ಲವಂಗ ಅಡುಗೆಗೆ ಬಳಸುತ್ತಾರೆ ಅದು ಬಿಟ್ಟರೆ ಹಲ್ಲು ನೋವಿದ್ದರೆ ಲವಂಗ ಬಳಸಿ ಹಲ್ಲುನೋವಿನಿಂದ ಮುಕ್ತಿ ಪಡೆಯಬಹುದು ಎಂದು ಮಾತ್ರ ತಿಳಿದಿದೆ ಆದರೆ ಲವಂಗ ಬಳಸಿ ವಿವಿಧ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಎಂಬುದು ಇಲ್ಲಿದೆ ನೋಡಿ.
ಕೆಲವೊಮ್ಮೆ ಅತಿಯಾದ ಆಯಾಸದಿಂದ ಆಲಸ್ಯ ಬಂದುಬಿಡುತ್ತದೆ, ಅತಿಯಾದ ಸೋಮಾರಿತನ ಆರೋಗ್ಯಕ್ಕೆ ಹಾನಿಯುಂಟುಮಾಡುತ್ತದೆ, ಆ ಸಮಯದಲ್ಲಿ ಲವಂಗದೆಣ್ಣೆಯನ್ನು ನೀವು ಸೇವಿಸುವ ಆರೋಗ್ಯಕರ ಪಾನೀಯದೊಂದಿಗೆ ಒಂದು ಹನಿ ಸೇರಿಸಿ ಸೇವಿಸಿ. ಇದರಿಂದ ಆಲಸ್ಯ ದೂರವಾಗಿ ಚೈತನ್ಯ ಮೂಡುತ್ತದೆ.
ಲವಂಗದೆಣ್ಣೆಯನ್ನು ನೀರಿನೊಂದಿಗೆ ಮಿಶ್ರ ಮಾಡಿ ಅದನ್ನು ಮನೆಯಲ್ಲಿ ಸ್ಪ್ರೇ ಮಾಡುವುದರಿಂದ ಮನೆ ಸುಗಂಧಭರಿತವಾಗುತ್ತದೆ, ಮಳೆಗಾಲದಲ್ಲಿ ಬಟ್ಟೆಗಳು ಸರಿಯಾಗಿ ಒಣಗದೆಇರುವುದರಿಂದ ಬರುವ ದುರ್ಗಂಧ ದೂರವಾಗುತ್ತದೆ.
ಅಡುಗೆ ಮನೆಯಲ್ಲಿ ಯಾವುದಾದರೂ ಕೆಟ್ಟ ವಾಸನೆಗಳು ತುಂಬಿದ್ದರೆ ನೀರಿನಲ್ಲಿ ಲವಂಗ ಹಾಕಿ ಕುಡಿಸಿ ನೀರು ಆವಿಯಾದಂತೆಲ್ಲ ಲವಂಗದ ವಾಸನೆ ಕೆಟ್ಟ ವಾಸನೆಯನ್ನು ಹೋಗಲಾಡಿಸುತ್ತದೆ.
ಕಾಫಿ, ಚಹಾ ಹಾಲು ಇಂತವುಗಳನ್ನು ಪ್ಲಾಸ್ಕಿನಲ್ಲಿ ತೆಗೆದುಕೊಂಡು ಹೋಗಿರುತ್ತೇವೆ, ಎಷ್ಟೇ ತೊಳೆದರೂ ಅದರೊಳಗಿನ ಕೆಟ್ಟ ವಾಸನೆ ಹೋಗುವುದು ಕಷ್ಟ ಆ ಸಮಯದಲ್ಲಿ ಅದರ ಒಳಗೆ ಕೆಲವು ಲವಂಗವನ್ನು ಹಾಕಿ ಮುಚ್ಚಿಡಿ. ಬೇಕಾದಾಗ ಲವಂಗ ತೆಗೆದು ಬಳಸ ಬಹುದು ಇದರಿಂದ ಪ್ಲಾಸ್ಕಿನ ಒಳಗಿನ ದುರ್ಗಂಧ ದೂರವಾಗುತ್ತದೆ.ಚರ್ಮಕ್ಕೆ ಲವಂಗದೆಣ್ಣೆಯನ್ನು ಸ್ವಲ್ಪ ಲಠಪಿಸುವುದರಿಂದ ಚರ್ಮ ಕಾಂತಿಯುತವಾಗುತ್ತದೆ, ಸ್ವಲ್ಪ ಮಾತ್ರ ಹಚ್ಚಬೇಕು ಹೆಚ್ಚು ಹಚ್ಚಿದರೆ ಚರ್ಮಕ್ಕೆ ಹಾನಿಯಾಗುವ ಸಂಭವವಿದೆ.
ಚರ್ಮಕ್ಕೆ ಲವಂಗದೆಣ್ಣೆಯನ್ನು ಸ್ವಲ್ಪ ಲಠಪಿಸುವುದರಿಂದ ಚರ್ಮ ಕಾಂತಿಯುತವಾಗುತ್ತದೆ, ಸ್ವಲ್ಪ ಮಾತ್ರ ಹಚ್ಚಬೇಕು, ಹೆಚ್ಚು ಹಚ್ಚಿದರೆ ಚರ್ಮಕ್ಕೆ ಹಾನಿಯಾಗುವ ಸಂಭವವಿದೆ.
ನಿತ್ಯ ಲವಂಗ ಸೇವಿಸುವುದರಿಂದ ರಕ್ತದೊತ್ತಡವನ್ನು ನಿವಾರಿಸಬಹುದು, ಒಂದು ಹನಿ ಲವಂಗದೆಣ್ಣೆಯನ್ನು ದಾಲ್ಚಿನ್ನಿ ತೈಲ ಮತ್ತು ನೀರಿನೊಂದಿಗೆ ಮಿಶ್ರ ಮಾಡಿ ಮನೆಯಲ್ಲಿ ಇರುವೆಗಳು ಬಂದಾಗ ಸಿಂಪಡಿಸಿ. ಇದರಿಂದ ಇರುವೆಗಳ ಕಾಟದಿಂದ ಮುಕ್ತಿ ಪಡೆಯಬಹುದು.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.