9 ವರ್ಷದ ಮಗುವನ್ನು ಕೊಂದಿದ್ದ ಭಾರತದ ಮಲತಾಯಿಗೆ ಅಮೆರಿಕದಲ್ಲಿ ಜೀವಾವಧಿ ಶಿಕ್ಷೆ..!

0
527

ಭಾರತದ ಪಂಜಾಬ್ ಮೂಲದ ಮಲತಾಯಿ 9 ವರ್ಷದ ಮಗುವನ್ನು ಕೊಂದಿದ್ದಕ್ಕೆ ಅಮೆರಿಕಾದ ಪ್ರಿನ್ಸ್ ಸುಪ್ರೀಂಕೋರ್ಟ್ ಇಂದು ಜೀವಾವಧಿ ಶಿಕ್ಷೆ ನೀಡಿದೆ.

ಕಂಪ್ಲೀಟ್ ಸ್ಟೋರಿ : 3 ವರ್ಷಗಳ ಹಿಂದೆ 2016 ರಲ್ಲಿ ಭಾರತ ದಿಂದ ತನ್ನ ತಂದೆಯನ್ನು ನೋಡಲು 9 ವರ್ಷದ ಬಾಲಕಿ ಅಮೆರಿಕಾಗೆ ಬಂದಿದ್ದಾಗ, ಈ ಬಾಲಕಿಯನ್ನು ಕಾಪಾಡಬೇಕಿದ್ದ ಆಕೆಯ ಮಲತಾಯಿ ಬಾತ್ರೂಮ್ ನಲ್ಲಿ ಕೊಲೆ ಮಾಡಿದ್ದಳು, ಈ ಸಂಬಂಧ ಅಮೆರಿಕದ ಪೊಲೀಸರು ಆಕೆಯನ್ನು ಬಂಧಿಸಿ ದ್ದರು, ಸತತ ಮೂರು ವರ್ಷಗಳಿಂದ ಕೇಸ್ ನಡೆಯುತ್ತಲೇ ಇತ್ತು.

ದಾಖಲೆ ಕೇಳಿದ್ದು ತಪ್ಪಾಯ್ತಾ.? ಕಾಂಗ್ರೆಸ್ ನಲ್ಲಿ ಗುರುತಿಸಿ ಕೊಂಡಿರುವ ರವಿಕುಮಾರ್ ನಿಂದ, ಅಮಾಯಕ ಹೋಂ ಗಾರ್ಡ್ ಮೇಲೆ ಏಕಾಏಕಿ ಹಲ್ಲೆ.

ಅಮೆರಿಕಾದ ನ್ಯಾಯಮೂರ್ತಿಗಳಾದ ಕೆನ್ನೆತ್ ಹೋಲ್ಡರ್ ಇಂದು ಮಲತಾಯಿ ಶಾಂದೈ ಅರ್ಜುನ್ ಅವರಿಗೆ ಇಂದು ಜೀವಾವಧಿ ಶಿಕ್ಷೆಯನ್ನು ನೀಡಿದ್ದಾರೆ, ನ್ಯಾಯಮೂರ್ತಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಪ್ರಕರಣ ಭಯಾನಕ ವಾದುದು, ತನ್ನ ಮಗಳನ್ನು ರಕ್ಷಣೆ ಮಾಡಬೇಕಾದ ತಾಯಿಗೆ ಈ ರೀತಿ ಘೋರವಾಗಿ ಕೊಲೆ ಮಾಡಿರುವುದು ದೊಡ್ಡ ಅಪರಾಧವಾಗಿದೆ, ಈ ಮಹಿಳೆಗೆ ಕಾನೂನು ಚೌಕಟ್ಟಿನಲ್ಲಿ ಅತಿ ಕಠಿಣ ಶಿಕ್ಷೆ ನೀಡಬೇಕೆಂದು ವಕೀಲರು ವಾದ ಮಂಡಿಸಿದ್ದರು.

ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.

LEAVE A REPLY

Please enter your comment!
Please enter your name here