ಸಕ್ಕರೆ ಕಾಯಿಲೆ ಇದ್ದವರು ಇದನ್ನ ಒಮ್ಮೆ ತಿನ್ನಲೇ ಬೇಕು..!!

4
5785

ಇಂದು ಸಿಹಿಮೂತ್ರ ರೋಗ ಜಗತ್ತಿನ ಎಲ್ಲಾ ಭಾಗದ ಜನರನ್ನು ಕಾಡುತ್ತಿರುವ ತೀವ್ರವಾದ ಸಮಸ್ಯೆ, ಸಿಹಿ ಮೂತ್ರ ರೋಗವನ್ನು ಮಧುಮೇಹ, ಸಕ್ಕರೆ ಕಾಯಿಲೆ, ಡಯಾಬಿಟಿಸ್, ಎಂದು ಕರೆಯುವರು, ಸಿಹಿಮೂತ್ರ ರೋಗ ಯುವಕರನ್ನು ಬಹಳ ಬೇಗ ಮುತ್ತಿಕೊಂಡು ಕಾಡುತ್ತಿದೆ ಕೆಲವು ಬಾರಿ ವಂಶಪಾರಂಪರ್ಯವಾಗಿಯೂ ಕಾಡಬಹುದು ಅತಿಯಾದ ಟೆನ್ಶನ್ ವ್ಯಾಯಾಮ ರಹಿತ ಜೀವನ ಅತಿಯಾದ ಕಾಫಿ ಟೀ ಬಳಕೆ ಆಹಾರದ ವ್ಯಾಪಾರಿತ್ಯಗಳು ಸಿಹಿ ಮೂತ್ರ ರೋಗಕ್ಕೆ ಕಾರಣಗಳು.

ಉತ್ತಮವಾದ ಕಲಬೆರಕೆ ಇಲ್ಲದ ಜೇನುತುಪ್ಪವನ್ನು ಸೇವಿಸುವುದರಿಂದ ಸಕ್ಕರೆ ಕಾಯಿಲೆಯನ್ನು ದೂರ ಮಾಡಬಹುದು.

ಸಕ್ಕರೆಯನ್ನು ಬೆರೆಸದೆ ದ್ರಾಕ್ಷಿ ಹಣ್ಣಿನ ರಸವನ್ನು ಸಿಹಿಮೂತ್ರ ರೋಗಿಗಳಿಗೆ ಕೊಡುವುದರಿಂದ ರೋಗವನ್ನು ಗುಣಪಡಿಸಬಹುದು.

ಸಿಹಿಮೂತ್ರ ರೋಗಿಗಳು ಪ್ರತಿದಿನ ಎರಡು ದಿನಗಳ ಕಾಲ ಕರಿಬೇವಿನ ಸೊಪ್ಪನ್ನು ಸೇವಿಸುವುದರಿಂದ ರೋಗವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಹುದು ಊಟದ ಜೊತೆ ಕರಿಬೇವಿನ ಸೊಪ್ಪು ಬಳಕೆ ಮಾಡುವುದರಿಂದ ಸಿಹಿಮೂತ್ರ ರೋಗ ಬರದಂತೆ ತಡೆಯಬಹುದು ಹೀಗೆ ಸಿಹಿ ಮೂತ್ರವನ್ನು ತಡೆಯಬಹುದು.

ಆಲೂಗೆಡ್ಡೆಯ ಸೇವನೆಯಿಂದ ರೋಗ ಉಲ್ಬಣವಾಗುವುದು.

ಅಕ್ಕಿಯಲ್ಲಿ ತಯಾರಿಸಿದ ಪದಾರ್ಥಗಳನ್ನು ಮಿತವಾಗಿ ಸೇವಿಸಬೇಕು.

ಖಾಲಿ ಹೊಟ್ಟೆಯಲ್ಲಿ ತಾಜಾ ಟೊಮೇಟೊ ರಸಕ್ಕೆ ಕಾಳು ಮೆಣಸಿನಪುಡಿ, ಉಪ್ಪು ಬೆರೆಸಿ ಕುಡಿಯುವುದರಿಂದ ಸಕ್ಕರೆ ರೋಗ ದೂರವಾಗುವುದು.

ಹಾಗಲಕಾಯಿಯ ರಸವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಸಕ್ಕರೆ ಕಾಯಿಲೆ ದೂರವಾಗುವುದು.

ನೇರಳೆ ಹಣ್ಣಿನ ಕಾಲದಲ್ಲಿ ನೇರಳೆ ಹಣ್ಣನ್ನು ಸೇವಿಸಿ ಇದರಿಂದ ಸಿಹಿ ಮೂತ್ರ ರೋಗ ಹತೋಟಿಯಲ್ಲಿಡುವುದು.

ಬಾರ್ಲಿ ಸೇವನೆ ಸಿಹಿಮೂತ್ರ ರೋಗಿಗಳಿಗೆ ಒಳ್ಳೆಯದು ಬಾರ್ಲಿಯನ್ನು ಹುರಿದು ಪುಡಿ ಮಾಡಿಕೊಂಡು ಕಡಲೆ ಬೇಳೆ ಹಿಟ್ಟನ್ನು ಸೇರಿಸಿ ರೊಟ್ಟಿ ಮಾಡಿಕೊಂಡು ತಿನ್ನಿ.

ಪ್ರತಿನಿತ್ಯ ಅಮೃತಬಳ್ಳಿಯ ರಸವನ್ನು ಕುಡಿಯುವುದರಿಂದ ಸಿಹಿ ಮೂತ್ರ ರೋಗವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

ಕಡಲೆಬೀಜದ ಸೇವನೆಯಿಂದ ಸಿಹಿ ಮೂತ್ರ ರೋಗವನ್ನು ಹತೋಟಿಯಲ್ಲಿಟ್ಟುಕೊಳ್ಳಲುಬಹುದು.

ಸಕ್ಕರೆ ಕಾಯಿಲೆ ಪ್ರಾರ್ಥಮಿಕ ಹಂತದಲ್ಲಿರುವಾಗ ಒಂದು ಹಿಡಿ ಉದ್ದಿನ ಬೇಳೆಯನ್ನು ಮೊಳಕೆ ಕಟ್ಟಿ ಅದಕ್ಕೆ ಹಾಗಲಕಾಯಿ ರಸ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ವಾಸಿಯಾಗುವುದು.

ಮೆಂತ್ಯೆಯ ಸೇವನೆಯಿಂದ ಸಿಹಿ ಮೂತ್ರ ರೋಗವನ್ನು ದೂರ ಮಾಡಬಹುದು ಮೆಂತ್ಯ ದೋಸೆ, ಮೆಂತ್ಯ ಗೊಜ್ಜು ಮಾಡಿ ಸೇವಿಸಿ.

ಮೆಂತ್ಯ ಸೇರಿಸಿ ದೋಸೆ ಹಿಟ್ಟನ್ನು ಮಾಡಿಕೊಳ್ಳಿ ಬೇಕಾದಾಗ ಹಿಟ್ಟನ್ನು ಕಲಸಿ ದೋಸೆ ಹಾಕಿಕೊಳ್ಳಬಹುದು ಪ್ರತಿನಿತ್ಯ ದೋಸೆ ಹಾಕಿ ಕೊಡಬಹುದು ಇದು ಸಿಹಿ ಮೂತ್ರ ರೋಗಿಗಳಿಗೆ ಉತ್ತಮವಾದ ಆಹಾರ.

ಸಿಹಿ ಮೂತ್ರ ರೋಗಿಗಳಿಗೆ ಬೆಟ್ಟದ ನೆಲ್ಲಿಕಾಯಿ, ಹಾಗಲಕಾಯಿ, ನೇರಳೆ ಹಣ್ಣಿನ ಚೂರ್ಣವನ್ನು ಮಾಡಿಟ್ಟುಕೊಳ್ಳಿ, ಪ್ರತಿನಿತ್ಯ ಒಂದು ಚಮಚದಂತೆ ಸೇವಿಸುವುದರಿಂದ ಸಿಹಿಮೂತ್ರ ರೋಗ ನಮ್ಮ ಕೈ ಮೀರಿ ಹೋಗುವುದಿಲ್ಲ.

ಸಿಹಿಮೂತ್ರ ರೋಗ ಪ್ರಾರ್ಥಮಿಕ ಹಂತದಲ್ಲಿರುವಾಗ ಬೇವಿನ ಎಲೆಯನ್ನು ಬಿಡಿಸಿ ಶುಚಿಯಾಗಿ ತೊಳೆದುಕೊಂಡು ನೀರಿಗೆ ಹಾಕಿ ಕುದಿಸಿ ನೀರು ಒಂದು ಲೋಟಕ್ಕೆ ಬಂದ ನಂತರ ಕಷಾಯ ತಯಾರಾಗಿದೆ ಎಂದು ತಿಳಿದುಕೊಳ್ಳಬಹುದು, ತಣ್ಣಗಾದ ಕಷಾಯಕ್ಕೆ ಜೇನುತುಪ್ಪ ಸೇರಿಸಿ ದಿನಕ್ಕೆ ಒಂದು ಅಥವಾ ಎರಡು ಬಾರಿ ಸೇವಿಸಿ ಹೀಗೆ ಸುಮಾರು ಒಂದು ತಿಂಗಳ ಕಾಲ ಮಾಡಿ ಆಗ ರೋಗ ಉಲ್ಬಣಗೊಳ್ಳುವುದು.

4 COMMENTS

  1. ಕೊನೆಯ ಪ್ಯಾರಾದಲ್ಲಿ ರೋಗ ಉಲ್ಬಣ ವಾಗುವುದು ಎಂದು ಬರೆದಿದ್ದೀರಿ. ಅದನ್ನು
    ಉಲ್ಬಣ ವಾಗದಂತೆ ತಡೆಯುವುದು ಎಂದು ಸರಿಮಾಡಿ.

  2. ಸಿಹಿಮೂತ್ರ ರೋಗ ಪ್ರಾರ್ಥಮಿಕ ಹಂತದಲ್ಲಿರುವಾಗ ಬೇವಿನ ಎಲೆಯನ್ನು ಬಿಡಿಸಿ ಶುಚಿಯಾಗಿ ತೊಳೆದುಕೊಂಡು ನೀರಿಗೆ ಹಾಕಿ ಕುದಿಸಿ ನೀರು ಒಂದು ಲೋಟಕ್ಕೆ ಬಂದ ನಂತರ ಕಷಾಯ ತಯಾರಾಗಿದೆ ಎಂದು ತಿಳಿದುಕೊಳ್ಳಬಹುದು, ತಣ್ಣಗಾದ ಕಷಾಯಕ್ಕೆ ಜೇನುತುಪ್ಪ ಸೇರಿಸಿ ದಿನಕ್ಕೆ ಒಂದು ಅಥವಾ ಎರಡು ಬಾರಿ ಸೇವಿಸಿ ಹೀಗೆ ಸುಮಾರು ಒಂದು ತಿಂಗಳ ಕಾಲ ಮಾಡಿ ಆಗ ರೋಗ ಉಲ್ಬಣಗೊಳ್ಳುವುದು

    ಉಲ್ಬಣಗೊಳ್ಳುವುದು? ಅಂದರೇನು…………..?

LEAVE A REPLY

Please enter your comment!
Please enter your name here