ಮೈಮನಗಳಿಗೆ ಹರ್ಷವಿಲ್ಲ ಎನಿಸುತ್ತಿದೆಯೇ ಹಾಗಾದರೆ ಈ ರೀತಿ ಮಾಡಿ..!!

0
3808

ಮೈಮನಗಳಿಗೆ ಹರ್ಷವೆಲ್ಲ ಎನಿಸುತ್ತಿದೆಯೇ : ಪ್ರತಿದಿನವೂ ಸೂರ್ಯೋದಯಕ್ಕೆ ಮೊದಲೇ ಹಾಸಿಗೆ ಬಿಟ್ಟುದ್ದು ಶೌಚ ಮುಗಿಸಿ ಮುಖ ತೊಳೆದು ಕನಿಷ್ಠ ಅರ್ಧಗಂಟೆ ವಾಯು ವಿಹಾರ ಮಾಡಿ ಉಲ್ಲಾಸ ತಾನಾಗಿಯೇ ಸಿಕ್ಕಿತು.

ಬಿಕ್ಕಳಿಕೆ ನಿವಾರಣೆಗೆ : ಬಿಕ್ಕಳಿಕೆ ಬರುತ್ತಿದ್ದರೆ ತೊಗರಿಯ ಹೊಟ್ಟನ್ನು ಕೆಂಡದ ಮೇಲೆ ಹಾಕಿ ಹೊಗೆಯನ್ನು ತೆಗೆದುಕೊಳ್ಳುವುದರಿಂದ ಬಿಕ್ಕಳಿಕೆ ನಿವಾರಣೆಯಾಗುತ್ತದೆ ಈ ರೀತಿ ಪರಿಣಾಮ ಕಾಣುವವರೆಗೂ ಮಾಡುತ್ತಿರಬಹುದು.

ತೆಂಗಿನಕಾಯಿಯ ಜುಟ್ಟನ್ನು ಸುಟ್ಟು ನೀರಿನಲ್ಲಿ ಕದಡಿ ಅದರ ಕ್ಷಾರ ಕೆಳಗೆ ನಿಂತ ನಂತರ ಸ್ವಲ್ಪ ನೀರನ್ನು ಅರ್ಧ ಗಂಟೆಗೊಮ್ಮೆ ಕುಡಿಯುವುದು.

ಹುಣಸೆ ಸೊಪ್ಪನ್ನು ತಂದು ಸ್ವಚ್ಛಗೊಳಿಸಿ ಅರೆದು ಅದರ ರಸವನ್ನು ಹಿಂಡಿಕೊಂಡು ಮೂರು ನಾಲ್ಕು ಹನಿಯನ್ನು ಮೂಗಿನಲ್ಲಿ ಹಾಕುವುದರಿಂದ ಬಿಕ್ಕಳಿಕೆ ನಿವಾರಣೆಯಾಗುತ್ತದೆ ಇದನ್ನು ದಿನಕ್ಕೆ ಒಂದೆರಡು ವೇಳೆ ಒಂದೆರಡು ದಿನ ಮಾಡಬೇಕು.

ದಾಳಿಂಬೆಯ ಮೊಗ್ಗು, ತುಳಸಿ, ಗರಿಕೆ ಈ ಮೂರನ್ನು ನುಣ್ಣಗೆ ಅರೆದು ಸ್ವಚ್ಛವಾದ ಬಟ್ಟೆಯಲ್ಲಿ ಕಟ್ಟಿ ಮೂಗಿನ ಒಳಗೆ ಕೆಲ ಹನಿಗಳನ್ನು ಇರುವುದರಿಂದ ಬಿಕ್ಕಳಿಕೆ ಪರಿಹಾರವಾಗುತ್ತದೆ ಈ ಕ್ರಮ ದಿನದಲ್ಲಿ ಒಂದೆರಡು ಬಾರಿ ಅನುಸರಿಸಿ.

ರಕ್ತ ಪಿತ್ತ ನಿವಾರಣೆಗೆ : 12 ಗ್ರಾಮ್ ನಷ್ಟು ಅಳಲೇಕಾಯಿ ಸಿಪ್ಪೆಯನ್ನು ಪ್ರತಿನಿತ್ಯ ಶುದ್ಧವಾದ ಜೇನುತುಪ್ಪನೊಂದಿಗೆ ಅರೆದು ಒಂದರಿಂದ ಎರಡು ವಾರ ಸೇವಿಸುವುದರಿಂದ ರಕ್ತ ಪಿತ್ತ ನಿವಾರಣೆ ಅಗತ್ಯವಾದಲ್ಲಿ ಈ ಚಿಕಿತ್ಸೆಯನ್ನು ಮುಂದುವರಿಸಿ.

ಹಸಿಯಾದಾದ ಮಾವಿನ ಬೀಜವನ್ನು  ಅರೆದು ತೆಗೆದ ಒಂದೆರಡು ತೊಟ್ಟು ರಸವನ್ನು ನಿತ್ಯವೂ ಮೂಗಿನ ಹೊಳೆಗೆ ಹಾಕುತ್ತಿರುವುದರಿಂದ ಮುಗಿನಿಂದ ಸುರಿಯುವ ರಕ್ತಪಿತ್ತ ನಿವಾರಣೆಯಾಗುತ್ತದೆ ಹೀಗೆ ಒಂದರಿಂದ ಎರಡು ವಾರ ಮಾಡತಕ್ಕದ್ದು.

2 ರಿಂದ 3 ಅತ್ತಿಯ ಹಣ್ಣುಗಳನ್ನು ಪ್ರತಿನಿತ್ಯ ಬೆಳಿಗ್ಗೆ ಜೇನುತುಪ್ಪದೊಂದಿಗೆ ಅಥವಾ ಬೆಲ್ಲದೊಡನೆ ಸೇವಿಸುವುದರಿಂದ ರಕ್ತಪಿತ್ತ ನಿವಾರಣೆಯಾಗುತ್ತದೆ ಈ ಚಿಕಿತ್ಸೆಯನ್ನು ಕನಿಷ್ಠ ಎರಡರಿಂದ ಮೂರುವಾರಗಳದರೂ ನಡೆಸತಕ್ಕದ್ದು.

ಪ್ರತಿದಿನ ಬೆಳಗ್ಗೆ ನಾಲ್ಕಾರು ಒಣ ಖರ್ಜೂರಗಳನ್ನು ಹಾಲಿನಲ್ಲಿ ಬೇಯಿಸಿ, ತಣ್ಣಗೆ ಮಾಡಿ ಸ್ವಲ್ಪ ಜೇನುತುಪ್ಪ ಬೆರೆಸಿ ತಿನ್ನುವುದರಿಂದ ರಕ್ತ ಪಿತ್ತ ನಿವಾರಣೆಯಾಗುತ್ತದೆ ಕನಿಷ್ಠ ಎರಡರಿಂದ ಮೂರು ವಾರವಾದರೂ ಈ ಕ್ರಮವನ್ನು ಅನುಸರಿಸಬೇಕು.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here