ಸಂಧ್ಯಾವಂದನೆ ಎಂದರೇನು ಹಾಗೂ ಅದನ್ನು ಆಚರಿಸುವ ಉದ್ದೇಶವಾದರೂ ಏನು..?

0
3909

ಸಂಧ್ಯಾ ಎಂದರೆ ಸಾಯಂಕಾಲ ಅಥವಾ ಸಂಜೆ, ತ್ರಿಕಾಲದಲ್ಲಿ ನಮನ ಸಲ್ಲಿಸುವ ಧಾರ್ಮಿಕ ಆಚರಣೆ ಸಂಧ್ಯಾವಂದನೆ ಎನಿಸಿಕೊಳ್ಳುವುದು, ಪ್ರಾತಃಕಾಲದಲ್ಲಿ ಗಾಯತ್ರಿಯನ್ನು, ಮಧ್ಯಾಹ್ನ ಸಾವಿತ್ರಿಯನ್ನು, ಹೊತ್ತು ಮುಳುಗುವಾಗ ಸರಸ್ವತಿಯನ್ನು ಕ್ರಮಬದ್ಧವಾಗಿ ಪೂಜಿಸಬೇಕು, ಈ ಯೋಗ ಮೇಳದಲ್ಲಿ ಆಹಾರ, ಮೈಥುನ, ನಿದ್ರೆ, ಸಂಪಾಠ, ಪ್ರಯಾಣ ಇವುಗಳು ನಿಷೇಧ ವಾಗಿರುತ್ತದೆ.

ಮಾರ್ಜನ, ಪ್ರಾಣಾಯಾಮ, ಆಚಮನ, ಪುನರ್ಮಾಜನ, ಆಘಮರ್ಷನ, ಸೂರ್ಯಪ್ಪ ಸ್ಥಾನ, ಧ್ಯಾನವಾಹನಾದಿ, ಜಪ ಇಂತಹ ಸಂದೋಪಾಸನ ಕ್ರಿಯೆಗಳನ್ನು ನೆರವೇರಿಸಬೇಕು.

ಸರಳವಾಗಿ ಹೇಳುವುದಾದರೆ ಪ್ರಾತಃ ಸಂಧ್ಯಾ ವೇಳೆಗೆ ಮುಂಜಾನೆ ಹಾಸಿಗೆ ಬಿಟ್ಟು ಏಳುವುದು, ಶೌಚ ಕರ್ಮಗಳನ್ನು ಮುಗಿಸುವುದು, ಸಮೀಪದಲ್ಲಿರುವ ಜಲಾಶಯದಲ್ಲಿ ಮಿಂದು ಬರುವುದು, ಪ್ರಾಣಾಯಾಮ ಮಾಡುವುದು, ಸೂರ್ಯ ನಮಸ್ಕಾರ ಮಾಡುವುದು, ಸುಖಾಸನದಲ್ಲಿ ಕುಳಿತು ಕೊಂಡು ಪರಮಾತ್ಮನನ್ನು ಧ್ಯಾನಿಸುವುದು, ಪ್ರಶಾಂತವಾಗಿರುವ ಬಯಲು ಪ್ರದೇಶದಲ್ಲಿ ಸುತ್ತಾಡಿ ಶುದ್ಧ ಗಾಳಿಯನ್ನು ಸೇವಿಸುವುದು, ಆತ್ಮೀಯರೊಂದಿಗೆ ಪರಸ್ಪರ ಯೋಗಕ್ಷೇಮ ಮಾಡಿಕೊಳ್ಳುವುದು, ಅನಂತ ಆಧ್ಯಾತ್ಮಿಕ ಪ್ರವಚನ, ಕೀರ್ತನ, ಭಜನೆ,ಅರ್ಚನೆ ಕಾರ್ಯಕ್ರಮಗಳನ್ನು ವೀಕ್ಷಿಸುವುದಕ್ಕೆ ಅಲ್ಲದೆ ಇತರ ಜನರನ್ನು ಕೂಡ ಆ ದಾರಿಯತ್ತ ನಡೆಸಬೇಕು.

ಈ ರೀತಿ ಇರುವ ಎಲ್ಲಾ ಸದಾಚಾರಗಳನ್ನು ಮನಗಂಡರೆ ಜೀವನದಲ್ಲಿ ಶಿಸ್ತು ಮೂಡುತ್ತದೆ, ದೇಹ ಶುದ್ಧಿ ಯಾಗುತ್ತದೆ, ಆಲಸ್ಯ ಪರಿಹಾರವಾಗುತ್ತದೆ, ಮನಸ್ಸು ನಿರ್ಮಲವಾಗುತ್ತದೆ, ಆರೋಗ್ಯಯುತವಾದ ರೆ ಆಯುಷ್ಯ ವೃದ್ಧಿ ಯಾಗುವುದು, ಸಮಾಜದಲ್ಲಿ ಆದರಾಭಿಮಾನಗಳು ಅಧಿಕವಾಗಿ ಬದುಕು ಪಾವಿತ್ರ್ಯ ಗೊಳ್ಳುವುಡು.

ನಿಮ್ಮ ಹುಟ್ಟಿದ ಸಮಯ, ಜಾತಕ, ಮುಖಲಕ್ಷಣ ನೋಡಿ ಸಂಪೂರ್ಣ ಭವಿಷ್ಯ ನುಡಿಯುತ್ತಾರೆ, ನಿಮ್ಮ ಯಾವುದೇ ಘೋರ ನಿಗೂಢ ಮತ್ತು ಗುಪ್ತ ಸಮಸ್ಯೆಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ಶತಸಿದ್ಧ ಮಾಡಿಕೊಡುತ್ತಾರೆ, ವಿಶೇಷ ಸೂಚನೆ : ( ವಶೀಕರಣ ಮಾಂತ್ರಿಕರು ) ಕರೆ ಮಾಡಿ : 9740202800

LEAVE A REPLY

Please enter your comment!
Please enter your name here