ಸಂಬಂಧಗಳು ಮಧುರವಾಗಿರಲು ಕೆಲವು ಪರಿಣಾಮಕಾರಿ ಸಲಹೆಗಳು ಇಲ್ಲಿವೆ.

0
2245

ಸಂಬಂಧಗಳು ಮಧುರವಾಗಿರಲಿ. ಮನೆಯ ಒಳಗೆ ಹಾಗೂ ಹೊರಗೆ ಸಂಬಂಧಗಳನ್ನು ಮಧುರವಾಗಿ ಇರಿಸಿಕೊಳ್ಳಲು ಸೂತ್ರಗಳು. ನಾನೇ ದೊಡ್ಡವನು, ನಾನೇ ಹೆಚ್ಚು ತಿಳಿದವನು, ನನಗಿಂತ ಉತ್ತಮವಾದವರು ಇಲ್ಲ ಎನ್ನುವ ಅಹಂಕಾರ ಬಿಡಿ. ಮುಂದೆ ಆಗುವ ಪರಿಣಾಮವನ್ನು ಯೋಚಿಸದೇ, ವಿಷಯಕ್ಕೆ ಸಂಬಂಧಿಸದ, ಅರ್ಥವಿಲ್ಲದ ಮಾತುಗಳನ್ನು ಆಡಬೇಡಿ.

ನಾನು ಸರಿ. ನಾನು ಹೇಳುವುದೇ ಸರಿ. ನಾನು ಮಾಡಿದ್ದೇ ಸರಿ ಎಂದು ವಾದ ಮಾಡಬೇಡಿ. ಸಂಬಂಧ ಪಡದವರ ಜೊತೆಯಲ್ಲಿ ಸಂಬಂಧ ಪಡದ ವಿಷಯಗಳನ್ನು ಮಾತನಾಡಬೇಡಿ. ಮಿತಿಗಿಂತ ಅತಿಯಾಗಿ, ಅವಶ್ಯಕತೆಗಿಂತ ಅಧಿಕವಾಗಿ ಆಸೆ ಪಡಬೇಡಿ. ಬೇರೆಯವರ ಕೆಲಸ ಕಾರ್ಯಗಳನ್ನು ಮತ್ತು ಅಭಿಪ್ರಾಯಗಳನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಬೇಡಿ.

ಅಸಭ್ಯವಾಗಿ ಮಾತನಾಡುವುದು ಮತ್ತು ಅಸಭ್ಯವಾಗಿ ನಡೆದುಕೊಳ್ಳುವುದು ಬಿಡಿ. ನಾಟಕೀಯವಾಗಿ ಮಾತನಾಡುವುದು ಹಾಗೂ ನಾಟಕೀಯವಾಗಿ ನಡೆದುಕೊಳ್ಳುವುದನ್ನು ಬಿಡಿ. ಸಮಸ್ಯೆಗಳು ಎದುರಾದಾಗ ಸೂಕ್ಷ್ಮವಾಗಿ ಪರಿಹಾರ ಹುಡುಕಿಕೊಳ್ಳಿ ಹೊಂದಾಣಿಕೆ ಮಾಡಿಕೊಳ್ಳಿ. ನನ್ನದೇ ನಡೆಯಬೇಕೆಂದು ಹಠ ಹಿಡಿಯಬೇಡಿ. ಕಷ್ಟಗಳಿಂದ ಸಂಪೂರ್ಣವಾಗಿ ತಪ್ಪಿಸಿಕೊಳ್ಳಲಾಗುವುದಿಲ್ಲ; ಅವುಗಳು ಸಹಜವೆಂದು ಒಪ್ಪಿಕೊಂಡು ಅವುಗಳನ್ನು ಅನುಭವಿಸಲು ಮಾನಸಿಕವಾಗಿ ಸಿದ್ಧರಾಗಿರಿ.

ನೀವು ಕೇಳಿದ ವಿಷಯ ಸತ್ಯವೋ, ಸುಳ್ಳೋ ಎಂದು ವಿಮರ್ಶೆ ಮಾಡದೇ ಇಲ್ಲಿ ಕೇಳಿರುವುದನ್ನು ಅಲ್ಲಿ ಹೇಳಬೇಡಿ. ನಗು-ನಗುತ್ತಾ ಮುಕ್ತ ಮನದಿಂದ ಹಿತವಾಗಿ ಇತರರನ್ನು ಮಾತನಾಡಿಸಿ. ಆಡುವ ಮಾತುಗಳನ್ನು ಸರಳವಾಗಿ, ನೇರವಾಗಿ, ಮನಃಪೂರ್ವಕವಾಗಿ ಮಾತನಾಡಿ. ಎಲ್ಲರನ್ನು ಗೌರವದಿಂದ ನೋಡಿ. ಬೇರೆಯವರ ಅಭಿಪ್ರಾಯಗಳನ್ನು, ಕೆಲಸಗಳನ್ನು ಗೌರವಿಸಲು ಕಲಿಯಿರಿ.

ಕಲಹಗಳು, ಸಮಸ್ಯೆಗಳು ಏರ್ಪಟ್ಟಾಗ ಮತ್ತೊಬ್ಬರು ನಿಮ್ಮ ಹತ್ತಿರ ಬರಲಿ ಎಂದು ಕಾಯದೇ ಮಾತನಾಡಲು ನೀವೇ ಮುಂದೆ ಬನ್ನಿ : ಇತರರ ಅಲ್ಪದೋಷವನ್ನು ಸಹ ದೊಡ್ಡದು ಮಾಡಬೇಡಿ. ದೋಷಗಳು ಅಳಿಯಲಿ. ಗುಣಗಳು ಬೆಳೆಯಲಿ. ಸಂಬಂಧ ಮಧುರವಾಗಿರಲಿ.

ಹತ್ತು ನಿಮಿಷ ಮಹಿಳೆಯರ ಮುಂದೆ ಕುಳಿತರೆ. ಜೀವನ ತುಂಬಾ ಕಷ್ಟ ಅನಿಸುತ್ತೆ. ಹತ್ತು ನಿಮಿಷ ಕುಡುಕರ ಮುಂದೆ ಕುಳಿತರೆ ಜೀವನ ತುಂಬಾ ಸರಳ ಅನಿಸುತ್ತೆ. ಹತ್ತು ನಿಮಿಷ ಸಾಧು ಸನ್ಯಾಸಿಗಳ ಮುಂದೆ ಕುಳಿತರೆ ಇದ್ದಿದ್ದೆಲ್ಲ ದಾನ ಮಾಡಬೇಕು ಅನಿಸುತ್ತೆ. ಹತ್ತು ನಿಮಿಷ ನಾಯಕರ ಮುಂದೆ ಕುಳಿತರೆ ನಾವು ಓದಿದ್ದು ವ್ಯರ್ಥ ಅನಿಸುತ್ತೆ. ಹತ್ತು ನಿಮಿಷ ಜೀವ ವಿಮೆ ಮಾಡುವವರ ಮುಂದೆ ಕುಳಿತರೆ ಸತ್ತರೆ ಒಳ್ಳೆಯದು ಅನಿಸುತ್ತೆ.

ಹತ್ತು ನಿಮಿಷ ವ್ಯಾಪಾರಿಗಳ ಮುಂದೆ ಕುಳಿತರೆ ನಮ್ಮ ಗಳಿಕೆ ಯಾವುದಕ್ಕೂ ಸಾಲಲ್ಲ ಅನಿಸುತ್ತೆ. ಹತ್ತು ನಿಮಿಷ ಅಧಿಕಾರಿಗಳ ಮುಂದೆ ಕುಳಿತರೆ ಯಾಕೋ ಜಗತ್ತು ಸ್ಲೋ ಅನಿಸುತ್ತೆ. ಹತ್ತು ನಿಮಿಷ ವಿಜ್ಞಾನಿಗಳ ಮುಂದೆ ಕುಳಿತರೆ ನಾವು ಎಷ್ಟು ಅಜ್ಞಾನಿಗಳು ಅನಿಸುತ್ತೆ. ಹತ್ತು ನಿಮಿಷ ಶಿಕ್ಷಕರ ಮುಂದೆ ಕುಳಿತರೆ ನಾವು ಮಕ್ಕಳ ಹಾಗೆ ಇರಬೇಕಿತ್ತು ಅನ್ನಿಸುತ್ತೆ. ಹತ್ತು ನಿಮಿಷ ರೈತ, ಕಾರ್ಮಿಕರ ಮುಂದೆ ಕುಳಿತರೆ ನಾವು ಅವರಷ್ಟು ಕಷ್ಟ ಪಡಲ್ಲ ಅನಿಸುತ್ತೆ.

ಹತ್ತು ನಿಮಿಷ ಸೈನಿಕರ ಮುಂದೆ ಕುಳಿತರೆ ನಮ್ಮ ತ್ಯಾಗ, ಸೇವೆ ಅವರ ಮುಂದೆ ಏನು ಅಲ್ಲ ಅನಿಸುತ್ತೆ. ಈ ಎಲ್ಲಾ ವಿಚಾರಗಳನ್ನು ಅರಿತು ಮನದಲ್ಲಿ ಇಟ್ಟುಕೊಂಡರೆ ನಾವು ಎಲ್ಲರಿಗೂ ಗೌರವ ಕೊಡುವುದನ್ನು ಕಲಿಯುತ್ತೇವೆ. ಹಾಗು ಎಲ್ಲರೂ ಅವರವರ ಮಟ್ಟಿಗೆ ಶ್ರೇಷ್ಠರೇ ಎನಿಸುತ್ತದೆ. ಮೇಲು ಕೀಳು ಎಂಬ ಭಾವನೆ ಮಾಯವಾಗುತ್ತದೆ.

LEAVE A REPLY

Please enter your comment!
Please enter your name here