ಎಂತಹ ಮಂಡಿ ನೋವು ಇದ್ದರು ವಾಸಿ ಮಾಡುವ ಗಿಡ ಇದು..!!

3
35962

ಹೌದು ನಿಮ್ಮಲ್ಲಿ ದೈಹಿಕ ಸಮಸ್ಯೆಗಳು ಒಂದಲ್ಲ ಒಂದು ರೀತಿಯಲ್ಲಿ ಬರುತ್ತಿರುತ್ತವೆ ಅವುಗಳನ್ನು ಹೋಗಲಾಡಿಸಲು ನಿಮ್ಮ ಮನೆಯಲ್ಲಿಯೇ ಸುಲಭವಾಗಿ ಸಿಗುವಂತ ಮನೆ ಮದ್ದು ನಿಮ್ಮ ಸಹಾಯಕ್ಕೆ ಬರುತ್ತದೆ. ನೀವು ಹಲವು ದಿನಗಳಿಂದ ಇಂತಹ ಸಮಸ್ಯೆಯಿಂದ ಬಳಲುತ್ತಿದ್ದೀರಾ ಎಂದರೆ ಈ ವಿಧಾನವನ್ನು ಮಾಡಿ ನೋಡಿ ಹಾಗು ಕೀಲು ನೋವು ಮಂಡಿ ನೋವುಗಳಿಂದ ಮುಕ್ತರಾಗಿ.

ಹೌದು ಅದ್ಯಾವುದು ಇಂತಹ ಮನೆ ಮದ್ದು ಅಂತೀರಾ?

ಪಾರಿಜಾತ ಗಿಡದ ಬಗ್ಗೆ ನೀವು ಕೇಳಿರುತ್ತೀರಾ ಇಲ್ಲ ನೋಡಿರುತ್ತೀರಾ, ಆದರೆ ಹೂ ಬಿಳಿಯ ಬಣ್ಣದಲ್ಲಿರುತ್ತದೆ, ರಾತ್ರಿ ಹೊತ್ತಿನಲ್ಲಿ ಈ ಹೂಗಳು ಬಿಡುತ್ತವೆ, ಸುಮಾರು ದೂರದವರೆಗೂ ಈ ಹೂವಿನ ಪರಿಮಳ ವಿರುತ್ತದೆ.

ಈ ಗಿಡಗಳು ಎಲ್ಲಿರುತ್ತವೆ ಅಂದುಕೊಂಡ್ರಾ ? ಮುಂದೆ ನೋಡಿ.

ದೇವಾಲಯಗಳಲ್ಲಿ ಹೆಚ್ಚಾಗಿ ಈ ಗಿಡಗಳೇ ಕಂಡು ಬರುತ್ತವೆ, ಇದರ ಎಲೆಗಳನ್ನು 6, 7 ರಷ್ಟು ತೆಗೆದುಕೊಂಡು ನುಣ್ಣಗೆ ಫೇಸ್ಟ್ ಮಾಡಿಕೊಳ್ಳಬೇಕು, ಅದನ್ನು ಒಂದು ಗ್ಲಾಸ್ ನೀರಿನಲ್ಲಿ ಚೆನ್ನಾಗಿ ಕುದಿಸಬೇಕು, ಆ ನೀರು ಅರ್ಧ ಆಗುವವರೆಗೂ ಕಷಾಯದಂತೆ ಮಾಡಿಕೊಳ್ಳಬೇಕು, ಆ ಕಷಾಯವನ್ನು ರಾತ್ರಿಯೆಲ್ಲ ಹಾಗೆಯೇ ಇಟ್ಟು ಬೆಳಿಗ್ಗೆ ತಣ್ಣಗೆ ಇರುವಾಗಲೇ ಕುಡಿಯಬೇಕು.

ಪಾರಿಜಾತ ಎಲೆಗಳ ಕಷಾಯವು, ರುಮಟಾಯಿಡ್, ಅರ್ಥರೈಟಿಸ್ ನೋವುಗಳಿಗೆ ಉತ್ತಮವಾದ ಔಷಧವಾಗಿ ಕೆಲಸ ಮಾಡುತ್ತದೆ. ಇದನ್ನು ತಯಾರಿಮಾಡಿಕೊಂಡು ಪ್ರತಿದಿನ ತೆಗೆದುಕೊಂಡರೆ ಕೇವಲ 30 ರಿಂದ 40 ದಿನಗಳಲ್ಲೇ ಎಂತಹ ಕೀಲು ನೋವು ವಾಸಿಯಾಗುತ್ತದೆ, ಮೂಳೆಗಳಲ್ಲಿ ಸವೆದುಹೋಗಿರುವ ಕಾರ್ಟಿಲೆಜ್ ಎಂಬ ಅಂಶ ಮತ್ತೆ ಉತ್ಪತ್ತಿಯಾಗುತ್ತದೆ.

ಅವುಗಳಲ್ಲದೆ ಈ ಔಷಧವು ಡೆಂಗಿ ಜ್ವರಕ್ಕೂ ಸಹ ಉಪಯುಕ್ತವಾದದ್ದು, ಡೆಂಗಿ ಕಾರಣವಾಗಿ ಬರುವ ಮೈ ನೋವುಗಳು ಗುಣಮುಖವಾಗಬೇಕೆಂದರೆ ಈ ಔಷಧವನ್ನು ಕುಡಿಯಬೇಕಾಗುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

3 COMMENTS

  1. ನಮಸ್ಕಾರ 🙏 ಧನ್ಯವಾದಗಳು 👍 ತುಂಬಾ ಚೆನ್ನಾಗಿದೆ ನೀವು ಕಳುಹಿಸಿದ ಮಾಹಿತಿ

LEAVE A REPLY

Please enter your comment!
Please enter your name here