ಹುಳುಕಡ್ಡಿ, ಇಸಬು, ಕರಪಾಣಿ ಇತ್ಯಾದಿ ಚರ್ಮ ರೋಗಗಳಿಗೆ ರಾಮಬಾಣ ಈ ಕಾಯಿ..!!

0
5556

ಜಾಪತ್ರೆ ಮತ್ತು ಜಾಯಿಕಾಯಿಗಳನ್ನು ಅಡಿಕೆಪುಡಿಯೊಂದಿಗೆ ಸೇರಿಸಿ ಬಳಸುವರು ಇದು ಲೈಂಗಿಕ ಕ್ರಿಯೆಯನ್ನು ಪ್ರಚೋದಿಸುವುದು ಜೀರ್ಣಶಕ್ತಿ ಹೆಚ್ಚಿಸುವುದು.

ದೇಹಾಲಸ್ಯದಿಂದ ಅಳುಗರೆಯುವ ಮಗುವಿಗೆ ಜೇನುತುಪ್ಪದಲ್ಲಿ ಜಾಯಿಕಾಯಿ ತೇದು ಸ್ವಲ್ಪ ಗಂಧವನ್ನು ನೆಕ್ಕಿಸಿದರೆ ಮಗು ಚೆನ್ನಾಗಿ ನಿದ್ರಿಸುವುದು.

ರೋಗಿಯ ಜೊಲ್ಲು ರಸದಲ್ಲಾಗಲಿ ಮೂತ್ರದಲ್ಲಾಗಲಿ ಜಾಯಿಕಾಯಿ ತೇದು ಆ ಗಂಧ ಹಚ್ಚಿದರೆ ಹುಳುಕಡ್ಡಿ ಇಸಬು ಕರಪಾಣಿ ಇತ್ಯಾದಿ ಚರ್ಮ ರೋಗಗಳು ಗುಣವಾಗುತ್ತವೆ.

ಅಂಗಸುಖ ಅನುಭವಿಸುವುದಕ್ಕೆ ಒಂದು ಗಂಟೆ ಮುಂಚೆ ಜೇನುತುಪ್ಪದಲ್ಲಿ ಕಲಸಿದ ಜಾಯಿಕಾಯಿ ಚೂರ್ಣ ಸೇವಿಸಿದರೆ ಲೈಂಗಿಕ ಕ್ರಿಯೆಯಲ್ಲಿ ಹೆಚ್ಚು ಉಲ್ಲಾಸ ಕಂಡುಬರುವುದು ಮತ್ತು ವೀರ್ಯ ವಿಸರ್ಜನೆ ತಡವಾಗಿ ಆಗುವುದು.

ಜಾಯಿಕಾಯಿ ಚೂರ್ಣವನ್ನು ಬಾಳೆಹಣ್ಣಿನೊಂದಿಗೆ ಸೇವಿಸಿದರೆ ಅಜೀರ್ಣದ ದೆಸೆಯಿಂದ ತಲೆದೋರುವ ಭೇದಿ ನಿಲ್ಲುವುದು.

ಒಂದು ಊಟದ ಚಮಚ ನೆಲ್ಲಿಕಾಯಿ ರಸದಲ್ಲಿ 1 ಚಿಟಿಕೆ ಜಾಯಿಕಾಯಿ ಚೂರ್ಣ ಸೇರಿಸಿ ದಿನಕ್ಕೆ ಮೂರಾವರ್ತಿಯಂತೆ ಸೇವಿಸುತ್ತಿದರೆ ಅಜೀರ್ಣ ದೈನಂದಿನ ಚಟುವಟಿಕೆಗಳಲ್ಲಿ ಅನಾಸಕ್ತಿ ಮಾನಸಿಕ ಉದ್ವೇಗ ಬಿಕ್ಕಳಿಕೆ ಮೆರಗುಳಿತನ ಈ ಲಕ್ಷಣಗಳುಳ್ಳ ರೋಗಿಗಳಲ್ಲಿ ಕ್ರಮೇಣ ಸುಧಾರಣೆ ಕಂಡುಬರುವುದು ಆದರೆ ಜಾಯಿಪತ್ರೆಯನ್ನಾಗಲಿ ಜಾಯಿಕಾಯಿಯನ್ನಾಗಲಿ ಅವಶ್ಯಕತೆಗಿಂತ ಹೆಚ್ಚು ಪ್ರಮಾಣದಲ್ಲಿ ಬಳಸಿದ್ದೇ ಆದಲ್ಲಿ ದೇಹಕ್ಕೆ ಹಾನಿಉಂಟಾಗುವುದು.

ಜಾಯಿಕಾಯಿಯನ್ನು ಚೆನ್ನಾಗಿ ಜಜ್ಜಿ ಪುಡಿ ಮಾಡಿ ಎಣ್ಣೆಯಲ್ಲಿ ಬೇಯಿಸಿಈ ಎಣ್ಣೆ ತಿಕ್ಕುವುದರಿಂದ ತಲೆಶೂಲೆ ಕೀಲು ನೋವು ಬಿಟ್ಟು ಹೋಗುವುದು ದೀರ್ಘಕಾಲದಿಂದ ಗುಣವಾಗದಿರುವ ವ್ರಣಗಳಿಗೂ ಈ ತೈಲ ಹಚ್ಚಬಹುದು.

ಜೊತೆಯಲ್ಲಿ ಇದನ್ನು ಓದಿ ತಲೆ ಹೊಟ್ಟು ನಿವಾರಣೆಗೆ ಸರಳ ಮನೆಮದ್ದು.

ಹೌದು ತಲೆಹೊಟ್ಟಿನಿಂದ ಕಿರಿಕಿರಿ ಅನುಭವಿಸುವುದು ಮಾತ್ರವಲ್ಲ, ಅದರಿಂದ ಕೂದಲು ಉದುರುವ ಸಮಸ್ಯೆ ಕೂಡ ಕಂಡು ಬರುವುದು ಮತ್ತು ಮುಜುಗರ ಉಂಟುಮಾಡುತ್ತದೆ.

ನಿಮಗೆ ತಲೆಹೊಟ್ಟು ಕಾಣಿಸಿದರೆ ಕೆಮಿಕಲ್‌ ಇರುವ ಡ್ಯಾಂಡ್ರಫ್‌ ಫ್ರೀ ಶ್ಯಾಂಪೂ ಹಾಕುವ ಬದಲು ಈ ಟಿಪ್ಸ್‌ ಪಾಲಿಸಿದರೆ ತಲೆಹೊಟ್ಟು ಸಮಸ್ಯೆಯೂ ಇರುವುದಿಲ್ಲ ಮತ್ತು ಕೂದಲಿನ ಆರೋಗ್ಯ ಮತ್ತಷ್ಟು ಹೆಚ್ಚಾಗುವುದು.

1 ನಿಮ್ಮ ಕೂದಲಿನ ಬುಡ ಒಣಗುವುದರಿಂದ ತಲೆಹೊಟ್ಟು ಸಮಸ್ಯೆ ಕಾಣಿಸುತ್ತದೆ, ಆದ್ದರಿಂದ ಕೂದಲಿಗೆ ಚೆನ್ನಾಗಿ ಎಣ್ಣೆ ಹಾಕಿ ಮಸಾಜ್‌ ಮಾಡಿ ಯಾಕೆಂದರೆ ಎಣ್ಣೆ ಹಾಕುವುದರಿಂದ ತಲೆಯ ಹೊಟ್ಟು ಸಮಸ್ಯೆ ಬಗೆಹರಿಯುವುದರ ಜೊತೆಗೆ ತಲೆ ಕೂದಲು ಸದೃಢವಾಗುತ್ತದೆ.

2 ಮೆಂತೆಯನ್ನು ರುಬ್ಬಿ ಅದನ್ನು ತಲೆಗೆ ಹಚ್ಚಿ ಒಂದು ಗಂಟೆಯ ಬಳಿಕ ಸ್ನಾನ ಮಾಡಿದರೆ ತಲೆಯಲ್ಲಿನ ಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.

3 ಒಂದು ಕಪ್‌ ಬಿಸಿ ನೀರಿಗೆ ಸ್ವಲ್ಪ ಕಹಿಬೇವಿನ ಎಲೆ ಹಾಕಿ ಮಾರನೆಯ ದಿನ ಎಲೆಯನ್ನು ತೆಗೆದು ಬಿಸಾಡಿ, ಆ ನೀರಿನಿಂದ ತಲೆ ಬುಡಕ್ಕೆ ಮಸಾಜ್‌ ಮಾಡಿ ಅರ್ಧ ಗಂಟೆಯ ಬಳಿಕ ತಲೆ ತೊಳೆಯುವುದರಿಂದ ತಲೆಹೊಟ್ಟು ಕಡಿಮೆಯಾಗುವುದರ ಜೊತೆಗೆ ತಲೆ ತುರಿಕೆ ಇದ್ದರೆ ಬೇಗನೆ ಕಡಿಮೆಯಾಗುವುದು.

4 ತಲೆಗೆ ಮೆಹಂದಿ ಹಾಕುವುದರಿಂದ ಸಹ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುವುದು.

ಈ ರೀತಿಯಾಗಿ ಅನುಸರಿಸಿದರೆ ತಲೆಯಲ್ಲಿನ ಹೊಟ್ಟು ಸಮಸ್ಯೆಯನ್ನು ನಿವಾರಿಸಿಕೊಳ್ಳ ಬಹುದಾಗಿದೆ.

LEAVE A REPLY

Please enter your comment!
Please enter your name here