ಭಾವನಾತ್ಮಕತೆ : ದೇವರು ನಮ್ಮ ಬದುಕಿನ ಸರ್ವಸ್ವ, ಮನೆಯಲ್ಲಿ ನಾವು ಪ್ರತಿನಿತ್ಯ ಅಡುಗೆ ಮಾಡಿ ಊಟ ಮಾಡುತ್ತೇವೆ ಅಲ್ಲವೇ.? ಹಾಗೆ ದೇವರು ನಮ್ಮ ಮನೆಯಲ್ಲಿ ಉಪವಾಸ ಇರಬಾರದು, ಹೀಗೆ ನಮ್ಮ ಭಾವನೆಗಳು ದೇವರ ಜೊತೆ ತಳಕು ಹಾಕಿಕೊಂಡಿರುತ್ತದೆ, ಪ್ರತಿನಿತ್ಯ ದೇವರ ಕೋಣೆಯಲ್ಲಿ ಹಣ್ಣು ಇಟ್ಟು ನೈವೇದ್ಯ ಮಾಡಬಹುದು.
ದೇವರು ಸರಳ, ನಿರಾಡಂಬರ, ಹೀಗಾಗಿ ಅವನಿಗೆ ಕೇವಲ ಮನೆಯಲ್ಲಿ ಇರುವ ಬೆಲ್ಲ ಹಿಟ್ಟು ಬೇಕಾದರೂ ನೈವೇದ್ಯ ಮಾಡಬಹುದು, ಒಟ್ಟಾರೆ ದೇವರ ಮನೆಯಲ್ಲಿ ಉಪವಾಸ ಇರು ವುದರಿಂದ ಅವನು ನೊಂದುಕೊಳ್ಳುತ್ತಾನೆ ಎಂದು ಶಾಸ್ತ್ರಗಳು ಹೇಳುತ್ತವೆ, ಹೀಗೆ ದೇವರು ಉಪವಾಸ ಇರುವ ಮನೆಯಲ್ಲಿ ಅಭಿವೃದ್ಧಿ ಅಸಾಧ್ಯ.
ವಾಸ್ತವಿಕತೆ : ದೇವರ ಹೆಸರಿನಲ್ಲಿ ಬದುಕು ಹಸನಾಗುತ್ತದೆ, ಆಮ್ಲಜನಕ ಹೇಗೆ ಮನುಷ್ಯನ ಪಾಲಿಗೆ ಜೀವ ವಾಯು ಅಥವಾ ಪ್ರಾಣವಾಯು ಆಗುತ್ತದೆಯೇ, ಹಾಗೆ ದೇವರಿಗೆ ನೀಡಿದ ನೈವೇದ್ಯ ಭಗವಂತನು ಸೇವನೆ ಮಾಡುವುದನ್ನು ನಾವು ನೋಡುವುದಿಲ್ಲ, ಆದರೆ ಅವನಿಗೆ ನಿವೇದನೆ ಮಾಡಿರುವ ಹಣ್ಣು ಅಥವಾ ಬೇರೆ ಪದಾರ್ಥಗಳನ್ನು ನಾವೇ ಪುನಹ ಸೇವನೆ ಮಾಡುತ್ತೇವೆ, ನೀವ್ ಇದಿಯಾ ಅನ್ನುವ ಹೆಸರಿನಲ್ಲಿ ನಾವು ತಿನ್ನುತ್ತೇವೆ.
ಈ ರೀತಿ ಮನುಷ್ಯನಿಗೆ ವಿಟಮಿನ್ ಗಳು ಲಭ್ಯ, ಮಾನಸಿಕ ಸಂತೃಪ್ತಿ ಸಹ ನೇವೇದ್ಯ ಸ್ವೀಕಾರ ಮಾಡುವುದರಿಂದ ಉಂಟಾಗುತ್ತದೆ, ಈ ರೀತಿ ನಮ್ಮ ಪರಂಪರೆಯಲ್ಲಿ ದೇವರು, ಬದುಕು ಪರಸ್ಪರ ಒಂದೇ ದಿಕ್ಕಿನಲ್ಲಿ ಸಾಗುತ್ತಿರುತ್ತದೆ, ದೇವರು ಇಲ್ಲದಿರುವ ಕಡೆ ಮನುಷ್ಯನು ಇರುವುದಿಲ್ಲ, ಆದರೆ ದೇವರು ಸರ್ವಾಂತರ್ಯಾಮಿ, ಅವನು ಇರುವ ಕಡೆ ಯಾವ ಭಯವೂ ಮನುಷ್ಯನಿಗೆ ಕಾಡುವುದಿಲ್ಲ.
ವೈಚಾರಿಕತೆ : ಮನುಷ್ಯ ನಿತ್ಯ ಜೀವನ ಕಲೆ ಮತ್ತು ವಿಜ್ಞಾನದ ನಡುವೆ ಸಾಗುತ್ತಿರುತ್ತದೆ, ಹೀಗಾಗಿ ಅವನಿಗೆ ದೇವರು ಮುಖ್ಯ, ದೇವರ ಹೆಸರಿನಲ್ಲಿ ಮಾಡುವ ಕೆಲಸಗಳು ಅಷ್ಟೇ ಮುಖ್ಯ, ಈ ರೀತಿ ಸಮತೋಲನ ಮಾಡಲು ಸಾಧ್ಯವಾಗುವ ಅವಕಾಶ ನೀಡದೆ ನಮ್ಮ ಪರಂಪರೆ.