ಯುವತಿಯೊಂದಿಗೆ ನ’ಗ್ನ ವಿಡಿಯೋ ಕಾಲ್ ಮಾಡಿ ಸಿಲುಕಿಕೊಂಡು ತಾನೇ ಪೊಲೀಸ್ ಠಾಣೆಗೆ ಬಂದ! ಆ ಯುವತಿ ಈತನಿಗೆ ಹೇಗೆ ಮೋಸ ಮಾಡಿದ್ದಾಳೆ ನೋಡಿ.

0
2798

ಸಾಮಾಜಿಕ ಜಾಲತಾಣಗಳನ್ನು ತಮ್ಮ ಉಪಯೋಗಕ್ಕೆ ಬಳಸದೆ ಅದರ ದುರುಪಯೋಗ ಮಾಡಿಕೊಂಡರೆ ಏನೆಲ್ಲ ಅನಾಹುತ ಆಗುತ್ತದೆ ಎಂಬುದರ ಬಗ್ಗೆ ಹಲವು ಬಾರಿ ನಾವು ಮಾಹಿತಿಯನ್ನು ನೀಡಿದ್ದೇವೆ ಅದರಂತೆ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದ್ದು ಅದರ ಬಗ್ಗೆ ಇಂದು ಸಂಪೂರ್ಣ ಮಾಹಿತಿ ನೀಡಿದ್ದೇವೆ.

ಬೆಂಗಳೂರಿನಲ್ಲಿ 26 ವರ್ಷದ ಯುವಕನೊಬ್ಬ ಫೇಸ್ಬುಕ್ ಮೂಲಕ ಅಪರಿಚಿತ ಹುಡುಗಿಯ ಸ್ನೇಹವನ್ನು ಬೆಳೆಸಿದ್ದಾನೆ, ಕೆಲ ದಿನಗಳ ನಂತರ ಆಕೆಯ ಮೊಬೈಲ್ ನಂಬರ್ ಕೂಡ ಪಡೆದುಕೊಂಡಿದ್ದಾನೆ ನಂತರ ವಾಟ್ಸಪ್ ಮೂಲಕ ಇಬ್ಬರ ಚಾಟಿಂಗ್ ಶುರುವಾಗಿದೆ, ಹೀಗೆ ಚಾಟ್ ಮಾಡುತ್ತಾ ಮತ್ತಷ್ಟು ದಿನಗಳ ನಂತರ ಆಕೆಗೆ ನಗ್ನ ವಿಡಿಯೋ ಕಾಲ್ ಮಾಡಿದ್ದಾನೆ, ಆದರೆ ಆ ಅಪರಿಚಿತ ಹುಡುಗಿ ಈ ವಿಡಿಯೋ ಕಾಲನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾಳೆ ಹಾಗೂ ಈ ವಿಡಿಯೋವನ್ನು ಮತ್ತೊಬ್ಬನಿಗೆ ನೀಡಿದ್ದಾಳೆ.

ಇದಾದ ಬಳಿಕ ಯುವಕ ಈತನಿಗೆ ಹಣ ನೀಡುವಂತೆ ಬ್ಲಾಕ್ ಮೇಲ್ ಮಾಡಲು ಶುರುಮಾಡಿದ್ದಾನೆ ಅಷ್ಟೇ ಅಲ್ಲದೆ ಗೂಗಲ್ ಪೇ ಮೂಲಕ 22 ಸಾವಿರ ಹಣವನ್ನು ಪಡೆದಿದ್ದಾನೆ, ಹಾಗೂ ಎಟಿಎಂ ಕಾರ್ಡ್ ಮುಂಭಾಗದ ಫೋಟೋ ಮತ್ತು ಅದರ ಪಿನ್ ನಂಬರ್ ಅನ್ನು ಸಹ ಪಡೆದುಕೊಂಡಿದ್ದಾನೆ, ಇಷ್ಟನ್ನು ನೀಡದಿದ್ದರೆ ಈತನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದ, ಒಮ್ಮೆ ಹಣವನ್ನು ನೀಡಿದರು ಮತ್ತೊಮ್ಮೆ ಹಣವನ್ನು ನೀಡು ಎಂದು ಪೀಡಿಸಲು ಶುರು ಮಾಡಿದ್ದ, ನಂತರ ಏನು ಮಾಡಬೇಕು ಎಂದು ತಿಳಿಯದೆ ಸಂತ್ರಸ್ತ ಯುವಕ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ, ಸದ್ಯ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದು ವರದಿ ಇನ್ನಷ್ಟೇ ಬರಬೇಕಿದೆ.

LEAVE A REPLY

Please enter your comment!
Please enter your name here