ನವೆ ಅಥವಾ ಕಡಿತವು ಒಂದು ಅಗತ್ಯವಾದ ಬಾಧೆಯು ಇದನ್ನು ಹೋಗಲಾಡಿಸಲು ನಾವು ಕೆರೆದುಕೊಳ್ಳುತ್ತೇವೆ, ಸಾಮಾನ್ಯವಾಗಿ ಸೌಮ್ಯವಾದ ನವೆಯು ಎಲ್ಲರಿಗೂ ಸಹಜವಾಗಿದದ್ದಾಗಿದೆ, ಅದು ಉಪಶಮನವಾಗದೆ ಮುಂದುವರಿದು ತೊಂದರೆಯಾದಾಗ ತೀಕ್ಷ್ಣವಾಗಿ ತೋರುವುದು, ಚರ್ಮ ಕಡಿತಕ್ಕೆ ಅನೇಕ ಕಾರಣಗಳಿವೆ ಕ್ರಿಮಿಕೀಟಗಳ ಕಡಿತ, ತುರುಚೆ ತದ್ದು ಸಂಪರ್ಕದಿಂದಾಗಿ ಚರ್ಮ ಉರಿತವು ಒಗ್ಗದ ಆಹಾರ, ಶಾಖದ ಗುಳ್ಳೆಗಳು ಇವು ಕೆಲವು ಕಾರಣಗಳಾಗಿವೆ, ಸಿಹಿಮೂತ್ರ ರೋಗ, ಮೂತ್ರರಕ್ತ, ಕಾಮಾಲೆ, ಗರ್ಭಧಾರಣೆ, ಒಗ್ಗದ ಮದ್ದುಗಳು ಮತ್ತು ಬಗೆ ಬಗೆಯ ನರಗಳ ಅವಸ್ಥೆಗಳು ಇನ್ನಿತರ ಕಾರಣಗಳಾಗಿರಬಹುದು, ಎಡೆಬಿಡದ ಕೆರತದಿಂದ ಚರ್ಮದಲ್ಲಿ ಊತ ಉಂಟಾಗುವುದು.
ಈ ಕೆರತದಿಂದ ಆಳವಾದ ಗುರುತುಗಳು ನಿಲ್ಲುವುದು, ಹೆಚ್ಚಿನ ತೊಂದರೆಯನ್ನು ಉಂಟು ಮಾಡುವುದು, ನವೆಯು ಕೆಲವು ಔಷಧ ಪ್ರತಿಕ್ರಿಯೆಗಳಿಂದಲೂ ಉಂಟಾಗುತ್ತದೆ.
ಚರ್ಮಕ್ಕೆ ಹಚ್ಚಿದ ಔಷಧಗಳಿಂದಲೂ ಸ್ವಲ್ಪಮಟ್ಟಿಗೆ ನವೆಯಾಗುವುದು ಕೆಲವರು ನೈಲಾನಿಗೂ ಮತ್ತೆ ಕೆಲವರು ಉಣ್ಣೆ ಬಟ್ಟೆಗಳಿಗೂ ಕೆಲವರು ಕೆಲವು ಬಟ್ಟೆಬರೆಗಳಿಗೂ ಒಗ್ಗದವರಗಿರುತ್ತಾರೆ.
ನವೆಯು ಹೆಚ್ಚು ಭಾಗಕ್ಕೆ ಹರಡಿದ್ದರೆ ಗೋಧಿಯ ಹಿಟ್ಟನ್ನು ಮೈಗೆ ತಿಕ್ಕಿ ಸ್ನಾನ ಮಾಡಿಸಬೇಕು, ಶಮನಕಾರಿ ಔಷಧಿಗಳನ್ನು ಹಚ್ಚಿಕೊಳ್ಳಬೇಕು.
ಮೆಂಥಾಲ ಮತ್ತುಕ್ಯಾಲಮೈನ್ ದ್ರವ ಮಿಶ್ರಣವನ್ನು ಮಾಡಿಕೊಂಡು ದಿನಕ್ಕೆ ಮೂರು ಸಲ ಅಗತ್ಯವಿದ್ದಂತೆ ಹಚ್ಚಿಕೊಳ್ಳಬೇಕು.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.