ಜೇನುತುಪ್ಪ ಆರೋಗ್ಯಕ್ಕೆ ಇಷ್ಟೆಲ್ಲಾ ಉಪಯೋಗ ಇದೆ ಒಮ್ಮೆ ನೋಡಿ

0
3736

ಜೇನುತುಪ್ಪವು ಅತ್ಯುತ್ತಮ ಆಹಾರ ವಸು; ಇದು ಅಮೃತ ಸಮಾನ.ಜೇನುತುಪ್ಪದೊಂದಿಗೆ ಔಷಧಿಗಳನ್ನು ಸೇವಿಸುವುದರಿಂದ ಶೀಘ್ರಗುಣ ಕಂಡುಬರುವುದು. ಔಷಧಿಯರೋಗನಾಶಕ ಗುಣವನ್ನು ಶರೀರದಾದ್ಭಂತ ಅತಿ ಶೀಘ್ರವಾಗಿ ಹರಡುವ ಗುಣ ಜೇನುತುಪ್ಪದಲ್ಲಿರುವುದೇ ಇದಕ್ಕೆ ಕಾರಣ. ಜೇನುತುಪ್ಪವು ಸ್ವಾಭಾವಿಕ ರಕ್ತವರ್ಧಕ ತ್ರಾಣಿಕ; ಇದು ಬಲ ವರ್ಧಕ ತ್ರಾಣಿಕವೂ ಹೌದು, ಇದು ಹಾಲಿನೊಂದಿಗೆ ಜೇನುತುಪ್ಪ ಮಿಶ್ರಣ ಮಾಡಿ ಸೇವಿಸುವುದರಿಂದ ರೋಗ ನಿರೋದಕ ಶಕ್ತಿ ಹೆಚ್ಚುವುದು ಮತ್ತು ಆಯುಃ ಪ್ರಮಾಣ ವೃದ್ಧಿಯಾಗುವುದು.

ಅಪ್ಪಟ ಜೇನುತುಪ್ಪವನ್ನು ಶುಭ್ರವಾದ ಮತ್ತು ತೇವರಹಿತವಾದ ಗಾಜಿನ ಸೀಸೆಯಲ್ಲಿ ತುಂಬಿ ಭದ್ರವಾಗಿ ಮುಚ್ಚಳ ಹಾಕಿಡಬೇಕು; ಗಾಳಿಗೆ ತೆರೆದಿಟ್ಟ ಜೇನುತುಪ್ಪವು ಕೆಟ್ಟುಹೋಗುವ ಸಂಭವವುಂಟು. ಜೇನುತುಪ್ಪವು ಸಕ್ಕರೆಯಂತೆ ಹರಳಿನ ರೂಪ ತಾಳಿದಾಗ, ಸೀಸೆಯನ್ನು ಬೆಚ್ಚನೆಯ ನೀರಿನಲ್ಲಿಟ್ಟರೆ ಹರಳುಗಳು ದ್ರವೀಕರಿಸುತ್ತವೆ. ಕಲಬೆರಕೆಯ ಜೇನುತುಪ್ಪದಿಂದ ಯಾವ ಪ್ರಯೋಜನವೂ ದೊರಕಲಾರದು; ಆದುದರಿಂದ ಪ್ರಕೃತಿಸಿದ್ದ ಶುದ್ಧ ಜೇನುತುಪವನು ಸಂಗ್ರಹಿಸಬೇಕಾದುದು ಅತಿಮುಖ್ಯ.

ಜೇನುತುಪ್ಪವು ಲಘು ವಿರೇಚಕ ಗುಣವುಳ್ಳದ್ದು ಆದುದರಿಂದ ಜೇನುತುಪ್ಪವನ್ನು ಕ್ರಮಬದ್ಧವಾಗಿ ಸೇವಿಸುತ್ತಿದ್ದರೆ ಮಲಬದ್ಧತೆ ನಿವಾರಣೆಯಾಗುವುದು.ಜೇನುತುಪ್ಪವು ಕ್ಷಯರೋಗಿಗಳಿಗೂ, ಮಧುಮೇಹ ರೋಗಿಗಳಿಗೂ ಅತ್ಯುತ್ತಮವಾದ ಆಹಾರ. ಜೇನುತುಪ್ಪವನ್ನು ಸೇವಿಸುವುದರಿಂದ ರೋಗಿಯ ಶಾರೀರಕ ಕ್ರಿಯೆಗಳು ಸುಗಮವಾಗಿ ನಡೆಯುವ ಕಾರಣ ಆರೋಗ್ಯ ವೃದ್ಧಿಯಾಗುವುದು.

ಮಕ್ಕಳಿಗೆ ಹಾಲುಣಿಸಿದಾಗ ಹಾಲಿನೊಂದಿಗೆ ಜೇನನ್ನು ಕೂಡಿಸಿ ಕೊಟ್ಟರೆ ರೋಗನಿರೋಧಕ ಶಕ್ತಿಯುಂಟಾಗಿ ಬೆಳವಣಿಗೆ ಚೆನ್ನಾಗಿ ಆಗುವುದು. ಜೇನುತುಪ್ಪವನ್ನು ಹುಳುಕಡ್ಡಿ, ಇಸಬು ಇತ್ಯಾದಿ ಚರ್ಮರೋಗಗಳಲ್ಲಿ ವ್ಯಾಧಿಗ್ರಸ್ತ ಚರ್ಮದ ಮೇಲೆ ಹಚ್ಚು ವುದರಿಂದ ಗುಣ ಕಂಡುಬರುವುದು.

ಜೇನುತುಪ್ಪ ಹಚ್ಚುವುದರಿಂದ ಬಾಯಿಹುಣ್ಣು ಗುಣವಾಗುವುದು.ಜೇನುತುಪ್ಪ ಸೇವಿಸುವುದರಿಂದ ಪುಂಸತ್ವ ಹೆಚ್ಚಿ, ಸಂಭೋಗದಲ್ಲಿ ತೃಪ್ತಿ ಕಂಡುಬರುವುದು ಅನಿರೀಕ್ಷಿತವಾಗಿ ವೀರ್ಯಸ್ಟಲನವಾಗುವುದಿಲ್ಲ ಸಂಭೋಗದ ನಂತರ ಆಯಾಸ ಕಂಡುಬರುವುದಿಲ್ಲ.ವಸಡುಗಳಲ್ಲಿ ಕೀವು ತುಂಬಿಕೊಂಡರೆ, ಊತ ಮತ್ತು ನೋವು ಕಂಡುಬರುವುದು. ಅದೇ ಕಾಲಕ್ಕೆ ಪ್ರಬಲವಾದ ಹಲ್ಲುನೋವು ಕಾಣಿಸಿಕೊಳ್ಳುವುದು.

ಆ ಸಮಯದಲ್ಲಿ ವಸಡುಗಳಿಗೆ ಜೇನುತುಪ್ಪ ಹಚ್ಚಿ ಜೇನುತುಪ್ಪದಲ್ಲಿ ನೆನೆಸಿದ ಹತ್ತಿಯನ್ನು ದವಡೆಗಳಲ್ಲಿ ಇಟ್ಟುಕೊಂಡರೆ ಹಲ್ಲುನೋವು ಮತ್ತು ವಸಡುಗಳ ನೋವು ನಿವಾರಣೆಯಾಗುವುದು. ಕೀಲುಗಳು ಊತದಿಂದ ನೋಯುತ್ತಿದ್ದರೆ, ನೋಯುವ ಭಾಗಗಳಿಗೆ ಸುಣ್ಣ ಮತ್ತು ಜೇನುತುಪ್ಪ ಕಲಸಿ ಹಚ್ಚಿದರೆ ಗುಣ ಕಂಡುಬರುವುದು. ಉಳುಕಿದ ಭಾಗಗಳಿಗೂ ಈ ಮಿಶ್ರಣ ಲೇಪಿಸಿ ಪರೀಕ್ಷಿಸಿ ನೋಡಬಹುದು.

ಸುಟ್ಟಗಾಯಕ್ಕೆ ಜೇನುತುಪ್ಪ ಹಚ್ಚುವುದರಿಂದ ಉರಿ ಶಾಂತವಾಗುವುದು’ಮತ್ತು ಗಾಯ ಬೇಗ ಗುಣವಾಗುವುದು.ರಾತ್ರಿ ಮಲಗುವುದಕ್ಕೆ ಮುಂಚೆ ಒಂದು ಊಟದ ಚಮಚದಷ್ಟು ಜೇನುತುಪ್ಪ ಪ್ರತಿದಿನ ಸೇವಿಸುತ್ತಿದ್ದರೆ ಬಹುಮೂತ್ರ ರೋಗದಲ್ಲಿ ಗಮನಾರ್ಹಗುಣ ಕಂಡುಬರುವುದು.ಮಗುವಿಗೆ ಸಾಧಾರಣ ಕೆಮ್ಮು, ಜ್ವರ ಬಂದಾಗ ಒಂದು ಟೀ ಚಮಚ ತುಳಸಿ ರಸದಲ್ಲಿ ಏಳೆಂಟು ತೊಟ್ಟು ಜೇನುತುಪ್ಪ ಕೂಡಿಸಿ ಮಗುವಿಗೆ ಕುಡಿಸುವುದು ಉತ್ತಮ. ದಿನಕ್ಕೆ ಮೂರಾವರ್ತಿ ಈ ಉಪಚಾರ ಮಾಡಿದಲ್ಲಿ ಎರಡು ದಿನಗಳಲ್ಲಿ ಗುಣ ಕಂಡುಬರುವುದು.

ಸ್ಥೂಲಕಾಯರು ಒಂದು ಊಟದ ಚಮಚದಷ್ಟು ಹಳೆಯ ಜೇನುತುಪ್ಪ ವನ್ನು ಪ್ರತಿದಿನವೂ ಸೇವಿಸುತ್ತಿದ್ದರೆ ದೇಹದ ತೂಕ ಕ್ರಮೇಣ ಕಡಿಮೆಯಾಗುವುದು ನರಗಳಲ್ಲಿ ನವಚೈತನ್ಯವುಂಟಾಗುವುದು ದೈಹಿಕಶಕ್ತಿ ಹೆಚ್ಚುವುದು.ಆಯಾಸ ಮತ್ತು ಆಲಸಿಕೆ ಪರಿಹಾರವಾಗುವುದು, ಧಾರಣ ಶಕ್ತಿ ಹೆಚ್ಚುವುದು, ನಿದ್ದೆಚೆನ್ನಾ,ಗಿ ಬರುವುದು.

LEAVE A REPLY

Please enter your comment!
Please enter your name here