ಜಾಜಿ ಮಲ್ಲಿಗೆ ಹೂವಿನಲ್ಲಿದೆ ಇಷ್ಟೊಂದು ಅರೋಗ್ಯ ಲಾಭಗಳು..!!

0
1882
Loading...
Loading...
Loading...

ದಕ್ಷಿಣ ಏಷ್ಯಾ ಇತ್ಯಾದಿಗಳಿಗೆ ಸ್ಥಳೀಯವಾದ ಮಲ್ಲಿಗೆಯ ಒಂದು ಪ್ರಜಾತಿ. ಈ ಪ್ರಜಾತಿಯನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ, ಈ ಹೂವು ಬಿಳಿಯಾಗಿದ್ದು ತುಸು ನಸುಗೆಂಪಿನಿಂದ ಕೂಡಿದೆ. ಇದರ ತವರೂರು ಭಾರತ. ಜಾಜಿ ಹೂವು, ಎಲೆ ಹಾಗೂ ಬೇರು ಔಷಧೀಯ ಗುಣವನ್ನು ಹೊಂದಿದೆ, ಇದು ಉತ್ತರ ಹಿಮಾಲಯ, ಪಶ್ಚಿಮ ಬಂಗಾಳ, ಆಂಧ್ರದ ವಿಶಾಖಪಟ್ಟಣ, ತಮಿಳುನಾಡಿನ ತಿರುನಲ್ಲೇರಿ ಗುಡ್ಡ ಪ್ರದೇಶ ಹಾಗೂ ಸಮತಟ್ಟು ಪ್ರದೇಶಗಳಲ್ಲಿ ಸಹಜವಾಗಿ ಬೆಳೆಯುತ್ತದೆ, ಇದು ಕಡುಹಸಿರು ಬಣ್ಣದ ಚಿಕ್ಕ ಎಲೆಗಳನ್ನು ಹೊಂದಿದ್ದು, ಪೊದೆಯಾಗಿ ಅಥವಾ ಚಪ್ಪರಗಳಲ್ಲಿ ಬೆಳೆಯಬಲ್ಲ ಬಳ್ಳಿಯಾಗಿದೆ, ಇದನ್ನು ಸುಗಂಧ ದ್ರವ್ಯ ತಯಾರಿಸಲು ಬಳಸುತ್ತಾರೆ, ಈ ಹೂವುಗಳಲ್ಲಿ ಸುಗಂಧ ನೀಡುವ ಇಂಡೋಲ್ ಎಂಬ ರಾಸಾಯನಿಕ ಪದಾರ್ಥ ಇದೆ.

ಮಗುವಿಗೆ ಹಾಲುಣಿಸುವುದನ್ನು ಬಿಡಬೇಕೆಂಬ ಇಚ್ಛೆಯುಳ್ಳ ಸ್ತ್ರೀಯರು ಜಾಜಿ ಮಲ್ಲಿಗೆ ಹೂವನ್ನು ಅರೆದು ಎದೆಗೆ ಲೇಪಿಸಿಕೊಳ್ಳಬಹುದು ಇಲ್ಲವೇ ಹೂಗಳನ್ನು ತೆಳುವಾದ ಬಟ್ಟೆಯಲ್ಲಿ ಹರಡಿ ಅದನ್ನು ಎದೆಗೆ ಕಟ್ಟಿಕೊಳ್ಳಬಹುದು.

ಮಕ್ಕಳಿಗೆ ಕಜ್ಜಿ-ತುರಿಕೆಗಳಾದಾಗ ಜಜಿ ಮಲ್ಲಿಗೆ ಹೂವನ್ನು ಹಾಕಿ ತಯಾರಿಸಿದ ಎಣ್ಣೆಯನ್ನು ಹಚ್ಚಬೇಕು. ಬಾಯಿಯ ಹುಣ್ಣಿನ ತೊಂದರೆಯಿಂದ ಬಳಲುವವರು ಜಾಜಿ ಹೂವಿನ ಬಳ್ಳಿಯ ಎಲೆಗಳನ್ನು ಅಗಿದು ತಿನ್ನಬೇಕು.

ತಲೆಯಲ್ಲಿ ಹುಳಕಡ್ಡಿಯಾಗಿ ನಾಣ್ಯದಾಕಾರದಲ್ಲಿ ಕೂದಲು ಉದುರುತ್ತಿದ್ದರೆ ಜಾಜಿ ಎಲೆಯ ರಸವನ್ನು ಹಚ್ಚಿ ಆ ಜಾಗದಲ್ಲಿ ಉಜ್ಜಿಕೊಳ್ಳಬೇಕು.

ಗಾಯವಾದಾಗ ಜಾಜಿ ಎಲೆಯನ್ನು ಅರೆದು ಅದರ ಲೇಪನ ಹಾಕಬಹುದು ಇಲ್ಲವೇ ಹೂವನ್ನು ಹಾಕಿ ತಯಾರಿಸಿದ ಎಣ್ಣೆ ಹಚ್ಚಬಹುದು.

ಮುಟ್ಟು ನಿಯಮಿತವಾಗಿ ಆಗದಿದ್ದರೆ ಜಾಜಿ ಎಲೆಯ ರಸವನ್ನು ಒಂದು ಚಿಟಿಕೆ ಕಾಳುಮೆಣಸಿನ ಪುಡಿ ಮತ್ತು ಜೇನುತುಪ್ಪ ಬೆರೆಸಿ ಸೇವಿಸಬಹುದು.

ದೀರ್ಘಕಾಲಿಕ ಜ್ವರದಿಂದ ಬಳಲುವವರಿಗೆ ಜಾಜಿ ಬೇರಿನ ಕಷಾಯವನ್ನು ಕುಡಿಯಲು ಕೊಡಬಹುದು. ಕಣ್ಣುರಿ ಉಂಟಾದಾಗ ಜಾಜಿ ಹೂವಿನ ರಸದಲ್ಲಿ ಸ್ವಚ್ಛವಾದ ಬಟ್ಟೆಯನ್ನು ನೆನೆಯಿಸಿ ಆ ಬಟ್ಟೆಯನ್ನು ಕಣ್ಣಿನ ಮೇಲೆ ಹಾಕಿಕೊಳ್ಳಬೇಕು.

ವಸಡಿನಿಂದ ರಕ್ತ ಬರುತ್ತಿದ್ದರೆ ಜಾಜಿ ಎಲೆಯನ್ನು ಅಗಿದು ತಿನ್ನಬಹುದು.
ಸುಟ್ಟ ಗಾಯಗಳಿಗೆ ಜಾಜಿ ಹೂವು ಅಥವಾ ಎಲೆಗಳಿಂದ ತಯಾರಿಸಿದ ಎಣ್ಣೆಯನ್ನು ಲೇಪಿಸಿಕೊಳ್ಳಬಹುದು.

Loading...

LEAVE A REPLY

Please enter your comment!
Please enter your name here