26 ವರ್ಷದ ದಿಲೀಪ್ ಎನ್ನುವ ಯುವಕ 30 ವರ್ಷದ ಶಿವಾನಿ ಎನ್ನುವ ಮಂಗಳಮುಖಿಯ ಜೊತೆ ನೀನು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ತಮಿಳುನಾಡಿನ ಪುದುಚೇರಿಯ ಕಾರೈಕಲ್ ಜಿಲ್ಲೆಯಲ್ಲಿ ನಡೆದಿದೆ, ಇನ್ನು ದಿಲೀಪ್ ಶಿವಾನಿ ಏನು ಪ್ರೀತಿ ಮಾಡುತ್ತಿದ್ದನಂತೆ ಇದಕ್ಕೆ ಪೋಷಕರು ಒಪ್ಪಲಿಲ್ಲ ಕೊನೆಗೆ ಇಬ್ಬರು ಬೇರೆ ಮನೆ ಮಾಡಿ ವಾಸಮಾಡುತ್ತಿದ್ದರು, ಆದರೆ ಮನೆಯಲ್ಲಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಿಲೀಪ್ ಗೆ ಶಿವಾನಿಯ ಪರಿಚಯ 6 ತಿಂಗಳ ಹಿಂದೆ ಆಗಿತ್ತು ಆಗ ಇಬ್ಬರು ಸ್ನೇಹಿತರು ದಿನಕಳೆದಂತೆ ಪ್ರೀತಿ ಶುರುವಾಗಿದೆ ಈ ವಿಚಾರ ದಿಲೀಪ್ ಅವರ ಪೋಷಕರಿಗೆ ಗೊತ್ತಾಗಿದೆ ಇದರಿಂದ ಕೋಪಗೊಂಡ ದಿಲೀಪ್ ಪೋಷಕರು ಆತನಿಗೆ ಬೈದು ಈ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ, ಆಗ ದಿಲೀಪ್ ಶಿವಾನಿ ಇಲ್ಲದೆ ನಾನು ಬದುಕಲು ಸಾಧ್ಯವೇ ಇಲ್ಲ ಎಂದು ಮನೆಯವರ ಮುಂದೆ ಹೇಳಿ ಮನೆಬಿಟ್ಟು ಬಂದಿದ್ದಾನೆ.
ಸುಮಾರು ಒಂದು ತಿಂಗಳು ಮನೆಬಿಟ್ಟು ಬಂದಿದ್ದ ದಿಲೀಪ್ ನಂತರ ಶಿವಾನಿ ಜೊತೆ ಕಾರೇಕಲ್ ಜಿಲ್ಲೆಯ ಗ್ರಾಮದಲ್ಲಿ ಬಾಡಿಗೆ ಮನೆಯನ್ನು ಪಡೆದು ವಾಸಮಾಡಲು ಶುರುಮಾಡಿದ್ದ ಅಕ್ಕಪಕ್ಕದ ಮನೆಯವರು ಹೇಳುವ ಪ್ರಕಾರ ಇವರಿಬ್ಬರ ನಡುವೆ ಒಂದುವಾರದಿಂದ ಜಗಳ ಶುರುವಾಗಿತ್ತು, ಇದೇ ಜಗಳ ವಿಪರೀತವಾದಾಗ ರೂಮಿನ ಫ್ಯಾನಿಗೆ ನೇತು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ನಂತರ ಸ್ಥಳೀಯರೇ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ.