ಈ ವಿಷಯ ತಿಳಿದರೆ ಇನ್ನು ಯಾವತ್ತೂ ನಿಂಬೆ ಬೀಜ ಬಿಸಾಕುವುದಿಲ್ಲ ನೀವು.. ತಪ್ಪದೆ ಓದಿ.

0
4917

ಸುಂದರ ಕೂದಲು ಯಾರಿಗೆ ಬೇಡ ಹೆಣ್ಣಾಗಲಿ ಅಥವಾ ಗಂಡಾಗಲಿ ಇಬ್ಬರು ಸಹ ಸುಂದರವಾದ ಕೇಶ ವಿನ್ಯಾಸ ಮಾಡಿಸುತ್ತಾರೆ ಹಾಗು ವರ್ಣರಂಜಿತ ಡೈ ಸಹ ಮಾಡಿಸುತ್ತಾರೆ, ಕೆಲವರು ಕೂದಲ ಸ್ಟ್ರಾಟಿಲಿಂಗ್ ಇನ್ನು ಕೆಲವರು ಕರ್ಲಿ ಕೂದಲು ಹೀಗೆ ಹಲವಾರು ವಿಧಗಳು ಮತ್ತು ವಿಧಾನಗಳು, ಇದೆಲ್ಲವನ್ನು ಮಾಡಿಯೂ ನಿಮ್ಮ ಕೂದಲು ಗಟ್ಟಿಯಾಗಿ ಹಾಗು ಹೆಚ್ಚಿನ ಕಾಲ ತಲೆಯ ಮೇಲೆ ಇರಬೇಕು ಅಂದರೆ ಸ್ವಲ್ಪ ಕಷ್ಟನೇ ಅಲ್ಲವಾ.

ತಲೆಯ ತುಂಬಾ ಇರಬೇಕಾದ ಕೂದಲು ತಲೆ ಬಾಚಿದ ಕೂಡಲೇ ಬಾಚಿನೆಗೆ ಬಂದು ಬಿಡುತ್ತದೆ ಹಾಗು ಈ ಸಮಸ್ಯೆ ಪ್ರತಿ ದಿನ ಹೆಚ್ಚುತ್ತದೆ ವರೆತು ನೀವು ಯಾವುದೇ ರೀತಿಯ ಕಾಳಜಿ ಮಾಡದೆ ಇದ್ದರೆ ಕಡಿಮೆಯಾಗುವುದಿಲ್ಲ, ನಿಮಗೆ ನೆನಪಿರಬಹುದು ನಿಮ್ಮ ಪೂರ್ವಜರರ ಕೂದಲುಗಳು ಎಷ್ಟು ಉದ್ದ ಹಾಗು ದಟ್ಟವಾಗಿದ್ದವು ಆ ಸಮಯದಲ್ಲಿ ಯಾವುದೇ ರೀತಿಯ ಶಾಂಪೂ ಇರಲಿಲ್ಲ ಆದರೂ ಬಲಿಷ್ಠವಾಗೇ ಇದ್ದವು, ಇಂದು ನಿಮಗೆ ನಿಮ್ಮ ಕೂದಲನ್ನ ಬಲಿಷ್ಠ ಗೊಳಿಸುವ ಆಹಾರವನ್ನು ತಿಳಿಸುತ್ತೇವೆ.

ನಿಂಬೆ ಬೀಜ : ಇನ್ನು ಯಾವುದೇ ಉಪಯೋಗವಿಲ್ಲ ಎಂದು ಬಿಸಾಕುವ ನಿಂಬೆ ಬೀಜದ ಜೊತೆಯಲ್ಲಿ ಒಂದು ಟೀ ಚಮಚ ಕರಿಮೆಣಸು ಸೇರಿಸಿ ಚೆನ್ನಾಗಿ ರುಬ್ಬಿ ಕೂದಲಿಗೆ ಹಚ್ಚಿ ಸ್ವಲ್ಪ ಸಮಯ ಬಿತ್ತಿ ತೊಳೆಯುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.

ಹಸಿರು ತರಕಾರಿಗಳು : ಹಸಿರು ತರಕಾರಿಗಳಲ್ಲಿ ಕಬ್ಬಿಣದ ಅಂಶ ಹೆಚ್ಚಿರುತ್ತದೆ, ಇದು ನಿಮ್ಮ ಕೂದಲಿನ ಬುಡವನ್ನು ಸದೃಢ ಮಾಡುತ್ತದೆ ಹಾಗೆಯೆ ನೈಸರ್ಗಿಕವಾಗಿ ಕೂದಲು ಬೆಳೆಯಲು ವಿಟಮಿನ್ A ಮತ್ತು C ಗಳ ಅವಶ್ಯಕತೆ ಇದ್ದು ಇವುಗಳು ಹಸಿರು ತರಕಾರಿಯಲ್ಲಿ ಹೇರಳವಾಗಿ ಸಿಗುತ್ತದೆ.

ಪಾಲಾಕ್ ರಸ : ದಿನವೂ ಒಂದು ಲೋಟ ಪಾಲಾಕ್ ರಸವನ್ನು ಕುಡಿಯುವುದು ಕೂದಲು ಉದುರುವಿಕೆಯನ್ನು ನಿಯಂತ್ರಿಸುತ್ತದೆ, ಹಾಗೆಯೇ ಕೊತ್ತಬರಿಯ ಸೊಪ್ಪು ಸಹ ಸಹಕಾರಿ ಇದರ ರಸವನ್ನು ತೆಗೆದು ಕೂದಲಿಗೆ ಹಚ್ಚಿದರು ಒಳ್ಳೆ ಬೆಳವಣಿಗೆ ಯಾಗುತ್ತದೆ.

LEAVE A REPLY

Please enter your comment!
Please enter your name here