ಶನಿಯು ಸೂರ್ಯ ದೇವ ನ ಪುತ್ರ ಹಾಗು ಸೂರ್ಯನ ಹೆಂಡತಿ ಛಾಯ, ನೆರಳಿನ ದೇವತೆ ಹೀಗಾಗಿ ಛಾಯಾಪುತ್ರ ಎಂದೂ ಕರೆಯಲಾಗುತ್ತದೆ, ಹಿಂದೂಗಳ ಸಾವಿನ ದೇವತೆ ಯಮ ನ ಹಿರಿಯ ಸಹೋದರ ಶನಿ, ಧರ್ಮ ಗ್ರಂಥಗಳ ಪ್ರಕಾರ ನ್ಯಾಯವನ್ನು ಒದಗಿಸುವ ದೇವರು, ಆಸಕ್ತಿಯ ವಿಷಯವೆಂದರೆ, ಸೂರ್ಯನ ಇಬ್ಬರು ಮಕ್ಕಳು ಶನಿ ಮತ್ತು ಯಮ ನ್ಯಾಯ ದೇವತೆಗಳೇ ಒಬ್ಬರು ನಮ್ಮ ಜೀವನದ ಆಗು ಹೋಗುಗಳನ್ನು ಗಮನಿಸಿ, ಶನಿಯು ಸೂಕ್ತ ರೀತಿಯ ಶಿಕ್ಷೆ ಅಥವಾ ವರವನ್ನು ಬದುಕಿರುವಾಗ ನೀಡುತ್ತಾನೆ, ಆದರೆ ಯಮನು, ಒಬ್ಬ ವ್ಯಕ್ತಿಯು ಸತ್ತ ನಂತರ ಫಲಿತಾಂಶವನ್ನು ನೀಡುತ್ತಾನೆ.
ಪುರಾಣದಲ್ಲಿ ತಿಳಿದು ಬಂದ ಒಂದು ವಿಷಯವೆಂದರೆ, ಶನಿಯು ಮಗುವಾಗಿದ್ದಾಗ ಸೂರ್ಯಗ್ರಹಣವಾಗಿತ್ತು, ಶನಿ ಬಿಟ್ಟ ಕಣ್ಣಿನಿಂದ ಮೊದಲ ಬಾರಿಗೆ ನೋಡಿದ್ದರಿಂದಾಗಿ ಹೀಗಾಗಿತ್ತು, ಶನಿಯ ಪ್ರಭಾವ ಎಂತಹದೆಂಬುದು ಜ್ಯೋತಿಷ್ಯ ಶಾಸ್ತ್ರದ ಪಟ್ಟಿಯಿಂದ ತಿಳಿಯುತ್ತದೆ. ಈತನು ಒಬ್ಬ ಮಹಾನ್ ಉಪಾಧ್ಯಾಯ. ಶನಿದೇವ ಯಾವ ವ್ಯಕ್ತಿಯು ತಪ್ಪಿನ/ಮೋಸದ ಅನ್ಯಾಯದ ಹಾದಿ ಹಿಡಿಯುತ್ತಾರೋ ಅವರಿಗೆ ಶನಿಯು ಬಹಳ ಕಷ್ಟವನ್ನು ನೀಡುತ್ತಾನೆ. ಹಿಂದೂ ಧರ್ಮಗ್ರಂಥಗಳ ಆಧಾರದ ಪ್ರಕಾರ ಶನಿಯು ತೊಂದರೆಯನ್ನು ಕೊಡುವ ದೇವರು ಹಾಗು ಒಳ್ಳೆಯವರನ್ನು ಆಶೀರ್ವದಿಸುವವನೂ ಸಹ ಆಗಿದ್ದಾನೆ.
ಶನಿಕಾಟವಿದ್ದಾಗ ತೊಂದರೆಗಳ ನಿವಾರಣೆಗಾಗಿ ಮಾರುತಿಯನ್ನು ಪೂಜಿಸುತ್ತಾರೆ, ಈ ಪೂಜಾವಿಧಿಯು ಮುಂದಿನಂತಿದೆ ಬಟ್ಟಲಿನಲ್ಲಿ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ಹದಿನಾಲ್ಕು ಕಪ್ಪು ಉದ್ದಿನ ಕಾಳುಗಳನ್ನು ಹಾಕಿ ಅದರೊಳಗೆ ತಮ್ಮ ಪ್ರತಿಬಿಂಬವನ್ನು ನೋಡಬೇಕು, ನಂತರ ಆ ಎಣ್ಣೆಯನ್ನು ಮಾರುತಿಗೆ ಅರ್ಪಿಸಬೇಕು, ಕಾಯಿಲೆಯಿರುವ ವ್ಯಕ್ತಿಯು ಮಾರುತಿಯ ದೇವಸ್ಥಾನಕ್ಕೆ ಹೋಗಲು ಸಾಧ್ಯವಿಲ್ಲದಿದ್ದರೆ, ಇದೇ ರೀತಿ ಮಾಡಬಹುದು. ಎಣ್ಣೆಯಲ್ಲಿ ಮುಖದ ಪ್ರತಿಬಿಂಬವು ಬಿದ್ದಾಗ ಕೆಟ್ಟಶಕ್ತಿಯ ಪ್ರತಿಬಿಂಬವೂ ಬೀಳುತ್ತದೆ, ಈ ಎಣ್ಣೆಯನ್ನು ಮಾರುತಿಗೆ ಅರ್ಪಿಸಿದಾಗ ಅದರಲ್ಲಿದ್ದ ಕೆಟ್ಟಶಕ್ತಿಯು ನಾಶವಾಗುತ್ತದೆ.
ನಿಜವಾದ ಗಾಣಿಗನು ಶನಿವಾರ ಎಣ್ಣೆಯನ್ನು ಮಾರುವುದಿಲ್ಲ ಏಕೆಂದರೆ ಯಾವ ಶಕ್ತಿಯ ತೊಂದರೆಯಿಂದ ಬಿಡುಗಡೆ ಹೊಂದಲು ವ್ಯಕ್ತಿಯು ಮಾರುತಿಗೆ ಎಣ್ಣೆಯನ್ನು ಅರ್ಪಿಸುತ್ತಾನೋ, ಆ ಶಕ್ತಿಯು ಆ ಎಣ್ಣೆಯನ್ನು ಮಾರುವವನಿಗೆ ತೊಂದರೆ ಕೊಡುವ ಸಾಧ್ಯತೆಯಿರುತ್ತದೆ ಆದುದರಿಂದ ಮಾರುತಿ ದೇವಸ್ಥಾನದ ಸಮೀಪದಲ್ಲಿ ಎಣ್ಣೆಯನ್ನು ಮಾರುತ್ತಿರುವವರಿಂದ ಎಣ್ಣೆಯನ್ನು ತೆಗೆದುಕೊಳ್ಳದೇ ಮನೆಯಿಂದಲೇ ಎಣ್ಣೆಯನ್ನು ತೆಗೆದುಕೊಂಡು ಹೋಗಿ ಅರ್ಪಿಸಬೇಕು.