ಭಾವನಾತ್ಮಕ : ಮುಂಗುಸಿ ಮತ್ತು ಹಾವು ಎನ್ನುವ ಪ್ರಾಣಿಗಳ ನಡುವೆ ವೈರತ್ವ ಇದೆ ಎಂದು ಪ್ರಾಚೀನ ಕಾಲದಿಂದಲೂ ಹೇಳಲಾಗುತ್ತಿದೆ, ಅನೇಕ ಬಾರಿ ಹಾವು ಮತ್ತು ಮುಂಗುಸಿ ಕಚ್ಚಾಟ ನಡೆಸಿ ಹಾವು ತನ್ನ ಜೀವ ಕಳೆದುಕೊಳ್ಳುವುದನ್ನು ಜನರು ನೋಡಿದ್ದಾರೆ, ಹಾವುಗಳ ಕಾಟ ಅಧಿಕವಾಗಿರುವ ಕಡೆ ಮುಂಗುಸಿ ತಂದು ಬಿಡುವುದು ವಾಡಿಕೆ, ಒಂದು ಸಂಗತಿ ಏನೆಂದರೆ ಪ್ರಾಚೀನ ಕಾಲದಿಂದಲೂ ಹಾವು ಮುಂಗುಸಿ ನಡುವೆ ಶತ್ರುತ್ವ ಇದೆ ಎಂದು ಹೇಳಲಾಗುತ್ತಿದೆ, ಇಬ್ಬರು ವ್ಯಕ್ತಿಗಳ ನಡುವೆ ಜಗಳ ಇದ್ದರೆ ಅಂತಹ ವ್ಯಕ್ತಿಗಳನ್ನು ಸಾಮಾನ್ಯವಾಗಿ ಹಾವು ಮುಂಗುಸಿಗೆ ಹೋಲಿಕೆ ಮಾಡುತ್ತಾರೆ.
ವಾಸ್ತವಿಕತೆ : ಹಾವು ಮುಂಗುಸಿ ನಡುವೆ ಹೋರಾಟ ನಡೆದ ಸಮಯದಲ್ಲಿ ಮುಂಗುಸಿ ಬೇಗ ಸೋಲುವುದಿಲ್ಲ, ಮುಂಗುಸಿ ಶರೀರದಲ್ಲಿ ಇರುವ ಉದ್ದನೆಯ ಕೂದಲಿಗೆ ಅತಿಯಾದ ರೋಗನಿರೋಧಕ ಶಕ್ತಿ ಇದೆ, ಹಾಗೆಯೇ ಮುಂಗುಸಿಗೆ ಆಹಾರ ಹಾವು, ಹಾಗೂ ಮುಂಗುಸಿ ಮೇಲೆ ಪ್ರಹಾರ ಮಾಡಿ ಕಚ್ಚಿದರೂ ಹಾವಿನ ವಿಷ ಮುಂಗುಸಿ ಶರೀರದಲ್ಲಿ ಹರಡುವುದಿಲ್ಲ, ಅಂತಹ ರೋಗನಿರೋಧಕ ಶಕ್ತಿ ಮುಂಗುಸಿ ಹೊಂದಿದೆ.
ಈ ಮಾತಿನ ಅರ್ಥ ಏನೆಂದರೆ ಶಕ್ತಿ ಇರುವ ವ್ಯಕ್ತಿ ಜೀವನದಲ್ಲಿ ಬಹು ಕಾಣುತ್ತಾನೆ ಎಂದು ಹೇಳಬಹುದು, ಮುಂಗುಸಿ ತನ್ನ ಆಹಾರಕ್ಕಾಗಿ ಹಾವಿನ ಜೀವ ತೆಗೆಯುತ್ತದೆ, ಹೀಗೆ ಗಟ್ಟಿ ಇರುವ ವ್ಯಕ್ತಿ ಅಥವಾ ಪ್ರಾಣಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಶಕ್ತಿಗಳಿಸಿಕೊಳ್ಳಬೇಕು ಎಂದು ವಾಸ್ತವಿಕತೆ ನಮಗೆ ಉಪದೇಶ ಮಾಡುತ್ತದೆ.
ವೈಚಾರಿಕತೆ : ನಾವು ನಮ್ಮ ಜೀವನದಲ್ಲಿ ನಮಗೆ ಅಪಾಯ ಮಾಡುವ ವ್ಯಕ್ತಿ, ಜಂತು ಅಥವಾ ಬೇರೆ ಯಾವುದೇ ರೀತಿಯ ಚರಾಚರಗಳನ್ನು ಕೊಲ್ಲಲು ಯತ್ನ ಮಾಡುತ್ತೇವೆ ಅಲ್ಲವೇ ? ಹೀಗೆ ಹಾವು ಮುಂಗುಸಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಹೋರಾಟ ನಡೆಸುತ್ತದೆ ಎಂದರೆ ತಪ್ಪಾಗಲಾರದು, ಹೋರಾಟ ಎನ್ನುವುದು ಎಲ್ಲಾ ಕಾಲದಲ್ಲಿಯೂ ಇತ್ತು ಎಂದು ತೋರಿಸಲು ಹಾವು ಮುಂಗುಸಿ ಒಳ್ಳೆಯ ಉದಾಹರಣೆ.