ಶೈನ್ ಶೆಟ್ಟಿ ಅತ್ತಿದ್ದ ಕಾರಣ ಕೇಳಿದ್ರೆ ನಿಮಗೂ ಅಳು ಬರುತ್ತೆ

0
3760

ಪ್ರತಿಯೊಬ್ಬ ಮನುಷ್ಯನಿಗೂ ಕಷ್ಟಗಳು ಬರುತ್ತವೆ. ಕಷ್ಟಗಳು ಇಲ್ಲದ ಮನುಷ್ಯನೇ ಇಲ್ಲ. ಕಷ್ಟ ,ಸುಖ ಜೀವನದ ಅವಿಭಾಜ್ಯ ಅಂಗಗಳು. ಎಷ್ಟು ಕೋಟಿ ಹಣವಿದ್ದರವರೂ ಅವರಿಗೆ ಒಂದಲ್ಲ ಒಂದು ಕೊರತೆ ,ದುಃಖ ಇರುತ್ತದೆ. ಸಾವು , ನೋವು ,ಅನಾರೋಗ್ಯ ಇವೆಲ್ಲಾ ಪ್ರತಿ ಜೀವಿಗೂ ಅನಿವಾರ್ಯವೇ. ಮನುಷ್ಯ ಸುಖವಾಗಿ ಇರುವುದೆಂದರೆ ಆ ಜೀವನ ಸಪ್ಪೆ.ಅದರಲ್ಲಿ ಯಾವುದೇ ರಸಾನುಭವ ಇರುವುದಿಲ್ಲ. ನವರಸಗಳ ಜೀವನ ಇದು.

ಇದೆಲ್ಲಾ ಯಾಕ್ ಹೇಳ್ತಿದೀವಿ ಅಂದ್ರೆ ಬಿಗ್ಬಾಸ್ ನಲ್ಲಿ ಲವ್ಲಿ ಸ್ಟಾರ್ ಶೈನ್ ಶೆಟ್ಟಿ ಗಳಗಳನೆ ಅತ್ತಿದ್ಧಾರೆ. ಅವರು ಅತ್ತ ಕಾರಣ ಕೇಳಿದ್ರೆ ಎಂತಹವರಿಗಾದರೂ ಅಳು ಬರದೇ ಇರುವುದಿಲ್ಲ. ನಾವು ಶೈನ್ ಶೆಟ್ಟಿಯನ್ನ ಹೊರಗಡೆ ನೋಡಿದರೆ ಅವರು ಯಾವಾಗಲೂ ಸಂತೋಷವಾಗಿರುತ್ತಾರೆ. ಬಹುಶಃ ಅವರು ಶ್ರೀಮಂತರು, ದುಡ್ಡಿನ ಕೊರತೆ ಇರುವುದೆ ಇಲ್ಲ. ಹಾಗಾಗಿ ಅವರು ನೆಮ್ಮದಿಯಿಂದ ಬಿಗ್ಬಾಸ್ ನಲ್ಲಿ ಬಂದಿದ್ದಾರೆ ಎಂದು ಅಂದುಕೊಂಡಿದ್ದೆವು . ಅದು ಅವರ ತಾಯಿ ಪತ್ರ ಬರೆಯುವವರೆಗೂ!

ಪ್ರತಿ ಸಲ ಬಿಗ್ಬಾಸ್ ಸೀಜನ್’ನಲ್ಲಿ ಒಂದು ದಿನ ಅವರ ಮನಡಯವರಿಂದ ಪತ್ರ ಬರೆಸುವುದು ರೂಡಿ. ಕಾರಣ ಬಹಳ ದಿನಗಳ ಕಾಲ ಅವರು ಮನೆಯವರ ಸಂಪರ್ಕದಿಂದ ದೂರ ಇರುತ್ತಾರೆ. ಅದಕ್ಕೆ ಅವರ ಪತ್ರ ಓದಿರಾದರೂ ಅವರಿಗೆ ತುಸು ಸಮಾಧಾನ ಸಿಗಲಿ ಎಂದು.

ಈ ಸಲ ಕೂಡ ಸ್ಪರ್ಧಿಗಳ ಮನೆಯವರಿಂದ ಪತ್ರಗಳು ಬಂದವು. ಅದರಲ್ಲಿ ಶೈನ್ ಶೆಟ್ಟಿಗೆ ಅವರ ತಾಯಿ ಪತ್ರ ಬರೆದಿದ್ದರು. ಅದನ್ನು ಓದಿ ಶೆಟ್ಟಿ ಗಳಗಳನೆ ಅತ್ತರು. ಏನಂತ‌ ಬರೆದಿದ್ದರು ಅಂದರೆ ಮಗಾ ನಾವಿಲ್ಲಿ ಅರಾಮಾಗಿದ್ದೀವಿ. ನೀನು ನಮ್ಮ ಚಿಂತೆ ಬಿಟ್ಟು ನಿಶ್ಚಿಂತೆಯಿಂದ ಆಡು. ಫುಡ್ ಟ್ರಕ್ ಹೋಟೆಲ್ ನ್ನು ನಾನು ನಡೆಸುತ್ತಿದ್ದೇನೆ.ಅಮ್ಮನಿಗೆ ಕೆಲಸ ಜಾಸ್ತಿಯಾಯಿತೆಂದು ನೊಂದುಕೊಳ್ಳಬೇಡ ಎಂದು ಬರೆದಿದ್ದರು. ಇದನ್ನು ಓದಿ ಶೆಟ್ಟಿಗೆ ಹಳೆಯದು ನೆನಪಿಗೆ ಬಂದಿತು.

ಇದ್ದಾಗ ಎಲ್ಲ ಸ್ನೇಹಿತರು, ಸಂಬಂಧಿಕರು ಜೊತೆಗಿದ್ದರು. ಆಗ ಧಾರಾವಾಹಿಗಳಲ್ಲಿ ಯಥೇಚ್ಛವಾಗಿ ದುಡಿಯುತ್ತಿದ್ದೆ. ದುಡ್ಡು ಚೆನ್ನಾಗಿ ಬರುತ್ತಿತ್ತು. ಯಾವಾಗ ಧಾರಾವಾಹಿ ಬಿಟ್ಟೆನೋ ಹಣ ಇಲ್ಲವಾಯಿತು. ಸ್ನೇಹಿತರು , ಬಂಧುಗಳು ದೂರವಾದರು. ನನ್ನ ತಂದೆ ತಾಯಿ ಮಾತ್ರ ನನ್ನ ಜೊತೆಗಿದ್ದರು. ಈಗ ಫುಡ್ ಟ್ರಕ್ ಹೋಟೆಲ್ ನಡೆಸುತ್ತಿದ್ದೇನೆ. ಜೀವನ ಅಂದ್ರೆ ಇದೇ ಅಲ್ಲವಾ ?! ಎಂದು ಗಳಗಳನೇ ಅತ್ತರು.

LEAVE A REPLY

Please enter your comment!
Please enter your name here