ಮನೆಯು ಸ್ವಚ್ಛವಾಗಿ ಇಲ್ಲವೆಂದರೆ ಮನುಷ್ಯನ ದೇಹ ಅಥವಾ ಮನಸ್ಸಿನ ಮೇಲೆ ಯಾವ ರೀತಿಯ ಪರಿಣಾಮಗಳು ಬೀಳಬಹುದು ಎನ್ನುವುದರ ಬಗ್ಗೆ ಯಾವುದೇ ರೀತಿಯ ಸಂಶೋಧನೆ ಮಾಡಿ ವಿಜ್ಞಾನದ ಮುಖಾಂತರ ಯಾವುದೇ ವಿಚಾರವನ್ನು ಸರಿಯಾಗಿ ನಿರ್ಧರಿಸಲಾಗಿಲ್ಲ.
ಆದರೆ ನಮ್ಮ ಹಿರಿಯರು ಅದರ ಬಗ್ಗೆ ತುಂಬಾ ಚೆನ್ನಾಗಿಯೇ ತಿಳಿದುಕೊಂಡಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ, ಪಾಶ್ಚಾತ್ಯ ವಿಜ್ಞಾನಿಗಳು ಹೇಳುವ ಸಮೀಕರಣದ ಸೂತ್ರ ಎಂದು ನಮ್ಮ ಹಿರಿಯರು ಹೇಳುವುದಿಲ್ಲ, ಆದರೆ ಕೆಲವೊಂದು ಮುಖ್ಯವಾದ ವಿಷಯಗಳನ್ನು ಅವರು ತಿಳಿದುಕೊಂಡಿದ್ದರು, ಆ ಮುಖ್ಯವಾದ ವಿಷಯಗಳನ್ನು ಇಂದು ನಿಮಗೆ ತಿಳಿಸುತ್ತೇವೆ.
ಮನೆಯಲ್ಲಿ ಕೆಲವರು ಕೆಟ್ಟದಾಗಿ ಮಾತನಾಡುವ ಅಭ್ಯಾಸವನ್ನು ಹೊಂದಿರುತ್ತಾರೆ ಇನ್ನು ಕೆಲವು ಸಲ ನಿಮಗೆ ಗೊತ್ತಿಲ್ಲದೆ ಕೆಟ್ಟ ಕೆಲಸಗಳನ್ನು ಮಾಡಿರಬಹುದು ಅಥವಾ ನಿಮ್ಮಲ್ಲಿ ಕೆಟ್ಟ ಯೋಚನೆಗಳು ಮೂಡಿರಬಹುದು, ಹೀಗೆ ನಡೆದರೆ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಗಳು ತುಂಬಿಕೊಳ್ಳುತ್ತದೆ, ಅಷ್ಟೇ ಅಲ್ಲದೆ ಹೊರಗಿನಿಂದಲೂ ಬರುವ ಸಾಧ್ಯತೆಗಳು ಹೆಚ್ಚು, ಈ ಕೆಟ್ಟ ಶಕ್ತಿಗಳು ಮನೆಯಲ್ಲಿ ಇದ್ದರೆ ಅಶಾಂತಿಯನ್ನು ಉಂಟು ಮಾಡುವುದಲ್ಲದೆ ಮನೆಯಲ್ಲಿ ಕೆಲವು ವ್ಯತ್ಯಾಸಗಳನ್ನು ಹುಟ್ಟು ಹಾಕುತ್ತವೆ.
ಈ ಕೆಟ್ಟ ಶಕ್ತಿಗಳನ್ನು ಮನೆಯಿಂದ ಹೋಗಲಾಡಿಸಲು ಪ್ರತೀದಿನ ಮನೆಯ ಕಸವನ್ನು ಗುಡಿಸಬೇಕು ಹಾಗೂ ಒಮ್ಮೆ ಮನೆಯ ನೆಲವನ್ನು ಸಂಪೂರ್ಣವಾಗಿ ವರೆಸಿ ಸ್ವಚ್ಚ ಮಾಡಬೇಕು, ಸ್ವಚ್ಛ ಭಾರತ ಸ್ಥಳಗಳಲ್ಲಿ ನಕಾರಾತ್ಮಕ ಶಕ್ತಿ ಗಳು ಇರಲು ಸಾಧ್ಯವಾಗುವುದಿಲ್ಲ, ಆದ್ದರಿಂದ ಅವು ನಿಮ್ಮ ಮನೆಯನ್ನು ಬಿಟ್ಟು ಹೊರ ಹೋಗುವ ಸಾಧ್ಯತೆಗಳು ಹೆಚ್ಚಿರುತ್ತವೆ.
ಇದರಿಂದ ನಿಮ್ಮ ಮನೆಯು ಸ್ವಚ್ಛವಾಗಿರುತ್ತದೆ ಅಷ್ಟೇ ಅಲ್ಲದೆ ಯಾವುದೇ ದುಷ್ಟ ಪರಿಣಾಮಗಳು ನಿಮ್ಮ ಮನೆಯ ಮೇಲೆ ಪ್ರಭಾವವನ್ನು ಬೀರಲು ಸಾಧ್ಯವಾಗುವುದಿಲ್ಲ, ಆರ್ಥಿಕವಾಗಿಯೂ ಮತ್ತು ಮಾನಸಿಕವಾಗಿಯೂ ನಿಮಗೆ ನೆಮ್ಮದಿ ದೊರೆಯುತ್ತದೆ.