ಎಚ್ಚರ ದೇವಸ್ಥಾನದಲ್ಲಿ ತಪ್ಪಾಗಿ ಪ್ರದಕ್ಷಣೆ ಮಾಡಿದರೆ ಏನಾಗುತ್ತೆ ಗೊತ್ತಾ..!!

0
4682

ದೇವಸ್ಥಾನಕ್ಕೆ ಭೇಟಿ ನೀಡಿದವರು ಮರೆಯದೆ ದೇವಸ್ಥಾನದ ಅಥವಾ ಗರ್ಭಗುಡಿಯ ಪ್ರದಕ್ಷಿಣೆ ಮಾಡುತ್ತಾರೆ, ಕೆಲವರು ಮೂರು ಸುತ್ತು ಸುತ್ತಿದರೆ ಇನ್ನು ಕೆಲವರು 9 ಸುತ್ತುಗಳನ್ನು ಸುತ್ತುತ್ತಾರೆ, ಈ ರೀತಿ ಪ್ರದಕ್ಷಿಣೆ ಮಾಡುವುದರ ಉದ್ದೇಶವೇನು ಹಾಗೂ ಅದರ ಲಾಭವೇನು, ಇದರ ಬಗ್ಗೆ ಇಂದು ಒಂದು ಸಣ್ಣ ಚರ್ಚೆ ಮಾಡೋಣ ಕೆಲವು ಉಪಯುಕ್ತ ವಿಚಾರಗಳನ್ನು ತಿಳಿದುಕೊಳ್ಳೋಣ.

ದೇವಸ್ಥಾನದಲ್ಲಿ ಪ್ರದಕ್ಷಿಣೆಯನ್ನು ಹಾಕುವುದರಿಂದ ದೇವರ ಎಲ್ಲ ಅಂಗಗಳಿಂದ ಹೊರತೆಗೆಯುವ ವಿವಿಧ ರೀತಿಯ ಸ್ಪಂದನಗಳನ್ನು ಭಕ್ತರು ಗ್ರಹಿಸಬಲ್ಲರು, ಇಷ್ಟೇ ಅಲ್ಲದೆ ಪ್ರದಕ್ಷಣೆ ಹಾಕುವುದರಿಂದ ಇನ್ನೂ ಲಾಭಗಳೇನು ಮುಂದೆ ತಿಳಿಸುತ್ತೇವೆ ಓದಿ.

ವಿಜ್ಞಾನಿಗಳು ಸಹ ಒಪ್ಪಿಕೊಂಡಂತೆ ದೇವರ ಮೂರ್ತಿಯಿಂದ ಸತ್ವ ಲಹರಿಗಳು ಪ್ರತಿಕ್ಷಣ ಹೊರ ಬೀಳುತ್ತಿರುತ್ತದೆ, ಹಾಗೂ ಈ ಸತ್ವಲಹರಿ ದೇವಸ್ಥಾನದ ಸುತ್ತಲೂ ಗೋಲಾಕಾರದಲ್ಲಿ ಸುತ್ತುತ್ತಿರುತ್ತವೆ, ದೇವರ ದರ್ಶನವನ್ನು ಪಡೆದ ಭಕ್ತರಿಗೆ ಜೀವದ ಸುಷುಮ್ನಾ ನಾಡಿಯು ಜಾಗೃತಗೊಳ್ಳುತ್ತದೆ, ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆಯನ್ನು ಹಾಕಿದಾಗ ಈ ಲಹರಿಗಳ ಪ್ರವಾಹವು ಪ್ರದಕ್ಷಿಣೆ ಹಾಕುವವರ ಮೇಲೆ ಆಗುತ್ತದೆ ಮತ್ತು ಅವರಿಗೆ ಅತಿ ಹೆಚ್ಚು ಪ್ರಮಾಣದಲ್ಲಿ ಈ ಸತ್ವ ಲಹರಿಗಳ ಲಾಭವಾಗುತ್ತದೆ.

ಸಾಮಾನ್ಯವಾಗಿ ನಿಮಗೆ ಅಥವಾ ನಿಮ್ಮ ಏಳಿಗೆಯನ್ನು ಸಹಿಸಿಕೊಳ್ಳದವರು ಮಾಂತ್ರಿಕರ ಸಹಾಯವನ್ನು ಪಡೆದು ಜೀವದ ಮನಸ್ಸು ಮತ್ತು ಬುದ್ಧಿಯನ್ನು ಕೇಂದ್ರವನ್ನಾಗಿಸಿ ಅವುಗಳ ಸುತ್ತಲೂ ಚಕ್ರಾಕಾರ ಪದ್ಧತಿಯಲ್ಲಿ ಕಪ್ಪು ಆವರಣವನ್ನು ನಿರ್ಮಿಸುತ್ತಾರೆ ಮತ್ತು ಆವರಣವನ್ನು ಹೆಚ್ಚಿಸುತ್ತಾ ಹೋಗುತ್ತಾರೆ, ಇದರಿಂದ ಜೀವಕ್ಕೆ ಈಶ್ವರಿ ಶಕ್ತಿಯು ಸಿಗುವುದು ನಿಂತು ಹೋಗುತ್ತದೆ, ಜೀವವು ಚಕ್ರಾಕಾರ ಪದ್ಧತಿಯಿಂದ ಪ್ರದಕ್ಷಿಣೆಯನ್ನು ಹಾಕುವುದರಿಂದ ದೇವತೆಯ ಸುತ್ತಲಿರುವ ಇಂಧನವು ಜೀವನ ಸುತ್ತಲೂ ಚಕ್ರಾಕಾರ ದಿಕ್ಕಿನಲ್ಲಿ ಗತಿಮಾನವಾಗಲು ಪ್ರಾರಂಭವಾಗುತ್ತದೆ.

ಇದರಿಂದ ಜೀವನ ಸುತ್ತಲೂ ಮಾಂತ್ರಿಕರು ಸೃಷ್ಟಿಸಿದ ಕಪ್ಪು ಆವರಣ ಹಾಗೂ ಈಶ್ವರಿ ಶಕ್ತಿ ಇವುಗಳ ನಡುವೆ ಯುದ್ಧವಾಗುತ್ತದೆ ಮತ್ತು ಕಪ್ಪು ಶಕ್ತಿಯು ವಿಘಟನೆಯಾಗಿ ಜೀವದ ಸುತ್ತಲಿರುವ ಕಪ್ಪು ವಾತವರಣ ನಾಶವಾಗುತ್ತದೆ.

LEAVE A REPLY

Please enter your comment!
Please enter your name here