ಮೀಸೆ-ಗಡ್ಡ ತೆಗೆದರೆ ಶೈನ್ ಶೆಟ್ಟಿ ಹೇಗೆ ಕಾಣಿಸುತ್ತಾರೆ ಗೊತ್ತಾ ?

0
2782

ದೀಪಿಕಾ ಮತ್ತು ಶೈನ್ ಶೆಟ್ಟಿ ಬಿಗ್ಬಾಸ್ ಮನೆಯೊಳಗೆ ಉತ್ತಮ ಸ್ನೇಹಿತರಾಗಿದ್ದಾರೆ.ಶೈನ್ ಶೆಟ್ಟಿ ದೀಪಿಕಾರನ್ನು ಯಾವಾಗಲೂ ಆಡ ಆಡಿಸುತ್ತಾರೆ , ಗೋಳು ಹೋಯ್ದುಕೊಳ್ಳುವುದು , ರೇಗಿಸುವುದು ಇವುಗಳನ್ನೆಲ್ಲಾ ಮಾಡುತ್ತಾರೆ . ಹಾಗಿದ್ದರೂ ಇವರಿಬ್ಬರೂ ಪರಸ್ಪರ ಅರ್ಥ ಮಾಡಿಕೊಂಡಿದ್ದಾರೆ. ನಿಜವಾಗಿಯೂ ಇವರು ಪ್ರೀತಿಸುತ್ತಿದ್ದೀರಾ ? ಅನ್ನಿಸುತ್ತದೆ.

ಇನ್ನೂ ಬಿಗ್ಬಾಸ್ ನಲ್ಲಿ ತಮ್ಮ ಗಡ್ಡದಿಂದಲೇ ಹುಡುಗಿಯರ ಮನ ಗೆದ್ದಿರುವ ಮಂಗಳೂರಿನ ಶೈನ್ ಶೆಟ್ಟಿ ಗಡ್ಡ ತೆಗೆದರೆ ಹೇಗೆ ಕಾಣಿಸಬಹುದು ? ಹೌದು. ಬಿಗ್ಬಾಸ್ ಟಾಸ್ಕೋ ಅಥವಾ ದೀಪಿಕಾ ಹೇಳಿದ್ದೋ ಏನೋ ಶೈನ್ ಶೆಟ್ಟಿ ತಮ್ಮ ಪ್ರೀತಿಯ ಗಡ್ಡವನ್ನು ತೆಗೆದಿದ್ದಾರೆ.ಇಂದಿನ ಕಲರ್ಸ್ ಕನ್ನಡದ ಬಿಗ್ಬಾಸ್ ಪ್ರೋಮೋದಲಿ ಶೈನ್ ಶೆಟ್ಟಿ ಗಡ್ಡ ತೆಗೆಯುವುದನ್ನು ಹಾಗೂ ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡು ಗಾರ್ಡನ್ ಏರಿಯಾಗೆ ಬರುವುದನ್ನು ತೋರಿಸಿದ್ದಾರೆ. ಅಲ್ಲಿ ಮನೆಯ ಸದಸ್ಯರು ಕುಳಿತಿದ್ದಾರೆ.ವಾಸುಕಿ ವೈಭವ್ ಶೈನ್ ಶೆಟ್ಟಿ ಮುಖ ಮುಚ್ಚಿಕೊಂಡು ಅಲ್ಲಿಗೆ ಕರೆದುಕೊಂಡು ಬರುತ್ತಾರೆ. ಎಲ್ಲರೂ ಚಪ್ಪಾಳೆ ತಟ್ಟಿ ಶೈನ್ ಗಡ್ಡ ತೆಗೆದಿದ್ದಾರೆ ಎಂದು ಹೇಳುತ್ತಾರೆ. ಅದಕ್ಕೆ ಕೆಲವರು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಹರೀಶ್ ರಾಜ್ ಮಾತ್ರ ನಾವು ನೋಡಿದರೆ ಮಾತ್ರ ಚಪ್ಪಾಳೆ ತಟ್ಟುವುದು ಎನ್ನುತ್ತಾರೆ.ಕಡೆಗೆ ದೀಪಿಕಾ ಶೈನ್ ಗಡ್ಡ ತೆಗೆದಿರಲ್ಲ ಎನ್ನುತ್ತಾಳೆ. ಕಡೆಗೆ ಶೈನ್ ಶೆಟ್ಟಿ ಮುಖವನ್ನು ಮುಚ್ಚಿದ ಬಟ್ಟೆ ತೆಗೆಯುತ್ತಾರೆ .ಇದಿಷ್ಟೇ ಪ್ರೋಮೋದಲ್ಲಿ ತೋರಿಸಿದ್ದು.ಅವರು ಗಡ್ಡ ತೆಗೆದರಾ ? ಅಥವಾ ಹಾಗೇ ತಮಾಷೆ ಮಾಡಿದರಾ ಎನ್ನುವುದನ್ನು ತಿಳಿಯಲು ಬಿಗ್ಬಾಸ್ ಕನ್ನಡ ಶೋವನ್ನು ಇಂದು ರಾತ್ರಿ ಒಂಬತ್ತು ಗಂಟೆಗೆ ನೋಡಿ.

ಬಿಗ್ಬಾಸ್ ಇದು ಒಂದು ರಿಯಾಲಿಟಿ ಶೋ ಆಗಿದ್ದು ಇಲ್ಲಿ ಗೆಲ್ಲಲು ಸ್ಪರ್ಧಿಗಳು ಏನು ಬೇಕಾದರೂ ಮಾಡುತ್ತಾರೆ.ಪ್ರೀತಿಸುವಂತೆ ನಾಟಕ ಆಡುತ್ತಾರೆ. ಸ್ನೇಹಿತರಂತೆ ಇದ್ದವರು ಅವರನ್ನೆ ಎಲಿಮೇಷನ್’ಗೆ ಹೆಸರು ನೀಡುತ್ತಾರೆ.ಅಳುತ್ತಾರೆ.ಜೋರಾಗಿ ಕಿರುಚುತ್ತಾರೆ.ಗಲಾಟೆ ಮಾಡುತ್ತಾರೆ.ಒಟ್ಟಾರೆ ಬಿಗ್ಬಾಸ್ ಶೋ ನಿರ್ಮಾಪಕರಿಗೆ ಅವರು ಶೋಗೆ ಇರಬೇಕು ಎಂದು ಅನ್ನಿಸುವವರೆಗೆ ಆಟ ಆಡುತ್ತಾರೆ.ಮತ್ತು ಜನಗಳ ವೋಟಿಂಗ್ ಕೂಡ ಕೌಂಟ್ ಆಗುವುದನ್ನು ನಾವು ಮರೆಯುವಂತಿಲ್ಲ.

ಈ ಸಲ ಬಿಗ್ಬಾಸ್ ಮನೆಯೊಳಗೆ ಮಜಾ ಟಾಕೀಸ್’ನ ಜನಪ್ರಿಯ ನಟ ಕುರಿ ಪ್ರತಾಪ್, ಕಿರುತೆರೆ ನಟಿಯರಾದ ಭೂಮಿಕಾ ಶೆಟ್ಟಿ, ದೀಪಿಕಾ, ಶೈನ್ ಶೆಟ್ಟಿ, ಹರೀಶ್ ರಾಜ್ ಮುಂತಾದವರು ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡುತ್ತಿದ್ದಾರೆ. ಅವರಲ್ಲಿ ಕೊನೆಯವರೆಗೂ ಯಾರು ಉಳಿಯುತ್ತಾರೆ ಹಾಗೂ ಬಿಗ್ಬಾಸ್ ಟ್ರೋಫಿಯನ್ನು ಯಾರು ಗೆಲ್ಲುತ್ತಾರೆ ಎಂಬುದನ್ನು ಸ್ವಲ್ಪ ದಿನಗಳಲ್ಲಿ ಗೊತ್ತಾಗುತ್ತದೆ.

LEAVE A REPLY

Please enter your comment!
Please enter your name here