಳೆಯುತ್ತದೆ.

ಬೆಲ್ಲದೊಂದಿಗೆ ಮೆಂತ್ಯ ಬೀಜವನ್ನು ನೆನೆಸಿ ಚೆನ್ನಾಗಿರುತ್ತೆ ಹಾಲಿನೊಂದಿಗೆ ಸೇರಿಸಿ ಪಾಯಸ ಮಾಡಿ ಕುಡಿಯುವುದರಿಂದ ತಾಯಂದರಿಗೆ ಎದೆಹಾಲು ಹೆಚ್ಚುತ್ತದೆ, ಇನ್ನು ಮೆಂತ್ಯದ ಕಾಳನ್ನು ತುಪ್ಪದಲ್ಲಿ ಕೆಂಪಗೆ ಹುರಿದು ಪುಡಿ ಮಾಡಿ ಅದಕ್ಕೆ ನಿಂಬೆ ರಸ ಮತ್ತು ಸೈಂಧವ ಅನ್ನು ಬೆರೆಸಿಕೊಂಡು ಅನ್ನದ ಮೊದಲನೇ ತುತ್ತಿನಲ್ಲಿ ಸೇರಿಸಿ ತಿಂದರೆ ಅಜೀರ್ಣದಿಂದ ಕಾಡುವ ಹೊಟ್ಟೆ ನೋವು ಕಡಿಮೆಯಾಗುತ್ತದೆ.

ನೀರಿನಲ್ಲಿ ಮೆಂತ್ಯ ಸೊಪ್ಪಿನ ಎಲೆಗಳನ್ನು ಬೇಯಿಸಿಕೊಂಡು, ಅದು ತಣ್ಣಗಾದ ಮೇಲೆ ಜೇನುತುಪ್ಪ ಬೆರೆಸಿ ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here